Author: Srinivas_Murthy

ಶ್ರೀನಿವಾಸಪುರ:ಮನೆಗೆ ತೆರಳುತ್ತಿದ್ದ ಗೃಹಣಿಯನ್ನು ತಡೆದ ಅಪರಿಚಿತರು ಪೋಲಿಸರೆಂದು ಪರಿಚಯಿಸಿಕೊಂಡು ಅಕೆಯ ಕತ್ತಿನಲ್ಲಿರುವ ಸರವನ್ನು ತಗೆಸಿ ಕದ್ದುಕೊಂಡು ಹೋಗಿರುವ ಘಟನೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ನಡೆದಿರುತ್ತದೆ.ರತ್ನಮ್ಮ ಎಂಬ ನಡುವಯಸ್ಸಿನ ಮಹಿಳೆ ಸಂಜೆ ಸಮಯದಲ್ಲಿ ಊರಿಂದ ಬಂದು ಕಾಲೇಜು ಬಳಿ ಬಸ್ಸಿಳಿದು ಮನೆ ಕಡೆಗೆ ನಡೆದುಕೊಂಡು ಹೋರಟಿದ್ದಾರೆ, ಪ್ರವಾಸಿ ಮಂದಿರದ ಬಳಿ ಸುಮಾರು ಮೂರು ಮಂದಿ ಇದ್ದರು ಎನ್ನಲಾದ ಅಪರಿಚಿತರು ಆಕೆಯನ್ನು ತಡೆದಿದ್ದಾರೆ ಆತ್ಮೀಯತೆಯಿಂದ ಅಕ್ಕ ಎಂದು ಮಾತನಾಡಿಸಿ ಮುಂದೆ ಕಳ್ಳರ ಗ್ಯಾಂಗ್ ಇದೆ ನಿಮ್ಮ ಕತ್ತಿನಲ್ಲಿರುವ ಬಂಗಾರದ ಸರವನ್ನು ತಗೆದು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಿ ಹಿಂದೆ ನಮ್ಮ ಸಾಹೇಬರು ಇದ್ದಾರೆ ಅವರೆ ಹೇಳಿದ್ದು ಎಂದು ನಂಬಿಸಿದ್ದಾರೆ,ಗಾಭರಿಯಾದ ಮಹಿಳೆ ತಕ್ಷಣ ಕತ್ತಿನಲ್ಲಿದ್ದ ಸರ ತಗೆದು ಕೈಯಲ್ಲಿದ್ದ ಪರ್ಸಿನಲ್ಲಿ ಇಡಲು ಅಪರಿಚಿನ ಸಹಾಯ ಪಡೆದಿದ್ದಾರೆ ಇದನ್ನೆ ಅವಕಾಶ ಮಾಡಿಕೊಂಡ ಅಪರಿಚಿತರು ಪರ್ಸಿನ ಜಿಪ್ ತಗೆದಿದ್ದಾರೆ ಆಕೆ ಪರ್ಸಿನಲ್ಲಿ ಬಂಗಾರದ ಸರ ಇಡುವಾಗ ಕೈಚಳಕ ತೊರಿಸಿ ಸರವನ್ನು ಯಾಮಾರಿಸಿದ್ದಾರೆ,ನಂತರದಲ್ಲಿ ಸಾಹೇಬರು ಕರಿತಿದ್ದಾರೆ ನಾವು ಬರುತ್ತೇವೆ ಎಂದು…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ಇತ್ತಿಚಿಗೆ ಕಳ್ಳತನ ಹೆಚ್ಚುತ್ತಿದ್ದು ಇದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ,ನಿಲ್ಲಿಸಿದ್ದ ಜಾಗದಲ್ಲೆ ದ್ವಿಚಕ್ರವಾಹನ ಕ್ಷ್ಣಣಾರ್ಧದಲ್ಲಿ ಮಾಯವಾಗುತ್ತಿವೆ.ಪಟ್ಟಣದ ವಿವೇಕಾನಂದ ವೃತ್ತದ ಬಳಿ ಇರುವ ಮೊಟ್ಟೆ ಅಂಗಡಿ ಮಾಲಿಕ ಮೂತ್ರ ವಿಸರ್ಜನೆಗೆ ಹೋಗಿದ್ದ ಸಮಯದಲ್ಲಿ ಯುವಕನೊರ್ವ ಅಂಗಡಿಗೆ ನುಗ್ಗಿ ಕ್ಯಾಷ್ ಬಾಕ್ಸ್ ನಲ್ಲಿದ್ದ ನಗದು ಮೂರು ಮೊಬೈಲ್ ಗಳನ್ನು ಕದ್ದುಕೊಂಡು ಹೋಗುತ್ತಿದ್ದಾನೆ ಅದೆ ಸಮಯಕ್ಕೆ ಅಂಗಡಿ ಮಾಲಿಕ ನಾಗರಾಜ್ ಬಂದಿದ್ದು ಕದ್ದು ಓಡಿ ಹೋಗುತ್ತಿದ್ದ ಯುವಕನನ್ನು ಸಾರ್ವಜನಿಕರ ಸಹಕಾರದೊಂದಿಗೆ ಅಟ್ಟಾಡಿಸಿಕೊಂಡು ಹೋಗಿ ಅಜಾದ ರಸ್ತೆಯ ಗಲ್ಲಿಯಲ್ಲಿ ಹಿಡಿದು ಮೊಬೈಲ್ ಮತ್ತು ನಗದು ವಾಪಸ್ಸು ಪಡೆದಿರುತ್ತಾನೆ.ತೀರಾ ಇತ್ತಿಚಿಗೆ ಇಂದಿರಾಭವನ್ ವೃತ್ತದಲ್ಲಿರುವ ಇಂತಹುದೆ ಘಟನೆ ನಡೆದಿದ್ದು ಕೃಷ್ಣಮೂರ್ತಿ ಎಂಬವರ ದಿನಸಿ ಅಂಗಡಿಯ ಕ್ಯಾಷ್ ಬಾಕ್ಸ್ ನಲ್ಲಿದ್ದ ಹತ್ತು ಸಾವಿರ ನಗದು ಹಾಡು ಹಗಲೆ ಕಳ್ಳತನ ಆಗಿರುವ ಬಗ್ಗೆ ಸಾರ್ವಜನಿಕರು ಹೇಳುತ್ತಾರೆ.ಗುರುವಾರ ಮಧ್ಯಾಹ್ನ ಎಂ.ಜಿ.ರಸ್ತೆಯ ಸಂಗೀತಾ ಚಿತ್ರಮಂದಿರ ಬಳಿ ಇರುವಂತ ತೆಂಗಿನಕಾಯಿ ಹೊಲ್ ಸೇಲ್ ಅಂಗಡಿ ಮುಂಬಾಗ ನಿಲ್ಲಿಸಿದ್ದ ಅಕ್ಟಿವ್ ಹೊಂಡಾ ಸ್ಕೂಟರ್ ಕ್ಷಣಾರ್ದದಲ್ಲಿ ಕಳ್ಳತನವಾಗಿದ್ದಾಗಿದೆ ಎಂದು ವಾಹನ…

