ನ್ಯೂಜ್ ಡೆಸ್ಕ್:-ಪವನ್ ಕಲ್ಯಾಣ್ ನಟನೆಯ ಬಹು ನೀರಿಕ್ಷಿತ ಚಿತ್ರ ‘ವಕಿಲ್ ಸಾಬ್’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರಂತೆ
‘ವಕಿಲ್ ಸಾಬ್’ ಚಿತ್ರದಲ್ಲಿ ಪವರ್ಸ್ಟಾರ್ ಪವನ್ ಕಲ್ಯಾಣ್ ವಕೀಲರಾಗಿ ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ಈ ಚಿತ್ರದಲ್ಲಿ ತಮ್ಮ ಪಾತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಇದನ್ನು ಚಲನಚಿತ್ರ ಘಟಕ ಅಧಿಕೃತವಾಗಿ ಘೋಷಿಸಿದೆ. ಚಿತ್ರದ ಯೂನಿಟ್ ಸದಸ್ಯರು ಪವನ್ ಕಲ್ಯಾಣ್ ಜೋಗೆ ತಗೆಸಿಕೊಂಡಿರುವ ಫೋಟೋಗಳನ್ನು ಬಿಡುಗಡೆ ಮಾಡಿದೆ.
![](https://www.vcsnewz.com/wp-content/uploads/2020/12/321-2.jpg)
ಬಾಲಿವುಡ್ ಚಿತ್ರ ‘ಪಿಂಕ್’ ಚಿತ್ರದ ರಿಮೇಕ್ ಆಗಿ ತಯಾರಾಗುತ್ತಿರುವ ‘ವಕಿಲ್ ಸಾಬ್’ ಚಿತ್ರದಲ್ಲಿ ಪವನ್ ಜೋತೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದರೆ, ಅಂಜಲಿ ಮತ್ತು ನಿವೇದ ಥಾಮಸ್ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವನ್ನು ವೇಣು ಶ್ರೀರಾಮ್ ನಿರ್ಮಿಸುತ್ತಿದ್ದು, ದಿಲ್ ರಾಜು ಮತ್ತು ಬೊನೀ ಕಪೂರ್ ನಿರ್ಮಿಸುತ್ತಿದ್ದಾರೆ. ಈ ವರ್ಷ ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಕೋವಿಡ್ ಪರಿಣಾಮದಿಂದಾಗಿ ವಿಳಂಬವಾಗಿದೆ. ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದ್ದು, ಹೊಸ ವರ್ಷದ ಆರಂಭದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂಬ ವದಂತಿಗಳಿವೆ.