ಪರಷುರಾಮನ ಅನ್ವಷಣೆಯಿಂದ ಪೂಜೆ ಆರಂಭ ಶಾತವಾಹನರ ಕಾಲದ ದೇವಾಲಯ ಕಟ್ಟಡ ಉತ್ತರ ಭಾರತದಲ್ಲಿ ದೇವಾಲಯದ ದಾಖಲೆ ಶಿಶ್ನವನ್ನು ಹೋಲುವ ಲಿಂಗ ರೂಪಿ ವಿಗ್ರಹ ನ್ಯೂಜ್ ಡೆಸ್ಕ್: ಇದೊಂದು ಅಪರೂದ ವೈಶಿಷ್ಟ ಪೂರ್ವದ ಶಿವಲಿಂಗ ಇರುವ ದೇವಸ್ಥಾನ, 2ನೇ ಶತಮಾನದಲ್ಲಿ ನಿರ್ಮಿಸಿರುವ ದೇವಾಲಯದಲ್ಲಿ ಪ್ರತಿ ಸೋಮವಾರ ರಾಹುಕಾಲದಲ್ಲಿ ರುದ್ರಾಭಿಷೇಕ ಮತ್ತು ಮೃತ್ಯುಂಜಯ ಹೋಮಗಳನ್ನು ವಿಶೇಷವಾಗಿ ಮಾಡಲಾಗುತ್ತದೆ. ಅವಿವಾಹಿತರು,ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಇಲ್ಲಿ ಪೂಜೆ ಸಲ್ಲಿಸಿದರೆ ದೋಷಗಳು ನಿವಾರಣೆಯಾಗಿ ಸುಖ ಸಂತೋಷ ಸಿಗುತ್ತದೆ ಎಂಬುದು ಆಳವಾದ ನಂಬಿಕೆ.ಗುಡಿಮಲ್ಲಂ ಗ್ರಾಮದ ಶಿವನ ದೇವಾಲಯದಲ್ಲಿ ಶಿವನನ್ನು ಪರಶುರಾಮೇಶ್ವರ ಎಂದು ಪೂಜಿಸಲಾಗುತ್ತದೆ. ಇಲ್ಲಿರುವ ಶಿವಲಿಂಗ ಬಹಳ ವಿಶೇಷವಾಗಿದ್ದು ದೇವಾಲಯದಲ್ಲಿ ಗರ್ಭಗುಡಿಯು ಮುಖ ಮಂಟಪಕ್ಕಿಂತ ಕೆಳಬಾಗದಲ್ಲಿದ್ದು ಶಿವನ ಲಿಂಗ ಪುರುಷನ ಜನನಾಂಗದ ರೀತಿಯಲ್ಲಿದೆ.ಇದುವರಿಗೂ ಎಷ್ಟೊ ಆಧ್ಯನಗಳು ನಡೆದರು ಯಾವುದೆ ಅಧ್ಯಯನದಲ್ಲೂ ದೇವಾಲಯದ ಮೂಲ ಇತಿಹಾಸದ ಬಗ್ಗೆ ನಿಗೂಢ ಹೊರತೆಗೆಯಲು ಸಾಧ್ಯವಾಗಿಲ್ಲ.ಮನುಷ್ಯನ ಶಿಶ್ನವನ್ನು ಹೋಲುವ ಶಿವಲಿಂಗ. ಗುಡಿಮಲ್ಲಂ ದೇವಸ್ಥಾನದಲ್ಲಿರುವ ಶಿವಲಿಂಗ ವಿಗ್ರಹ ಮನುಷ್ಯನ ಶಿಶ್ನವನ್ನು ಹೋಲುತ್ತದೆ. ಏಳು ಅಡಿ ಎತ್ತರದ ಶೀಶ್ನಾಕಾರದ…
Author: Srinivas_Murthy
ಶ್ರೀನಿವಾಸಪುರ:ರಾಜ್ಯದಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಅಮಾನವೀಯ ಹಲ್ಲೆಗಳು ನಡೆಯುತ್ತಿದೆ ಇದು ನಿಲ್ಲಬೇಕು ಎಂದು ಶ್ರೀನಿವಾಸಪುರ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ವಕೀಲರು ಕೋರ್ಟ ಕಲಾಪ ಬಹಿಷ್ಕರಿಸಿ ತಾಲೂಕು ಕಚೇರಿ ವರೆಗು ಮೆರವಣಿಗೆ ಹೋದ ವಕೀಲರು ಇಂದಿರಾ ಭವನ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಬಳಿಕ ತಾಲೂಕು ಕಚೇರಿಗೆ ತೆರಳಿದ ವಕೀಲರು ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ರಾಜ್ಯದಲ್ಲಿ ಕೂಡಲೇ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಜಯರಾಮೇಗೌಡ, ಖಜಾಂಜಿ ವೆಂಕಟೇಶ್,ಕಾರ್ಯದರ್ಶಿ ಪಿ.ಸಿ.ನಾರಯಣಸ್ವಾಮಿ,ಸೌಭಾಗ್ಯ,ರಾಜಗೋಪಾಲರೆಡ್ಡಿ, ವಿನಯ್ ಕುಮಾರ್ ಮುಂತಾದವರು ಇದ್ದರು.
ಶ್ರೀನಿವಾಸಪುರ: ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ವಿದ್ಯಾರ್ಥಿ ದಸೆಯಲ್ಲಿ ಕಲಿಯುವ ಆಸಕ್ತಿ ವಹಿಸಿದರೆ ಭವಿಷ್ಯತ್ತಿನಲ್ಲಿ ಸಂಸ್ಕಾರವಂತ ಪ್ರಜೆಯಾಗಲು ಸಹಕಾರಿಯಾಗುತ್ತದೆ ಎಂದು ಶ್ರೀನಿವಾಸಪುರ ಸೆಂಟ್ರಲ್‌ನ ರೋಟರಿ ಅಧ್ಯಕ್ಷ ಹಾಗು ತಾ.ಪಂ ಮಾಜಿ ಸದಸ್ಯ ಮಂಜುನಾಥರೆಡ್ಡಿ ಹೇಳಿದರು.ಅವರು ತಾಲೂಕಿನ ಗಡಿಗ್ರಾಮವಾದ ಪಂಚಾಯಿತಿ ಮುಖ್ಯಕೇಂದ್ರ ಮುದಿಮೊಡಗು ಸರ್ಕಾರಿ ಪ್ರೌಢ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಆಂಗ್ಲಭಾಷ ನಿಘಂಟು ವಿತರಿಸಿ ಮಾತನಾಡಿದರು.ಸೇವೆ ಅನ್ನುವ ಪದಕ್ಕೆ ಅಂತ್ಯ ಹಾಗು ವಿರಾಮ ಇರುವುದಿಲ್ಲ ಸಮಾಜದಲ್ಲಿ ಯಾವುದೇ ರೀತಿಯಲ್ಲೂ ಸೇವೆ ಒದಗಿಸುವ ಮೂಲಕ ಸಾಮಾಜಿಕ ಕಾಳಜಿ ಹೊಂದುವ ಮೂಲಕ ವಿದ್ಯಾರ್ಥಿಗಳು ಸೇವೆ ಕುರಿತು ಆಸಕ್ತರಾಗಬೇಕು,ಶಾಲೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ರೋಟರಿ ಸಂಸ್ಥೆ ನೆರವಿಗೆ ಬರಲಿದೆ ಎಂದರು.ರೋಟರಿ ಶ್ರೀನಿವಾಸಪುರ ಸೆಂಟ್ರಲ್‌ನ ಕಾರ್ಯದರ್ಶಿ ಹಾಗು ಶಿಕ್ಷಕ ಶಿವಮೂರ್ತಿ ಮಾತನಾಡಿ ಆಂಧ್ರದ ಗಡಿಭಾಗದ ಗ್ರಾಮಗಳ ವಿದ್ಯಾರ್ಥಿಗಳಿಗೆ ಭಾಷ ಸುಲಲಿತವಾಗಿ ಮಾತನಾಡಲು ಕಲಿಯಲು ಇಂಗ್ಲೀಷ್ ನಿಘಂಟು ಪ್ರಯೋಜನವಾಗುತ್ತದೆ ಇದರಿಂದಾಗಿ ಶ್ರೀನಿವಾಸಪುರ ಸೆಂಟ್ರಲ್…