Read More

ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕುರಿತಂತೆ ಇಲ್ಲಿನ ಜನ ಕರ್ಮ ಕರ್ಮ ಎನ್ನುತ್ತಾರೆ ತಮಿಳುನಾಡು ಆಂಧ್ರಪ್ರದೇಶ ಕರ್ನಾಟಕ ಮೂರು ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 69 ಪಟ್ಟಣದಲ್ಲಿ ಹಾದು ಹೋಗಿದೆ ರಸ್ತೆ ಹೇಗಿದೆ ಅಂದರೆ ಇತ್ತ ಗುಣಮಟ್ಟದ ರಸ್ತೆನೂ ಮಾದಲಿಲ್ಲ ಅಗಲೀಕರಣವೂ ಆಗಿಲ್ಲ ರಾಷ್ಟ್ರೀಯ ಹೆದ್ದಾರಿ ಎನ್ನಲು ನಾಚಿಕೆಯಾಗುವಂತೆ ರಸ್ತೆ ಇದೆ.ತಾಲೂಕು ಕೇಂದ್ರವಾಗಿರುವ ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿರುವ ಹಿನ್ನಲೆಯಲ್ಲಿ ಊರು ಅಭಿವೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ಇಲ್ಲಿನ ಜನರ ನಂಬಿದ್ದರು ಆದರೆ ಕನಿಷ್ಠ ಗುಣಮಟ್ಟದ ರಸ್ತೆ ಮಾಡುವಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ವಿಫಲವಾಗಿದೆ ಎಂದು ಜನರು ವಿಷಾದ ವ್ಯಕ್ತಪಡಿಸುತ್ತಾರೆ.ರಸ್ತೆಗಳ ಅಭಿವೃದ್ಧಿಯಿಂದ ಊರ ಅಭಿವೃದ್ಧಿಮೂಲಭೂತ ಸೌಕರ್ಯಗಳಲ್ಲಿ ಪ್ರಮುಖವಾದದ್ದು ರಸ್ತೆ ಇದನ್ನು ಅಭಿವೃದ್ಧಿ ಪಡಿಸಿದರೆ ಊರು ತಾನಾಗೆ ಅಭಿವೃದ್ಧಿಯಾಗುತ್ತದೆ,ರಸ್ತೆ ಹಾಗು ಸಾರ್ವಜನಿಕ ಸಾರಿಗೆ ಅನಕೂಲವಾಗಿರುವಂತ ಊರಿನಲ್ಲಿ ವಸತಿಗೆ ಯೋಗ್ಯ ಎಂದು ಜನತೆ ನೆಲೆಸುತ್ತಾರೆ ಜನಸಂದಣಿ ಹೆಚ್ಚಾದ ಪ್ರದೇಸದಲ್ಲಿ ವ್ಯಾಪಾರ ವ್ಯವಹಾರ ನಡೆಸಬಹುದು ಎಂಬ ನಂಬಿಕೆ ಏರ್ಪಟ್ಟು ವಾಣಿಜ್ಯ ಸಂಸ್ಥೆಗಳು ಕೈಗಾರಿಕ…

Read More

ಶ್ರೀನಿವಾಸಪುರ: ತಾಲೂಕಿನ ದ್ವಾರಸಂದ್ರ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವವು ಸಹಸ್ರಾರು ಭಕ್ತರ ನಡುವೆ ಸಂಬ್ರಮ ಸಡಗರದಿಂದ ನೇರವೇರಿತು ವೈದಿಕರು ಮಂತ್ರ ಘೋಷ ಮಂಗಳ ವಾದ್ಯಗಳು ಹಾಗು ತಮಟೆ ವಾದ್ಯಗಳ ನಡುವೆ ಸ್ವಾಮಿ ಉತ್ಸವ ಮೂರ್ತಿಗಳನ್ನು ವಿವಿಧ ಬಗೆಯ ಹೂವು ಹಾಗು ವಸ್ತ್ರಗಳಿಂದ ಅಲಂಕರಿಸಿದ್ದ ಬ್ರಹ್ಮ ರಥದಲ್ಲಿ ಪ್ರತಿಷ್ಠಾಪಿಸಿ ಬಳಿಕ ಭಕ್ತರ ಗೋವಿಂದ ನಾಮಸ್ಮರಣೆ ಜಯಘೋಷಗಳ ನಡುವೆ ರಥವನ್ನು ಎಳೆಯಲಾಯಿತು ಈ ಸಂದರ್ಭದಲಿ ಭಕ್ತರು ರಥಕ್ಕೆ ಬಾಳೆಹಣ್ಣು ಧವನ ಎಸೆದು ಹರಿಕೆ ಸಲ್ಲಿಸಿದರು.ಬ್ರಹ್ಮ ರಥೋತ್ಸವದ ಅಂಗವಾಗಿ ಬೃಹತ್ ಅನ್ನಸಂತರ್ಪಣೆ ನಡೆಯಿತು ಸಹಸ್ರಾರು ಭಕ್ತರು ದೇವರ ಅನ್ನಪ್ರಸಾದ ಸ್ವೀಕರಿಸಿ ಪುನಿತರಾದರು.ಶಾಸಕ ವೆಂಕಟಶಿವಾರೆಡ್ದಿ,ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿದರು. ಬ್ರಹ್ಮ ರಥೋತ್ಸವದ ಹಿಂದಿನ ದಿನ ದೇವಾಲಯದ ಸಭಾ ಭವನದಲ್ಲಿ ಅದ್ದೂರಿ ಕಲ್ಯಾಣೋತ್ಸವ ಏರ್ಪಡಿಸಲಾಗಿತ್ತು.

