ಶ್ರೀನಿವಾಸಪುರ:ದೇವರ ಪೂಜೆ ಹವನ ಹೋಮ ನಮ್ಮ ಹಿರಿಕರು ಹಾಕಿಕೊಟ್ಟ ಸಂಸ್ಕೃತಿ ಎಂದು ಶ್ರೀ ಅನ್ನುಪೂರ್ಣೆಶ್ವರಿ ಮಹಿಳಾ ಮಂಡಳಿ ಪ್ರತಿನಿಧಿಗಳು ಹೇಳುತ್ತಾರೆ ಅವರು ನವರಾತ್ರಿ ಅಂಗವಾಗಿ ತಮ್ಮ ಮಂಡಳಿಯಲ್ಲಿ ದಸರ ಬೊಂಬೆ ಕೂರಿಸಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಸಂಪ್ರದಾಯದಂತೆ ನವದುರ್ಗೆ ವೈಭವ ಎನ್ನುವ ರಿತಿಯಲ್ಲಿ ಪ್ರತಿದಿನ ವೈಶಿಷ್ಠವಾಗಿ ವಿವಿಧ ರೂಪದಲ್ಲಿ ಅಲಂಕರಿಸಿ ಪೂಜೆ ಸಲ್ಲಿಸುತ್ತಾರೆ ಅದರಂತೆ ಬಾಲತ್ರಿಪುರ ಸುಂದರಿ ದೇವಿ ರೂಪದಲ್ಲೂ ಪೂಜೆ ಸಲ್ಲಿಸುವುದು ಪದ್ದತಿ ಎಂದು ಮಹಿಳಾ ಮಂಡಳಿ ಪ್ರತಿನಿಧಿ ವಿನಿತಾಶ್ರೀನಿವಾಸನ್ ಹೇಳುತ್ತಾರೆ.
ದುರ್ಗಾದೇವಿಯನ್ನು ತ್ರಿಪುರಸುಂದರಿ, ಬಾಲಾತ್ರಿಪುರ ಸುಂದರಿ, ಮತ್ತು ತ್ರಿಪುರ ಭೈರವಿ ಎಂಬ ಮೂರು ರೂಪಗಳಲ್ಲಿ ಪೂಜಿಸಲಾಗುತ್ತದೆ ತ್ರಿಪುರ ಬಾಲಾ ಸುಂದರಿ ಯುವ ಕನ್ಯೆಯ ದೇವತೆಯ ಪ್ರತಿನಿಧಿಯಾಗಿ ಸಣ್ಣ ವೈಯಸ್ಸಿನ ಹೆಣ್ಮಕ್ಕಳನ್ನು ಕೂರಿಸಿ ಅಲಂಕಾರ ಮಾಡಿ ಬಾಲ ತ್ರಿಪುರ ಸುಂದರಿ ಪ್ರತೀಕ ಎಂದು ಪೂಜೆ ಸಲ್ಲಿಸುವುದು ಹಿರಿಯರು ಹಾಕಿಕೊಟ್ಟಂತ ಆದ್ಯಾತ್ಮಿಕ ಸಂಪ್ರದಾಯ ಎಂದು ವಿವರಿಸುತ್ತಾರೆ.ಅದರಂತೆ ವೈಶಿಷ್ಠತೆಯಿಂದ ಅಲಂಕಾರ ಮಾಡಿದ ಹೆಣ್ಮಗುವನ್ನು ಕೂರಿಸಿ ಆಕೆಯನ್ನು ದೇವರೆಂದು ಪೂಜಿಸಲಾಗುತ್ತದೆ ಹಿರಿಯರಾದಿಯಾಗಿ ಆಕೆಗೆ ಪೂಜೆ ಸಲ್ಲಿಸಿ ಆಶಿರ್ವಾದ ಪಡೆಯುವುದು ವಾಡಿಕೆ.ಪೂಜಾ ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿ ಸದಸ್ಯರಾದ ವನಜಾಕ್ಷ್ಮಮ್ಮ,ಮಾಲಿನಿಸುರೇಶ್,ಸಹನಾಶಿವಕುಮಾರ್,ಧನಲಕ್ಷ್ಮಿ ಮುಂತಾದವರು ಇದ್ದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