ಶ್ರೀನಿವಾಸಪುರ: ಶ್ರೀನಿವಾಸಪುರದಲ್ಲಿ ಅದೇಷ್ಟೊ ಗ್ರಾಮೀಣ ಕುಟುಂಬಗಳ ಮಕ್ಕಳಿಗೆ ಆಸರೆ ನೀಡಿ ಅನ್ನ ಶಿಕ್ಷಣ ನೀಡಿದ ಅವರು ಶ್ರೀ ಭೈರವೇಶ್ವರ ಶಿಕ್ಷಣ ಸಂಸ್ಥೆ ಸ್ಥಾಪಕರಾಗಿದ್ದ ಖ್ಯಾತ ಶಿಕ್ಷಣ ತಜ್ಞ,ಪರಿಸರ ಪ್ರೇಮಿ ಶ್ರೀನಿವಾಸಪುರ ತಾಲೂಕಿನಲ್ಲಿ ತ್ರಿದಾಹೋಹಿ ಪರಂಪರೆ ಹುಟ್ಟುಹಾಕಿದ್ದ ಇಮರಕುಂಟ ಶ್ರೀರಾಮರೆಡ್ಡಿ(84)ಮೇಷ್ಟ್ರು ಇನ್ನಿಲ್ಲ.ಹಲವಾರು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ತಡ ಸಂಜೆ ಹೃದಾಘಾತಕ್ಕೆ ಒಳಗಾಗಿದ್ದಾರೆ.ಇಮರಕುಂಟ ಮೇಷ್ಟ್ರು ಎಂದು ಗ್ರಾಮೀಣ ಭಾಗದಲ್ಲಿ ಹೆಸರು ವಾಸಿಯಾಗಿದ್ದ ಶ್ರೀರಾಮರೆಡ್ಡಿ ಪತ್ನಿ ನಂಜಮ್ಮ,ಇಬ್ಬರು ಪುತ್ರರು ಒರ್ವ ಪುತ್ರಿ ಹಾಗು ದೊಡ್ಡ ಸಂಖ್ಯೆಯಲ್ಲಿ ಶಿಷ್ಯ ವರ್ಗವನ್ನು ಅಗಲಿದ್ದಾರೆ.ಕೋಲಾರದ ಕಲಾಂ ಅಂತಲೆ ಖ್ಯಾತರಾಗಿದ್ದ ಶ್ರೀರಾಮರೆಡ್ಡಿ ಹಲವಾರು ಅವಿಷ್ಕಾರಗಳಿಗೆ ರೂಪ ಕೊಟ್ಟಂತ ಮಹಾನ್ ವ್ಯಕ್ತಿ,ಸರ್ಕಾರಿ ಸೇವೆಯಲ್ಲಿ ಶಿಕ್ಷಕರಾಗಿ ಮೂರುವರೆ ದಶಕಗಳ ಸೇವೆ ಸಲ್ಲಿಸಿ ನಿವೃತ್ತರಾದ ಅವರು 24 ವರ್ಷಗಳ ಹಿಂದೆ ಭೈರವೇಶ್ವರ ಶಿಕ್ಷಣ ಸಂಸ್ಥೆ ಕಟ್ಟಿ ಬಾನೆತ್ತರಕ್ಕೆ ಬೆಳೆಸಿ ಜಗತ್ತೆ ನನ್ನ ಕುಟುಂಬ ಎಂದು ಕುಟುಂಬವನ್ನೆ ಮರೆತು ಶಿಕ್ಷಣ ಸಂಸ್ಥೆಯಲ್ಲೆ ಜೀವನ ಕಳೆಯುತ್ತಿದ್ದರು,ಶೈಕ್ಷಣಿಕ ಕ್ಷೇತ್ರವೆ ನನ್ನ ಬದುಕು ಎಂದು ಶಿಕ್ಷಕರಾಗಿ ಸುಮಾರು…