Read More

ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ನಲ್ಲಿರುವ ಪುರಾಣಪ್ರಸಿದ್ದ ಶಿಲಾಮಯವಾದ ಶ್ರೀಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ನೃಸಿಂಹ ಜಯಂತಿ ಅಂಗವಾಗಿ ಶ್ರೀಲಕ್ಷ್ಮಿ ನರಸಿಂಹಸ್ವಾಮಿ ಕಲ್ಯಾಣೋತ್ಸವ ಆಯೋಜಿಸಲಾಗಿತ್ತು,ದೇವಾಲಯದ ಪ್ರಧಾನ ಅರ್ಚಕರಾದ ರಾಜಕಸ್ತೂರಾಚಾರ್ಲು ಅವರ ನೇತೃತ್ವದಲ್ಲಿ ಮುಂಜಾನೆ ಐದು ಗಂಟೆಗೆ ಮೂಲ ದೇವರಿಗೆ ಪೂಜಾ ಪುಣ್ಯಾಹ ಅಭಿಷೇಕ ಹಾಗು ಹೋಮಗಳು ನಡೆಯಿತು ನಂತರದಲ್ಲಿ ಕಲ್ಯಾಣೋತ್ಸವ ನೇರವೇರಿಸಲಾಯಿತು.ರಾಕ್ಷಸನನ್ನು ಸಂಹರಿಸಲು ವಿಷ್ಣು ನರಸಿಂಹಾವತಾರವಾದಲ್ಲಿ ಪ್ರತ್ಯಕ್ಷವಾದ ದಿನವನ್ನು ಪರಿಗಣಿಸಿ ನರಸಿಂಹ ಜಯಂತಿಯಂದು ಆಚರಿಸಿ ಅರಾಧಿಸಲಾಗುತ್ತದೆ.ನರಸಿಂಹ ದೇವರನ್ನು ನಿಯಮಾನುಸಾರ ಪೂಜಿಸುವುದರಿಂದ ವ್ಯಕ್ತಿಯೊಳಗಿನ ಭಯ ದೂರವಾಗುತ್ತದೆ. ಅಷ್ಟೇ ಅಲ್ಲ, ಜೀವನದಲ್ಲಿ ಎದುರಾಗುವ ಎಲ್ಲಾ ರೀತಿಯ ಸಕಾರಾತ್ಮಕ ಶಕ್ತಿ ಮತ್ತು ಔದ್ಯೋಗಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಸಮೃದ್ಧಿ,ಉತ್ತಮ ಆರೋಗ್ಯ,ಸಂಪತ್ತು ಪಡೆಯಲು ಸಹಕಾರಿಯಾಗುತ್ತದೆ ಎಂದು ಅರ್ಚಕರು ತಿಳಿಸಿದರು. ಸಂಜೆ ನಡೆದಂತ ದೇವರ ಉತ್ಸವದಲ್ಲಿ ಜಾನಪದ ಕಲಾವಿದರು ನಡೆಸಿದ ಚಕ್ಕಭಜನೆ ಮತ್ತು ಕೋಲಾಟ ಜನಮನ ತಣಿಸಿತು.

