ಶ್ರೀನಿವಾಸಪುರ: ಕಾಯಿಲೆಗಳಿಂದ ನರಳುವಂತ ಎಷ್ಟೊ ರೋಗಿಗಳಿಗೆ ಸಮಯಕ್ಕೆ ರಕ್ತ ಸಿಗದೆ ಜೀವ ಕಳೆದುಕೊಳ್ಳುವಂತ ಪರಿಸ್ಥಿತಿ ಇದೆ, ಇಂತಹವರನ್ನು ಬದುಕಿಸಲು ಆರೋಗ್ಯವಂತರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತಧಾನ ಮಾಡುವಂತೆ ಖ್ಯಾತ ಪ್ರಸೂತಿ ತಜ್ಞರಾದ ಡಾ.ಚಂದ್ರಕಳಾ ಶ್ರೀನಿವಾಸನ್ ಕರೆ ಇತ್ತರು.
ಇಂದು ಶ್ರೀನಿವಾಸಪುರ ಪಟ್ಟಣದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ದಿವಂಗತ ಎಂ.ಶ್ರೀನಿವಾಸನ್ ರವರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ನನ್ನ ಪತಿ ಕೌನ್ಸಿಲರ್ ಎಂ.ಶ್ರೀನಿವಾಸ್ರವರು ಸಮಾಜ ಮುಖಿಯಾಗಿ ದಮನಿತರ ಧ್ವನಿಯಾಗಿದ್ದರು ಎಲ್ಲಾ ವರ್ಗದ ಜನರ ಬೆಂಬಲ ಪಡೆದಿದ್ದರು ಅವರ ಹೆಸರಿನಲ್ಲಿ ಅಭಿಮಾನಿಗಳು ಆಯೋಜಿಸಿರುವ ರಕ್ತಧಾನ ಕಾರ್ಯ ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ತಾಲೂಕಿನ ಕೊಪ್ಪವಾರಿಪಲ್ಲಿ ಮಂಜುನಾಥ ಕಟ್ಟಡಕಾರ್ಮಿಕನಾಗಿದ್ದು ಕಾರ್ಯನಿರ್ವಹಣೆ ಸಂದರ್ಭದಲ್ಲಿ ಮೃತಪಟ್ಟಿದ್ದು ಅವರಿಗೆ ಸರ್ಕಾರದಿಂದ ಬಿಡುಗಡೆಯಾದ 7.25 ಲಕ್ಷ ಪರಿಹಾರ ಹಣವನ್ನು ಕುಟುಂಬದವರಿಗೆ ನೀಡಲಾಯಿತು.
ರಕ್ತಧಾನ ಕಾರ್ಯಕ್ರಮಕ್ಕೂ ಮುಂಚಿತವಾಗಿ ಎಂ.ಶ್ರೀನಿವಾಸನ್ ಅಭಿಮಾನಿಗಳು ಹಾಗು ಕುಟುಂಬದವರು ಶ್ರೀನಿವಾಸನ್ ಸಮಾದಿಗೆ ಪೂಜೆ ಸಲ್ಲಿಸಿ,ಮುಳಬಾಗಿಲು ವೃತ್ತದಿಂದ ಶ್ರೀನಿವಾಸನ್ ರವರ ಬಾವಚಿತ್ರವನ್ನು ಪಲ್ಲಕ್ಕಿಯಲ್ಲಿ ಜಾನಪದ ತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತಂದು ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ, ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಲ್ಲೂರುಮಂಜುನಾಥ್ರೆಡ್ಡಿ,ಗೌನಿಪಲ್ಲಿನರಸಿಂಹಯ್ಯ, ಕೊಪ್ಪವಾರಿಪಲ್ಲಿವೆಂಕಟೇಶ್,ಗೌನಿಪಲ್ಲಿ ಗ್ರಾ.ಪಂ.ಅಧ್ಯಕ್ಷ ಬಕ್ಷು ಸಾಭ್, ಕನಿಗಾನಹಳ್ಳಿವೆಂಕಟೇಶ್, ಬಂದಾರ್ಲಪಲ್ಲಿ ಮುನಿಯಪ್ಪ, ಗಾಂಡ್ಲಹಳ್ಳಿ ಚಲಪತಿ, ಹೆಬ್ಬಟ ಆನಂದ್, ಕಲ್ಲೂರು ವೆಂಕಟೇಶ್ ಹಾಗು ಶ್ರೀನಿವಾಸನ್ ಕುಟುಂಬದವರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