ನ್ಯೂಜ್ ಡೆಸ್ಕ್:ರಾಜಕೀಯ ಅಧಿಕಾರವೆ ಹಾಗೆ “ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ” ಎಂಬಂತೆ ಕುಟುಂಬದ ಸದಸ್ಯರನ್ನು ಬಿಡದೆ ಹಪಾ ಹಪಿ ರಾಜಕೀಯ ಅಧಿಕಾರ ದಾಹ ಕಾಡುತ್ತದೆ ಅದು ತಂದೆ-ಮಕ್ಕಳು, ಅಣ್ಣ-ತಮ್ಮಂದಿರು, ಮಾವ-ಅಳಿಯ ಕೊನೆಗೆ ದಂಪತಿಯನ್ನು ಬಿಡದೆ ರಾಜಕೀಯ ಕಿಚ್ಚು ಕಾಡುತ್ತದೆ ಅದಕ್ಕೆ ಹೇಳೊದು ರಾಜಕೀಯ ಎಲ್ಲವನ್ನೂ ಮೀರಿದ್ದು ಅಂತ.ಮೊನ್ನೆ ನಡೆದ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ರಾಜಸ್ಥಾನದ ರಾಜಕೀಯ ಫಲಿತಾಂಶದಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.ಬೆಂಗಳೂರಿನ ಬಟ್ಟೆ ಉದ್ಯಮ ನಡೆಸುತ್ತಿರುವ ಲಾಡು ಲಾಲ್ ಪಿತಾಲಿಯ ರಾಜಾಸ್ಥಾನದ ಸಹರಾ ಕ್ಷೇತ್ರದಲ್ಲಿ ಭರ್ಜರಿ ಗೆಲವು ಸಾಧಿಸಿದ್ದರೆ, ಇನ್ನು ಕೆಲ ಕ್ಷೇತ್ರಗಳಲ್ಲಿ ಕುಟುಂಬ ಸದಸ್ಯರ ನಡುವಿನ ರಾಜಕೀಯ ಕದನವೆ ನಡೆದಿದೆ ಬಂಧುತ್ವದ ನಡುವೆ ಅಧಿಕಾರಕ್ಕಾಗಿ ಮೇಲಾಟದ ಚುನಾವಣೆ ಎನ್ನಬಹುದಾಗಿದೆ,ರಾಜಸ್ಥಾನದ ಧೋಲ್‌ಪುರದಲ್ಲಿ ಕಾಂಗ್ರೆಸ್‌ನ ಶೋಭಾರಾಣಿ ಕುಶ್ವಾಹಾ ಕಾಂಗ್ರೆಸ್‌ನ ಪರವಾಗಿ ಸ್ಪರ್ಧಿಸಿದ್ದರೆ, ಅವರ ಸಹೋದರ ಶಿವಚರಣ್ ಕುಶ್ವಾಹ ಬಿಜೆಪಿಯಿಂದ ಸ್ಪರ್ಧಿಸಿದ್ದರು.ಶೋಭಾರಾಣಿ ಗೆದ್ದು ಬೀಗಿದರೆ ಸಹೋದರ ಶಿವಚರಣ್ ಸೋತಿದ್ದಾರೆ.ಜೈಪುರದ ಫುಲೇರಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ವಿದ್ಯಾಧರ ಚೌಧರಿ ಸ್ಪರ್ಧಿಸಿದ್ದರೆ,…
ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಆವಲಕುಪ್ಪ ಗ್ರಾಮ ಸ್ವಾತಂತ್ರ್ಯ ಬಂದು ಐವತ್ತು ವರ್ಷಗಳಾದ ನಂತರ ಡಾಂಬರು ರಸ್ತೆ ಭಾಗ್ಯ ಕಂಡಿತು, ಆದರೆ ಈ ರಸ್ತೆಯಲ್ಲಿ ಆವಲಕುಪ್ಪ ಗ್ರಾಮಸ್ಥರು ಓಡಾಡಿದ್ದಕ್ಕಿಂತ ಪುಂಗನೂರು ರಸ್ತೆಯಲ್ಲಿರುವ ಗ್ರಾಮಗಳ ಜನರು ಒಡಾಡಿದ್ದೆ ಹೆಚ್ಚು.ಇವತ್ತು ಈ ರಸ್ತೆ ಸಂಪೂರ್‍ಣವಾಗಿ ಹಾಳಾಗಿದೆ ರಸ್ತೆಯಲ್ಲಿ ಒಡಾಡಲು ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.