Read More

ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದ ನರಸಿಂಹಪಾಳ್ಯದಲ್ಲಿರುವ ಶ್ರೀವರಸಿದ್ದಿ ವಿನಾಯಕ ಹಾಗು ಶ್ರೀಮಹಾಲಕ್ಷ್ಮಿ ಸಮೇತ ಶ್ರೀ ಉಗ್ರನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಲೋಕ ಕಲ್ಯಾಣಾರ್ಥವಾಗಿ ಸೌರಮಾನ ನೃಸಿಂಹ ಜಯಂತಿ ಪ್ರಯುಕ್ತ ಶ್ರೀ ಶ್ರೀದೇವಿ ಹಾಗು ಭೂದೇವಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಜಗದೊಡೆಯ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಶ್ರೀನಿವಾಸ ಕಲ್ಯಾಣೋತ್ಸವ ಮಾಡುವುದರಿಂದ ಸಮಸ್ತ್ತಲೋಕಕ್ಕೆ ಸುಖ,ಶಾಂತಿ ನೆಮ್ಮದಿ ಪ್ರಾಪ್ತಿಯಾಗಲಿದೆ ಎಂದು ಕಲ್ಯಾಣೋತ್ಸವದ ಧಾರ್ಮಿಕ ವಿಧಿ ನೆರವೇರಿಸಿದ ಪುರೋಹಿತ ಚಂಟಿಸುದರ್ಶನ್ ಹೇಳಿದರು.ದೊಡ್ಡ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀನಿವಾಸ ಕಲ್ಯಾಣೋತ್ಸವ ವೀಕ್ಷಿಸಿ ಕೃತಾರ್ಥರಾದರು.ಅನ್ನ ಸಂತರ್ಪಣೆ: ಶ್ರೀನಿವಾಸ ಕಲ್ಯಾಣೋತ್ಸವ ಅಂಗವಾಗಿ ದೇವರ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದ ಭಕ್ತರಿಗೆ ತೀರ್ಥ ಪ್ರಸಾದ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.ಕಾರ್ಯಕ್ರಮದ ಪ್ರಮುಖ ರೂವಾರಿಗಳಾದ ವೇದಪಂಡಿತ ಕಾಡುದೇವಂಡಹಳ್ಳಿ ಗೋಪಿನಾಥರಾವ್ ಕುಟುಂಬದ ಸದಸ್ಯರು,ಧಾರ್ಮಿಕ ದತ್ತಿ ಇಲಾಖೆ ಆಗಮ ಪಂಡಿತ ಸುಬ್ರಮಣ್ಯಂ,ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಜಿಲ್ಲಾ ನಿರ್ದೇಶಕ ಅರುಣ್ ಕುಮಾರ್,ಬ್ರಾಹ್ಮಣ ಸಮುದಾಯದ ಮುಖಂಡ ಗೋಫಿನಾಥರಾವ್,ಆಶ್ರಯ ಯೋಜನೆ ಮಾಜಿ ನಿರ್ದೇಶಕ ಹಳೇಪೆಟೆನಾರಯಣಸ್ವಾಮಿ,ಮುನಿರೆಡ್ಡಿ, ಜೆಸಿಬಿ ಮಂಜು,ಅಶೋಕ್ ರೆಡ್ದಿ,ಪುರಸಭೆ ಮುನಿಸ್ವಾಮಿ,ಸತ್ಸಂಗ ಬಳಗದ…

