Helth Desk:ಸೀತಾಫಲ ಪೋಷಕಾಂಶ ಉಳ್ಳ ಹಲವಾರು ರೀತಿಯ ಕಾಯಿಲೆಗಳನ್ನು ಗುಣಪಡಿಸುವ ಔಷಧೀ ಗುಣಗಳನ್ನ ಹೊಂದಿರುತ್ತದೆ.ಚಳಿಗಾಲದಲ್ಲಿ ಹೆಚ್ಚು ಸಿಗುವಂತ ಇದರ ಎಲೆಗಳು, ತೊಗಟೆ ಮತ್ತು ಬೇರು ಎಲ್ಲವನ್ನೂ ರೋಗಗಳನ್ನ ತಡೆಗಟ್ಟಲು ಬಳಸಲಾಗುತ್ತದೆ.ಇತ್ತೀಚೆಗೆ,ಕೆಲವು ತಜ್ಞರು ತಮ್ಮ ಎಲೆಗಳು ಮಧುಮೇಹವನ್ನ ನಿಯಂತ್ರಿಸುವ ಹಾಗು ದೇಹದ ತೂಕ ಕಡಿಮೆ ಮಾಡುವ ಗುಣವನ್ನು ಹೊಂದಿವೆ ಎಂದು ಹೇಳಲಾಗುತ್ತಿದೆ.
ಚಳಿಗಾಲದಲ್ಲಿ ಸಿಗುವ ಸೀತಾಫಲ
ಚಳಿಗಾಲ ಪ್ರಾರಂಭವಾದಾಗ ಪ್ರಾಕೃತಿಕವಾಗಿ ಸಿಗುವಂತ ಸೀತಾಫಲವನ್ನ ತಿನ್ನಲು ಎಲ್ಲರೂ ಅಸೆ ಪಡುವುದು ಸಹಜ ೦ ಆದಾಗ್ಯೂ,ಮಧುಮೇಹ ಹೊಂದಿರುವ ಜನರು ಸೀತಾಫಲವನ್ನ ತಿನ್ನಬಾರದು ಎಂದು ಕೆಲ ಆಹಾರ ತಜ್ಞರು ಅಭಿಪ್ರಾಯ ಪಡುತ್ತಾರೆ.
ಪ್ರಸ್ತುತ ದಿನದಲ್ಲಿ ಮಧುಮೇಹದಿಂದ ಜನ ದೊಡ್ಡಮಟ್ಟದಲ್ಲಿ ಬಳಲುತ್ತಿದ್ದಾರೆ ಎಂದು ಹಲವು ಅಧ್ಯಯನಗಳಲ್ಲಿ ಪ್ರಸ್ತಾಪಿಸಲಾಗಿದೆ ಇದಕ್ಕೆ ಬಿಡುವಿಲ್ಲದ ಜೀವನ ಶೈಲಿ ಬದಲಾದ ಆಹಾರ ಪದ್ಧತಿಯಿಂದ ಬಹುತೇಕ ಎಲ್ಲಾ ವಯಸ್ಸಿನವರನ್ನು ಮಧುಮೇಹ ಬೀಡದೆ ಕಾಡುತ್ತಿರುವುದು ಸಾಮಾನ್ಯ.
ಹಲವು ಔಷಧಿ ಗುಣಗಳು ಇದೆ
ಆ್ಯಂಟಿಆಕ್ಸಿಡೆಂಟ್’ಗಳು, ಕ್ಯಾರಟೆನಾಯ್ಡ್’ಗಳು, ಫ್ಲೇವನಾಯ್ಡ್’ಗಳು, ವಿಟಮಿನ್ ಸಿ, ಬಿ6, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಫೈಬರ್ ಈ ಕಲ್ಲಂಗಡಿಯಲ್ಲಿ ಹೆಚ್ಚು. ಆದರೆ ಮಧುಮೇಹದಿಂದ ಬಳಲುತ್ತಿರುವವರು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಹಣ್ಣುಗಳನ್ನ ಸೇವಿಸುತ್ತಾರೆ. ಗ್ಲೈಸೆಮಿಕ್ ಇಂಡೆಕ್ಸ್ ಇರುವ ಹಣ್ಣುಗಳಲ್ಲಿ ಈ ಸೀತಾಫಲವೂ ಇದೆ. ಈ ಹಣ್ಣಿನಲ್ಲಿ ಫ್ರಕ್ಟೋಸ್ ಇರುವುದರಿಂದ ಮಧುಮೇಹಿಗಳಿಗೆ ಇದು ಒಳ್ಳೆಯದಲ್ಲ.
ಇನ್ಸುಲಿನ್ ಬಳಿಸದ ಮಧುಮೇಹಿಗಳು ಬಳಸಬಹುದು
ಆದರೆ ಇನ್ಸುಲಿನ್ ಬಳಸದ ಮಧುಮೇಹ ರೋಗಿಗಳು ಇದನ್ನು ಮಿತವಾಗಿ ತಿನ್ನಬಹುದಾಗಿದ್ದು 15 ದಿನಕ್ಕೊಮ್ಮೆ ತಿನ್ನುವುದರಿಂದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರಿಸಬಹುದು,ಹಣ್ಣುಗಳನ್ನು ಸೇವಿಸುವ ಮೊದಲು ಮತ್ತು ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ತುಂಬಾ ಒಳ್ಳೆಯದು ಜೊತೆಗೆ ನಿಯಮಿತ ವ್ಯಯಾಮ ಬೆಳಗಿನ ನಡಿಗೆ ಇದರೊಂದಿಗೆ ಅಹಾರ ತಜ್ಞರ ಸಲಹೆ ಪಡೆಯುವುದು ಉತ್ತಮ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26