ತಾಲೂಕಿನ ಗಡಿಯಂಚಿನ ಆಂಧ್ರದ ಚಂಬಕೂರು,ರಾಮಸಮುದ್ರಂ ಸೇರಿದಂತೆ ತಾಲೂಕಿನ ಸೋಮಯಾಜಲಹಳ್ಳಿ,ಪುಲಗೂರಕೋಟೆ ಲಕ್ಷ್ಮೀಪುರ ಭಾಗದ ಜನತೆ ಶ್ರೀನಿವಾಸಪುರ ಪಟ್ಟಣಕ್ಕೆ ಬರಲು ಇದೆ ರಸ್ತೆಯನ್ನು ಬಳಸಿಕೊಳ್ಳುತ್ತಾರೆ ಆದರೆ ಈ ರಸ್ತೆ ಈಗ ಹಳ್ಳ ಕೊಳ್ಳ,ಗುಂಡಿಗಳಿಂದ ಕೂಡಿದ್ದಾಗಿದೆ,ತಿರುವುಗಳಲ್ಲಿ ದ್ವಿಚಕ್ರವಾಹನ ಸವಾರ ಅನಾಮತ್ತು ಕೆಳಗೆ ಬೀಳುವಷ್ಟು ಹಾಳಾಗಿದೆ,ರಸ್ತೆಯಲ್ಲಿ ಲಾರಿಗಳು ಟ್ರಾಕ್ಟರಗಳು ಮರಳು ವಾಹನಗಳು ಓಡಾಡಿದ ಪರಿಣಾಮ ನಿರ್ವಹಣೆ ಇಲ್ಲದೆ ರಸ್ತೆ ಕಿತ್ತುಹೋಗಿದೆ ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು ಗದ್ದೆಯಂತಾದರೆ ಇತರೆ ಕಾಲದಲ್ಲಿ ಜನರ,ಮುಖಕ್ಕೆ ಧೂಳಿನ ನೇವೇದ್ಯ ತಪ್ಪಿದ್ದಲ್ಲ ಕೆಲವೊಂದು ಕಡೆ ರಸ್ತೆಯ ಎರಡು ಬದಿ ಮುಳ್ಳುಗಂಟಿಗಳು ರಸ್ತೆಯನ್ನು ಆವರಿಸಿಕೊಂಡಿದೆ,ರಾತ್ರಿ ವೇಳೆ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಹೋಗುವಾಗ ಮುಳ್ಳಹಂದಿ,ಮೊಲ,ಕಾಡು ಬೆಕ್ಕುಗಳ…
ನ್ಯೂಜ್ ಡೆಸ್ಕ್:ಮಾಯನಗರಿ ಬೆಂಗಳೂರಿಗೆ ಯಾರೆಲ್ಲ ಬರ್ತಾರೆ ಅವರಿಗೆಲ್ಲ ಬದುಕಿನಬುಟ್ಟಿ ಕಟ್ಟಿಕೊಳ್ಳಲು ಬೆಂಗಳೂರು ಸದಾಕಾಲ ಅವಕಾಶ ಮಾಡಿಕೊಡುತ್ತದೆ ಅದೆ ಬೆಂಗಳೂರಿನ ವೈಶಿಷ್ಟ ಕೂಡ ಹೌದು,ಇಲ್ಲಿನ ಜನರ ಔದಾರ್ಯವು ಸಹಕಾರಿ.ಹಾಗೆ ದಶಕಗಳ ಹಿಂದೆ ರಾಜಾಸ್ತಾನನಿಂದ ಬೆಂಗಳೂರಿಗೆ ಬಂದಂತಹ ವ್ಯಕ್ತಿ ಇಲ್ಲೆ ನೆಲೆ ನಿಂತು ಜೀವನ ಮಾಡುತ್ತ ಬದುಕಲು ಬಟ್ಟೆ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದವ ಮೊನ್ನೆ ರಾಜಸ್ಥಾನದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದಾರೆ.ಬೆಂಗಳೂರು ಚಿಕ್ಕಪೇಟೆಯಲ್ಲಿ ಜವಳಿ ಸಂಬಂದಿಸಿದ ಉದ್ಯಮ ಹೊಂದಿರುವ ಲಾಡು ಲಾಲ್ ಪಿತಲಿಯಾ (ladu lal Pitliya) ಅವರು ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಹರಾ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿ ಗೆದ್ದು ರಾಜಸ್ಥಾನ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.ಬೆಂಗಳೂರಿನ ರಾಜಾಜಿನಗರದ 2ನೇ ಬ್ಲಾಕ್‌ನ ಜುಗನಹಳ್ಳಿಯಲ್ಲಿ ವಾಸವಾಗಿ ಚಿಕ್ಕಪೇಟೆಯಲ್ಲಿ ದೊಡ್ಡ ಮಟ್ಟದ ಜವಳಿ ಉದ್ಯಮ ಹೊಂದಿರುವ 52 ವರ್ಷದ ಲಾಡು ಲಾಲ್ ಪಿತಲಿಯಾ (ladu lal Pitliya) ಅವರು ಚುನಾವಣೆಗೆ ನೀಡಿರುವ ಆಸ್ತಿವಿವರಗಳಲ್ಲಿ ದೇವನಹಳ್ಳಿ ಬಳಿಯ ಕೃಷಿ ಜಮೀನು…
ನ್ಯೂಜ್ ಡೆಸ್ಕ್: ಶ್ರೀನಿವಾಸಪುರ ಸೇರಿದಂತೆ ವಿಭಜಿತ ಕೋಲಾರ ಜಿಲ್ಲೆಯ ಹಲವು ಭಾಗಗಳಲ್ಲಿ ಅರಣ್ಯ ಇಲಾಖೆಯವರು ರೈತರ ಭೂಮಿಯನ್ನು ಅಕ್ರಮವಾಗಿ ತೆರವು ಮಾಡಿದ್ದಾರೆ ಎಂದು ದೆಹಲಿಯಲ್ಲಿ ನಡೆಯುತ್ತಿರುವ ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಕೋಲಾರದ ಸಂಸದ ಮುನಿಸ್ವಾಮಿ ಧ್ವನಿ ಎತ್ತಿದ್ದಾರೆ, ರಾಜ್ಯ ಸರ್ಕಾರ ಅಕ್ರಮವಾಗಿ ಅರಣ್ಯ ತೆರವು ಕಾರ್ಯಚರಣೆ ನಡೆಸುತ್ತ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಪ್ರಶ್ನೋತ್ತರ ವೇಳೆ ಕನ್ನಡದಲ್ಲಿ ಮಾತನಾಡಿ ಹೇಳಿದ್ದಾರೆ.ಸುಮಾರು 70-80 ವರ್ಷಗಳಿಂದ ಎರಡು ಮೂರು ತಲಮಾರುಗಳವರು ಸಾಗುವಳಿ ಮಾಡಿಕೊಂಡು ಜಮೀನುಗಳಲ್ಲಿ ಮಾವಿನ ಮರಗಳನ್ನು ಬೆಳೆಸಿ ಜೀವನ ಮಾಡುತ್ತಿರುವ ರೈತರಿಂದ ಅಕ್ರಮವಾಗಿ ಜಮೀನು ಕಿತ್ತುಕೊಳ್ಳುವಂತ ಕೆಲಸವನ್ನು ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದು ಇದರ ಬಗ್ಗೆ ಕೇಂದ್ರ ಅರಣ್ಯ ಇಲಾಖೆ ಗಮನ ಹರಿಸುವಂತೆ ಅವರು ಲೋಕಸಭೆ ಸ್ಪೀಕರ್ ಮೂಲಕ ಮನವಿ ಮಾಡಿರುತ್ತಾರೆ.