Read More

ಶ್ರೀನಿವಾಸಪುರ:ಜಗತ್ತಿಗೆ ಕಾಲಜ್ಞಾನ ಹೇಳುವ ಮೂಲಕ ಜಗತ್ತಿನ ಆಗುಹೋಗುಗಳ ಕುರಿತಾಗಿ ಹೆಚ್ಚರಿಕೆ ನೀಡಿದ ಮಹಾನ್ ಪುರುಷ ಪೋತುಲೂರು ವೀರಬ್ರಹ್ಮೇಂದ್ರ ಸ್ವಾಮಿಗಳು ಎಂದು ಶ್ರೀನಿವಾಸಪುರ ತಾಲೂಕು ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಮೋಹನಾಚಾರಿ ಹೇಳಿದರು.ಅವರು ಶ್ರೀನಿವಾಸಪುರ ಪಟ್ಟಣದ ಶ್ರೀ ಕಾಳಿಕಕಮಟೇಶ್ವರಿ ದೇವಾಲಯದಲ್ಲಿ ಕಾಲಜ್ಞಾನಿ ವೀರಬ್ರಹ್ಮೇಂದ್ರ ಸ್ವಾಮಿಯವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ 17ನೇ ಶತಮಾನಕ್ಕೆ ಸೇರಿದವರಾದ ಶ್ರೀ ಮದ್ವಿರಾಟ್ ಪೋತುಲೂರಿ ವೀರಬ್ರಹ್ಮೇಂದ್ರಸ್ವಾಮಿಗಳು ತಮ್ಮ ಮಹಾನ್ ಕಂಠದಿಂದ ಜಗತ್ತಿಗೆ ತತ್ವಜ್ಞಾನವನ್ನು ಬೋಧಿಸಿದ ಮಹಾನ್ ಯೋಗಿಗಳು ಜಗತ್ತಿಗೆ ಶಾಂತಿ ಬಯಸಿ ಸರ್ವಜನರ ಶ್ರೆಯಸ್ಸು ಕೋರಿ ಅವರು ಹೇಳಿದಂತ ಕಾಲಜ್ಞಾನದ ವಿಚಾರಗಳು ಇಂದು ಜಗತ್ತಿನಲ್ಲಿ ನಡೆದಿರುತ್ತದೆ ನಡೆಯುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ವಿಶ್ವಕರ್ಮ ಸಮುದಾಯದ ಕಾರ್ಯದರ್ಶಿ ರವಿಚಂದ್ರಾಚಾರಿ, ಜಂಟಿ ಕಾರ್ಯದರ್ಶಿ ರಾಮಚಂದ್ರಾಚಾರಿ, ಸದಸ್ಯರಾದ ನಾರಾಯಣಚಾರಿ, ಮಹಿಳಾ ಘಟಕದ ಅಧ್ಯಕ್ಷೆ ಕೆ.ರಾದಮ್ಮ, ಸದಸ್ಯೆ ವಿಜಯಮ್ಮ ಮಂಜುನಾಥಚಾರಿ, ರಮೇಶ್ ಹಾಗು ಮುಂತಾದವರು ಇದ್ದರು

Read More

ಶ್ರೀನಿವಾಸಪುರ:ದೇಶದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯುವ ಶ್ರೀನಿವಾಸಪುರದಲ್ಲಿ ಮಾವು ಮಂಡಿಗಳು ಹಾಗು ಕೃಷಿ ಉತ್ಪನ್ನ ಮಾರುಕಟ್ಟೆ ಇರುವಂತ ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಇದ್ದು, ಇಲ್ಲಿ ಮಾವು ರವಾನಿಸಲು ಬರುವಂತ ಬಾರಿಗಾತ್ರದ ಲಾರಿಗಳು ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಿಕೊಂಡು ಟ್ರಾಫಿಕ್ ಸಮಸ್ಯೆ ಉಂಟುಮಾಡುತ್ತಿದ್ದಾರೆ ಇದರಿಂದ ಈ ರಸ್ತೆಯಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿದೆ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಕನ್ನಡಪರ ಸಂಘಟನೆಗಳ ವತಿಯಿಂದ ತಾಲ್ಲೂಕು ದಂಡಾಧಿಕಾರಿಗಳಿಗೆ ಮತ್ತು ಪೋಲಿಸ್ ಇಲಾಖೆಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿರುತ್ತಾರೆ.ಪ್ರತಿ ವರ್ಷ ಮೇ,ಜುನ್,ಜುಲೈ ತಿಂಗಳ ಅಂತ್ಯದವರಿಗೂ ಮಾವು ಕಟಾವು ಆರಂಭವಾಗುತ್ತದೆ ಅವುಗಳನ್ನು ತಂದು ಮಂಡಿಗಳಿಗೆ ಹಾಕುತ್ತಾರೆ ಸಾವಿರಾರು ಟನ್ ಮಾವನ್ನು ದೇಶದ ವಿವಿಧ ಭಾಗದ ಮಾರುಕಟ್ಟೆಗಳಿಗೆ ಸಾಗಿಸಲು ಇಲ್ಲಿಗೆ ದೇಶದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಾರಿಗಾತ್ರದ ಲಾರಿಗಳು ಬರುತ್ತವೆ ಇದರೊಂದಿಗೆ ಮಾವು ಪ್ಯಾಕಿಂಗ್ ವಸ್ತುಗಳ ಅಂಗಡಿಗಳು ಅಲ್ಲೆ ಪ್ರಾರಂಭಿಸುತ್ತಾರೆ ಲಾರಿ ಕಮೀಷನ್ ಆಫಿಸ್ ಗಳು,ಮಾವು ಸಾಗಿಸಲು ಕೂಲಿ ಕಾರ್ಮಿಕರು ಇದರ ಜೊತೆಗೆ ಹೊರಗಡೆಯಿಂದ…

Read More

ಗ್ರಾಮಸ್ಥರಲ್ಲಿ ಚಿರತೆ ಆತಂಕ ನಗರದಲ್ಲಿ ಸಂಚರಿಸಿದ ಕೃಷ್ಣಮೃಗ ಕೊಡದವಾಡಿಯಲ್ಲಿ ಜಿಂಕೆ ರಕ್ಷಣೆ ಚಿಂತಾಮಣಿ:ಕಳೆದ ಎರಡು ಮೂರು ದಿನಗಳಿಂದ ಚಿಂತಾಮಣಿ ನಗರ ಸೇರಿದಂತೆ ತಾಲೂಕಿನಲ್ಲಿ ಕಾಡು ಪ್ರಾಣಿಗಳ ವಿಚಾರ ಹೆಚ್ಚು ಚರ್ಚೆಗೆ ಬರುತ್ತಿದೆ,ರಾತ್ರಿ ವೆಳೆ ಕೃಷ್ಣಮೃಗವೊಂದು ದಾರಿತಪ್ಪಿಯೋ ನೀರು ಆರಿಸಿಯೋ ನಗರಕ್ಕೆ ಬಂದು ನಾಯಿಗಳ ದಾಳಿಗೆ ಸಿಲುಕಿ ಸಾವನ್ನಪ್ಪಿದರೆ,ತಾಲೂಕಿನ ಮೋಟಮಾಕಲಪಲ್ಲಿಯಲ್ಲಿ ಚಿರತೆ ಜಿಂಕೆಯನ್ನು ಬೇಟೆಯಾಡಿದ್ದು ಗ್ರಾಮಸ್ಥರನ್ನು ಆತಂಕಕ್ಕೆ ಈಡುಮಾಡಿದೆ ಇನ್ನೂ ಕೊಡದವಾಡಿಯಲ್ಲಿ ನಾಯಿಗಳ ದಾಳಿಗೆ ಒಳಗಾಗಿದ್ದ ಜಿಂಕೆಯನ್ನು ಗ್ರಾಮಸ್ಥರು ಕಾಪಾಡಿದ್ದಾರೆ.ಚಿಂತಾಮಣಿ ತಾಲೂಕಿನ ಮುಂಗಾನಹಳ್ಳಿ ಹೋಬಳಿ ಮಾದಮಂಗಲದ ಬಳಿ ಕೆಲ ದಿನಗಳ ಹಿಂದೆ ಚಿರತೆಯೊಂದು ಕಾಣಿಸಿಕೊಂಡು ಗ್ರಾಮಸ್ಥರು ಭಿತಿಗೋಳಗಾಗಿದ್ದು ಮಾಸುವ ಮುನ್ನವೆ ಇದೀಗ ಮಾದಮಂಗಲಕ್ಕೆ ಹೊಂದಿಕೊಂಡಿರುವ ಕೋನಪಲ್ಲಿ ಬಳಿಯ ಕುಗ್ರಾಮವಾದ ಮೋಟಮಾಕಲಪಲ್ಲಿ ಅರಣ್ಯ ವ್ಯಾಪ್ತಿಗೆ ಸೇರಿದ ಕೋನಪಲ್ಲಿ ಗ್ರಾಮದ ಹರೀಶ್ ಎಂಬುವರ ಹೊಲದಲ್ಲಿ ರಾತ್ರಿ ವೆಳೆ ಬಂದ ಚಿರತೆ ಜಿಂಕೆಯನ್ನು ಬೇಟಿಯಾಡಿದೆ ನಂತರದಲ್ಲಿ ಅರ್ದಂಬರ್ಧ ಜಿಂಕೆಯನ್ನು ತಿಂದಿರುವ ಚಿರತೆ ಜಿಂಕೆ ಶವವನ್ನು ಅಲ್ಲೆ ಬಿಟ್ಟು ಹೋಗಿದೆ, ಚಿರತೆ ಓಡಾಟದ ಹೆಚ್ಚೆ ಗುರುತುಗಳು ಸ್ಪಷ್ಟವಾಗಿ ಗ್ರಾಮಸ್ಥರಿಗೆ…

Read More

ರೈತಾಪಿ ಮಕ್ಕಳೆ ಇರುವ ಶಾಲೆ ಪ್ರಾರಂಭದಿಂದಲೂ ದಾಖಲೆ ಫಲಿತಾಂಶ ಶ್ರೀನಿವಾಸಪುರ :ತಾಲೂಕಿನ ಪ್ರತಿಷ್ಠಿತ ಖಾಸಗಿ ವಿಐಪಿ ಶಾಲೆ ಸಿ.ಬಿ.ಎಸ್.ಇ 10ನೇ ತರಗತಿ ಪರೀಕ್ಷೆಯಲ್ಲಿ 100 ಫಲಿತಾಂಶ ಸಾಧಿಸಿದೆ ಎಂದು ಶಾಲಾ ಆಡಳಿತ ಮಂಡಲಿ ಅಧ್ಯಕ್ಷಡಾ|| ವೇಣುಗೋಪಾಲ್ ತಿಳಿಸಿದರು. ಅವರು ಶಾಲ ಅವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮ ವಿಐಪಿ ಶಾಲೆಯ ಸಿಬಿಎಸ್‌ಇ 10ನೇ ತರಗತಿಯಲ್ಲಿ ಒಟ್ಟು 50 ವಿದ್ಯಾರ್ಥಿಗಳು ಸಿಬಿಎಸ್‌ಇ ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ 50 ವಿದ್ಯಾರ್ಥಿಗಳು ತೇರ್ಗಡೆಯಾಗುವುದರ ಮೂಲಕ ಶಾಲೆಗೆ ಶೇಕಡಾ ನೂರರಷ್ಟು ಫಲಿತಾಂಶ ತಂದು ಕೊಟ್ಟಿದ್ದಾರೆ ಎಂದರು.ವಿಐಪಿ ಶಾಲೆ ಪ್ರಾರಂಭವಾಗಿ 9 ವರ್ಷಗಳು ಕಳೆಯುತ್ತಿದೆ ಇದುವರೆಗೂ ಸಿಬಿಎಸ್‌ಇ 10ನೇ ತರಗತಿಯ 3 ಬ್ಯಾಚ್ ವಿದ್ಯಾರ್ಥಿಗಳು ಉತ್ತಮವಾಗಿ ನೂರರಷ್ಟು ಫಲಿತಾಂಶ ಸಾಧಿಸಿಕೊಂಡು ಸಿಬಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತ ಬಂದಿದ್ದು ಈ ಬಾರಿಯೂ 4ನೇ ಬ್ಯಾಚ್ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ- 07, ಉನ್ನತ ಶ್ರೇಣಿ– 10, ಪ್ರಥಮ ಶ್ರೇಣಿ -15, ದ್ವಿತೀಯಶ್ರೇಣಿ– 12,ತೃತೀಯ ಶ್ರೇಣಿಯಲ್ಲಿ -06 ವಿದ್ಯಾರ್ಥಿಗಳು ತೇರ್ಗಡೆಯಾಗಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು…

Read More