ನ್ಯೂಜ್ ಡೆಸ್ಕ್: ಬಹುತೇಕರು ಬಡತನದಿಂದಲೆ ದುಡಿದು ಹಣ ಗಣಗಳಿಸಿರಬಹುದು ಹಣ ಎಲ್ಲರ ಬಳಿ ಇರಬಹುದು ಅನಕೂಲವಂತ ಶ್ರೀಮಂತ ಸಿರಿವಂತ ಎಲ್ಲವೂ ಆಗಿರಬಹುದು ಆದರೆ ನಾನು ಹುಟ್ಟಿದ ನೆಲದ ಋಣ ತೀರಿಸಲು ಇಲ್ಲೊಬ್ಬ ಸಿರಿವಂತ ತಾನು ಹುಟ್ಟಿ ಆಡಿ ಬೆಳೆದ ತನ್ನೂರಿನ ಋಣ ತೀರಿಸಲು ಮುಂದಾಗಿದ್ದಾರೆ.ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಬೆಟ್ಟಗುಡ್ಡಗಳ ನಡುವೆ ಇರುವ ಪುಟ್ಟ ಗ್ರಾಮ ವೀರಕಪುತ್ರ,ಈ ಗ್ರಾಮದಲ್ಲಿ ಸುತ್ತಲೂ ನಿತ್ಯವೂ ಕಾಡುಪ್ರಾಣಿಗಳ ಓಡಾಟ ಇದೆ ಇಲ್ಲಿನ ಜನ ನಿತ್ಯ ಆತಂಕದಲ್ಲಿ ಕಾಲ ಕಳೆಯುವಂತ ಪರಿಸ್ಥಿತಿ ಇದೆ, ಜೊತೆಗೆ ಹಗಲು ರಾತ್ರಿ ಗ್ರಾಮದ ಸುತ್ತಲೂ ಕಲ್ಲು ಕ್ವಾರಿ ಬ್ಲಾಸ್ಟಿಂಗ್ ನಡೆಯುತ್ತಿರುತ್ತದೆ.ರಾತ್ರಿಯಾಯಿತು ಎಂದರೆ ಇನ್ನಷ್ಟು ಆತಂಕ ಇಲ್ಲಿನ ಜನರಿಗೆ ಇದನ್ನು ಸ್ವತಃ ಅರಿತಿದ್ದ ಇದೇ ಊರ್‍ಇನ ವೀರಕಪುತ್ರಶ್ರೀನಿವಾಸ್ ತನ್ನೂರಿನ ಎಲ್ಲಾ ಬೀದಿಗಳಿಗೆ 15 ಸೋಲಾರ್ ದೀಪಗಳನ್ನು ಅಳವಡಿಸಿದ್ದಾರೆ.ಗ್ರಾಮಕ್ಕೆ ಸೋಲಾರ್ ದೀಪಗಳ ಕೊಟ್ಟು ಧನ್ಯತೆ ಮೆರೆದ ವಿಷ್ಣು ಅಭಿಮಾನಿವೀರಕಪುತ್ರಶ್ರೀನಿವಾಸ್ ಹೆಸರು ಸಿನಿಮಾ ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಪ್ರವರ್ದಮಾನಕ್ಕೆ ಬರುತ್ತಿರುವ ಹೆಸರು ಇವರ ಸ್ವಗ್ರಾಮ ವೀರಕಪುತ್ರ…
ಶ್ರೀನಿವಾಸಪುರ: ಸಾರ್ವಜನಿಕರ ಅನಕೂಲಕ್ಕಾಗಿ ತಹಶೀಲ್ದಾರ್ ಕಛೇರಿಯಲ್ಲಿರುವ ಕೆಲ ಕೌಂಟರುಗಳನ್ನು ಹಳೇಯ ತಾಲೂಕು ಕಚೇರಿ ಆವರಣಕ್ಕೆ ಶೀಫ್ಟ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆಕ್ರಂಪಾಷ ತಿಳಿಸಿದರು.ಪಟ್ಟಣದ ಪಶುಪಾಲನ ಕಛೇರಿ ಹಾಗು ತಹಶೀಲ್ದಾರ್ ಕಛೇರಿ ಕಟ್ಟಡ ಹಾಗು ಸಿಸಿ ರಸ್ತೆ ಕಾಮಗಾರಿ ವೀಕ್ಷಣೆ ಮಾಡಲು ಶ್ರೀನಿವಾಸಪುರಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಮಾತನಾಡಿದರು.ಸಾರ್ವಜನಿಕರ ಅರ್ಜಿಗಳನ್ನು ತ್ವರಿತ ಗತಿಯಲಿಲ್ಲಿ ವಿಲೆವಾರಿ ಮಾಡಲು ಅನಕೂಲವಾಗುವಂತೆ ಹೆಚ್ಚುವರಿ ಕೌಂಟರುಗಳನ್ನು ಅನಾವರಣಗೊಳಿಸುತ್ತಿರುವುದಾಗಿ ತಹಶೀಲ್ದಾರ್ ಕಛೇರಿ ಆವರಣದಲ್ಲಿ ದ್ವಿಚಕ್ರವಾಹನಗಳು ಹಾಗೂ ಕಾರುಗಳನ್ನು ಅಡ್ಡದಡ್ಡಿಯಾಗಿ ನಿಲ್ಲಿಸಿರುತ್ತಾರೆ ಇದರಿಂದ ಸಾರ್ವಜಕಿರ ಓಡಾಟಕ್ಕೆ ತೊಂದರೆಯಾಗಿದ್ದು ಸರ್ಕಾರಿ ಅಧಿಕಾರಿಗಳ ಸರ್ಕಾರಿ ವಾಹನ ನಿಲ್ಲಿಸಲು ಸ್ಥಳಾವಕಾಶ ಇಲ್ಲದಂತಾಗಿದೆ ದ್ವಿಚಕ್ರವಾಹನಗಳನ್ನು ಶಿಸ್ತಾಗಿ ಸರತಿ ಸಾಲಿನಲ್ಲಿ ನಿಲ್ಲಿಸುಲು , ಅಧಿಕಾರಿಗಳ ಕಾರುಗಳನ್ನು ಹೊರತು ಪಡಿಸಿ ಸಾರ್ವಜನಿಕರ ಕಾರುಗಳನ್ನು ಅವರಣದೊಳಗೆ ನಿಲ್ಲಿಸದಂತೆ ಸೇಕ್ಯೂರಿಟಿ ಗಾರ್‍ಡ್ ಗಳ ಸಹಕಾರ ಪಡೆಯಲು ಪೊಲೀಸ್ ಅಧಿಕಾರಿಗೆ ಸೂಚಿಸಿದರು.ಪಶು ಪಾಲನ ಇಲಾಖೆಗೆ ನೇರ ರಸ್ತೆಗೆ ಮನವಿಪಶು ಪಾಲನ ಇಲಾಖೆ ಕಛೇರಿಗೆ ಬೇಟಿ ನೀಡಿದ ಜಿಲ್ಲಾಧಿಕಾರಿಗೆ ಪಶುಪಾಲನ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಕಛೇರಿಗೆ…