ನ್ಯೂಜ್ ಡೆಸ್ಕ್:ಕೇಂದ್ರ ಸರ್ಕಾರ ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಮೂಲ ಆಮದು import ತೆರಿಗೆಯನ್ನು 20% ರಷ್ಟು ಹೆಚ್ಚಿಸಿದೆ. ಇದರಿಂದಾಗಿ ಖಾದ್ಯ ತೈಲ ಬೆಲೆಗಳನ್ನು ಹೆಚ್ಚಿಸಿ, ಬೇಡಿಕೆ ತಗ್ಗಿಸಬಹುದು ಎಂಬ ಅಂದಾಜಿನೊಂದಿಗೆ ತಾಳೆ ಎಣ್ಣೆ, ಸೋಯಾಬಿನ್ ಮತ್ತು ಸೂರ್ಯಕಾಂತಿ ಎಣ್ಣೆಯ ಸಾಗರೋತ್ತರ (ವಿದೇಶಿ) ಖರೀದಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು ಇದರಿಂದಾಗಿ ಚಿಕಾಗೋ ಬೋರ್ಡ್ ಆಫ್ ಟ್ರೇಡ್ ಸೋಯಾ ಎಣ್ಣೆ ನಷ್ಟ ಅನುಭವಿಸಿ ಶೇ 2ರಷ್ಟು ವ್ಯಪಾರ ಕುಸಿತ ಕಂಡಿದೆ. ಕಚ್ಛಾ ತಾಳೆ ಎಣ್ಣೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಶೇ 20ರಷ್ಟು ಕನಿಷ್ಠ ಸೀಮಾ ಸುಂಕವನ್ನು ಏರಿಕೆ ಮಾಡಿದೆ. ಇದು ಮೂರು ಖಾದ್ಯ ತೈಲಗಳ ಮೇಲಿನ ಒಟ್ಟಾರೆ ಆಮದು ತೆರಿಗೆಯನ್ನು 5.5ರಷ್ಟು 27.5ರಷ್ಟು ಹೆಚ್ಚಿಸಲಿದೆ ಈ ಹಿನ್ನಲೆಯಲ್ಲಿ ಭಾರತದ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಹಾಗು ಸಮಾಜ ಕಲ್ಯಾಣ ಸರ್ಚಾರ್ಜ್ ಗೆ ಇದು ಒಳಪಟ್ಟಿರುತ್ತದೆ.ಸರ್ಕಾರ ಗ್ರಾಹಕರು…
Author: Srinivas_Murthy
ಶ್ರೀನಿವಾಸಪುರ: ಪಟ್ಟಣದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಘಟಕ(KSRTC Depo)ದಲ್ಲಿ ಸ್ಥಾಪಿಸಿದ್ದ ಗಣೇಶ ಮೂರ್ತಿಯನ್ನು ಆರು ದಿನಗಳಕಾಲ ಭಕ್ತಿಯಿಂದ ಪೂಜಿಸಿ ಭವ್ಯ ಮೆರವಣಿಗೆ ಮೂಲಕ ಕೊಂಡ್ಯೊಯ್ದು ವಿಧಿ ವಿಧಾನಗಳ ಮೂಲಕ ಶುಕ್ರವಾರ ವಿಸರ್ಜಿಸಲಾಯಿತು.ಅರ್ಚಕರು ಗಣೇಶ ಮೂರ್ತಿಗಳಿಗೆ ವಿಧಿ ವಿಧಾನಗಳ ಮೂಲಕ ಪೂಜಾ ವಿಧಾನಗಳನ್ನು ನೆರವೇರಿಸಿದರು. ನಂತರ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ ಪಲ್ಲಕಿ ರಥದಲ್ಲಿ ಗಣೇಶ ಮೂರ್ತಿಯನ್ನು ಭಕ್ತಿಭಾವದಿಂದ ಇಟ್ಟು ನಗರದ ಪ್ರಮುಖ ಸ್ಥಳಗಳಾದ ಮುಳಬಾಗಿಲು ವೃತ್ತ, ಎಂ.ಜಿ.ರಸ್ತೆ ಬಸ್ ಸ್ಟಾಂಡ್ ನಲ್ಲಿ ಇಂದಿರಾಭವನ್ ವೃತ್ತ, ಹೀಗೆ ಎಲ್ಲಾ ಕಡೆಗಳಲ್ಲೂ ಗಣೇಶನ ಉತ್ಸವಮೂರ್ತಿ ಭವ್ಯ ಮೆರವಣಿಗೆ ಸಾಗಿ ವಿಸರ್ಜನೆಗೆ ಕೊಂಡ್ಯೊಯಲಾಯಿತು.ಡಿಜೆಗಳ ಅಬ್ಬರ ಇಲ್ಲದೆ KSRTC ನೌಕರರು ಕೇಸರಿ ಟೋಪಿ ಶಾಲು ಧರಸಿ ಡ್ರಮ್ಸ್ ಮತ್ತು ತಮಟೆ ಸದ್ದಿಗೆ ಹೆಜ್ಜೆಹಾಕಿ ನೃತ್ಯ ಮಾಡುತ್ತ ಮೆರವಣಿಗೆಯಲ್ಲಿ ಸಾಗುತ್ತ ಸಂಭ್ರಮಿಸಿದರು. ಮುಳಬಾಗಿಲು ತಾಲೂಕಿನ ವಾದ್ಯಗಾರರು ಡ್ರಮ್ಸ್ ಮತ್ತು ತಮಟೆಗಳನ್ನು ಅಚ್ಚುಕಟ್ಟಾಗಿ ಭಾರಿಸಿದರು.
ಶ್ರೀನಿವಾಸಪುರ:ಸಮುದ್ರದಲ್ಲಿ ಈಜಾಡುತ್ತಿದ್ದ ಶ್ರೀನಿವಾಸಪುರದ ಯುವಕನೊರ್ವ ನೀರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಭಾವಿಕುಡ್ಲ ಬೀಚ್ (ಕಡಲತೀರ)ನಲ್ಲಿ ನಡೆದಿದೆ.ಶ್ರೀನಿವಾಸಪುರ ಪಟ್ಟಣದ ವಿವೇಕಾನಂದ ರಸ್ತೆಯ ನಿವಾಸಿ ಪಟ್ಟಾ ಕುಟುಂಬದ ವೆಂಕಟೇಶ್ ಎನ್ನುವರ ಮಗ ವಿನಯ್ ಎಸ್.ವಿ (22) ನೀರುಪಾಲಾದ ವಿದ್ಯಾರ್ಥಿಯಾಗಿದ್ದು, ಆತನ ಮೃತದೇಹ ಶುಕ್ರವಾರ ಕಡಲ ತೀರದಲ್ಲಿ ದೊರೆತಿದೆ. ಬೆಂಗಳೂರಿನ ಕನಕಪುರ ರಸ್ತೆ ರಘುವನಹಳ್ಳಿಯಲ್ಲಿರುವ ಹಿಲ್ ಸೈಡ್ ಫಾರ್ಮಸಿ ಕಾಲೇಜಿನ ಒಟ್ಟು 48 ವಿದ್ಯಾರ್ಥಿಗಳು ಗೋಕರ್ಣ ಪ್ರವಾಸಕ್ಕೆ ಹೋಗಿದ್ದರು ಈ ವೇಳೆ ಸಮುದ್ರಲ್ಲಿ ಎಂಜಾಯ್ ಮಾಡುತ್ತಿದ್ದಾಗ ಅವಘಡ ನಡೆದಿದ್ದು ವಿಧ್ಯಾರ್ಥಿಗಳು ಅಪಾಯದಲ್ಲಿದ್ದವರನ್ನ ಗಮನಿಸಿ ಸ್ಥಳೀಯರಾದ ದುಬ್ಬಸಸಿಯ ಸರ್ವೇಶ ಮೊರ್ಜೆ ಮತ್ತು ಪಂಢರಿನಾಥ ಮೂರ್ಜೆ ತಕ್ಷಣ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಇವರಿಗೆ ಕರಾವಳಿ ಕಾವಲು ಪೊಲೀಸ್ ಪಡೆಯವರು ಸಹಕರಿಸಿ ಹರಸಾಹಸ ಪಟ್ಟು ಒಟ್ಟು ಐವರನ್ನು ದಡಕ್ಕೆ ತಂದು ಪ್ರಾಣ ಉಳಿಸಿದ್ದಾರೆ.ಆದರೆ ವಿನಯ್ ಎಸ್.ವಿ ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗಿದ್ದು ಶುಕ್ರವಾರ ಪತ್ತೆಯಾಗಿದ್ದು ಇಂದು ಶನಿವಾರ ವಿನಯ್ ಮೃತದೇಹವನ್ನು ಶ್ರೀನಿವಾಸಪುರಕ್ಕೆ ತಂದು…
ನ್ಯೂಜ್ ಡೆಸ್ಕ್:ಟಮ್ಯಾಟೊ ತುಂಬಿದ್ದ ಕಂಟೈನರ್ ಲಾರಿ ಅತಿವೇಗದ ಚಾಲನೆಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ಕಾರಿನ ಮೇಲೆ ಬಿದ್ದಪರಿಣಾಮ ಕಾರಿನಲ್ಲಿದ್ದ ನಾಲ್ವವರು ಸ್ಥಳದಲ್ಲಿ ಸಾವನ್ನಪ್ಪಿರುವ ಧಾರುಣ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿ-ತಿರುಪತಿ ಹೆದ್ದಾರಿಯ ಭಾಕರಪೇಟ್ ಘಾಟ್ ರಸ್ತೆಯಲ್ಲಿ ನಡೆದಿದೆ.ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಅಪಘಾತಕ್ಕೆ ಕಾರಣವಾದ ಲಾರಿ ಟೊಮೆಟೊ ಲೋಡ್ ಮಾಡಿಕೊಂಡು ಕಲಕಡದಿಂದ ಹೋರಟು ಭಾಕರಪೇಟ್ ಘಾಟ್ ರಸ್ತೆ ತಿರುಪತಿ ಮಾರ್ಗವಾಗಿ ಚನೈಗೆ ಹೋರಟಿತ್ತು ಘಾಟ್ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೋಡೆದು ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಂಟೈನರ್ ಚಲಾಯಿಸುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಿಯ ಪೊಲೀಸರ ಪ್ರಕಾರ, ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರದ ಹತ್ತಿರ ಇರುವ ಹರಿಸ್ಥಳ ಗ್ರಾಮದ ಕುಟುಂಬವೊಂದರ ಸದಸ್ಯರು ಗುರುವಾರ ತಿರುಮಲ ದರ್ಶನ ಮುಗಿಸಿ ಮಧ್ಯಾಹ್ನ ಕಾರಿನಲ್ಲಿ ಊರಿಗೆ ಹಿಂತಿರುಗುತ್ತಿದ್ದರು ಭಾಕರಪೇಟೆಯ ಘಾಟ್ ರಸ್ತೆಯಲ್ಲಿ…
ನ್ಯೂಜ್ ಡೆಸ್ಕ್:ಹಿರಿಯ ಕಮ್ಯುನಿಸ್ಟ್ ದಿಗ್ಗಜ ಸಿಪಿಎಂ(ಎಂ) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ (72) ನಿಧನರಾಗಿದ್ದಾರೆ. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಅವರು ಕಳೆದ ತಿಂಗಳು ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. 1992 ರಿಂದ ಸಿಪಿಎಂ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದ ಅವರು 2005 ರಿಂದ 2017 ರವರೆಗೆ ರಾಜ್ಯಸಭಾ ಸಂಸದರಾಗಿ ಕೆಲಸ ಮಾಡಿದ್ದಾರೆ. ಸಿಪಿಎಂ ಧುರೀಣ ಸೀತಾರಾಮ್ ಯೆಚೂರಿ ಅವರು ಸುದೀರ್ಘ ಕಾಲ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದ್ದು 2005 ರಲ್ಲಿ ಬಂಗಾಳದಿಂದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದ್ದ ಅವರು. ತೆಲುಗು, ಇಂಗ್ಲಿಷ್, ಹಿಂದಿ ಮತ್ತಿತರ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು.ಮಾರ್ಕ್ಸ್‌ವಾದದ ತತ್ವಗಳನ್ನು ನಂಬಿದ್ದ ಅವರು ಕಮ್ಯುನಿಸ್ಟ್ ನಾಯಕರಲ್ಲಿ ಅಗ್ರಗಣ್ಯ ನಾಯಕರಾಗಿ ಜನಪ್ರತಿನಿಧಿ ಸಭೆಗಳಲ್ಲಿ ತಮ್ಮದೆ ಶೈಲಿಯಲ್ಲಿ ಜನ ಸಾಮಾನ್ಯರ ಪರ ವಕಾಲತ್ತು ವಹಿಸುತ್ತ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು.ಯಚೂರಿ ವೈಯುಕ್ತಿಕ ಜೀವನಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಯಚೂರಿ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ ಈ ಕಮ್ಯುನಿಸ್ಟ್ ಅಗ್ರನೇತ ಆಗಸ್ಟ್ 12, 1952…
ಚಿಂತಾಮಣಿ:ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಾರ್ಡ್ ನಂ 7ರ.ಸದಸ್ಯ ಆರ್ ಜಗನ್ನಾಥ್, ಉಪಾಧ್ಯಕ್ಷರಾಗಿ ವಾರ್ಡ್ ನಂ:27 ರ ರಾಣಿಯಮ್ಮರವರು ಅವಿರೋಧ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಅಧಿಕಾರ ಮುಂದುವರದಿದೆ.ಇಂದು ನಡೆದ ಚಿಂತಾಮಣಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು ಚುನಾವಣಾ ಅಧಿಕಾರಿಯಾದ ಅಶ್ವಿನ್ ರವರು ಚುನಾವಣೆಯನ್ನು ನಡೆಸಿದ್ದು ಕಾಂಗ್ರೆಸ್ ಪಕ್ಷದ ಸದಸ್ಯ ಆರ್ ಜಗನ್ನಾಥ್, ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ರಾಣಿಯಮ್ಮ ನಾಮಪತ್ರ ಸಲ್ಲಿಸಿದ್ದು ಇತರೆ ಯಾರು ಸಹ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಆವಿರೋಧವಾಗಿ ಆಯ್ಕೆಯಾದರು.ಸಚಿವರಿಂದ ಶುಭಹಾರೈಕೆಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಆವಿರೋಧವಾಗಿ ಆಯ್ಕೆ ಘೋಷಣೆಯಾದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ ಸಿ ಸುಧಾಕರ್ ರವರು ಕಾಂಗ್ರೆಸ್ ನಗರಸಭಾ ಸದಸ್ಯರೊಂದಿಗೆ ಆಗಮಿಸಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭಕೋರಿ ಮಾತನಾಡಿ ಚಿಂತಾಮಣಿ ನಗರವನ್ನು ಅಭಿವೃದ್ಧಿ ಪಥದತ್ತ ತಗೆದುಕೊಂಡು ಹೋಗಲು ಪಕ್ಷಾತೀತವಾಗಿ ಶ್ರಮಿಸುವಂತೆ…
ನ್ಯೂಜ್ ಡೆಸ್ಕ್: ಇದು ಕಾಕಾತಾಳಿಯವೊ ಏನೊ ಎಐಸಿಸಿ ಮುಖ್ಯಸ್ಥ ರಾಹುಲ್-ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರು ಅಮೆರಿಕ ಪ್ರವಾಸದಲ್ಲಿದ್ದಾರೆ.ಅಮೇರಿಕಾದಲ್ಲಿ ಇಬ್ಬರು ನಾಯಕರು ಭೇಟಿಯಾಗಿದ್ದಾರೆ ಇಬ್ಬರೂ ಆತ್ಮೀಯವಾಗಿ ಮಾತನಾಡುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.ಡಿಕೆಶಿವಕುಮಾರ್ ಪತ್ನಿ ಉಷಾ ತಮ್ಮ ಪತಿಯೊಂದಿಗೆ ವೈಯಕ್ತಿಕ ಭೇಟಿಗಾಗಿ ಅಮೆರಿಕಕ್ಕೆ ತೆರಳಿದ್ದರು. ಮತ್ತೊಂದೆಡೆ, ಅಮೆರಿಕಾದಲ್ಲಿರುವ ಭಾರತೀಯರು ಮತ್ತು ವಿದ್ಯಾರ್ಥಿಗಳನ್ನು ಭೇಟಿಯಾಗಲು ರಾಹುಲ್ ಗಾಂಧಿ ಅಮೇರಿಕಾ ಸುತ್ತುತ್ತಿದ್ದಾರೆ ಈ ಸಮಯದಲ್ಲಿ ಇಬ್ಬರೂ ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾಗಿದ್ದಾರೆ. ರಾಹುಲ್ ಗಾಂಧಿ, ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ ಜೊತೆ ಇರುವ ಫೋಟೋವನ್ನು ಸ್ವತಃ ಡಿ. ಕೆ. ಶಿವಕುಮಾರ್ ಹಂಚಿಕೊಂಡಿದ್ದಾರೆ.ಭೇಟಿಗೆ ರಾಜಕೀಯ ಮಹತ್ವಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ ವಿಚಾರಣೆ ನಡೆಯುತ್ತಿದೆ ಈ ಮದ್ಯೆ ಕೆಲ ಹಿರಿಯ ಕಾಂಗ್ರೆಸ್ ಶಾಸಕರು ಸಚಿವರು ಮುಖ್ಯಮಂತ್ರಿ ಪಟ್ಟದ ಕುರಿತಂತೆ ಹೇಳಿಕೆಗಳು ಬೆನ್ನಲ್ಲೆ ಕರ್ನಾಟಕದ ಸಿಎಂ ಸ್ಥಾನದ ಪ್ರಮುಖ ಅಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್ ಮತ್ತು ರಾಹುಲ್ ಭೇಟಿ ಮಹತ್ವ ಪಡೆದುಕೊಂಡಿದ್ದರೆ ಕರ್ನಾಟಕ ರಾಜಕೀಯ…
ಬೆಂಗಳೂರು:ಕರ್ತವ್ಯ ನಿರತರಾಗಿದ್ದಾಗಲೇ ಹೃದಯಾಘಾತದಿಂದ ಮೃತ ಪಟ್ಟಿದ್ದ ವಿಜಯ ಕರ್ನಾಟಕ ಪತ್ರಿಕೆಯ ಬಳ್ಳಾರಿ ವರದಿಗಾರ ವೀರೇಶ್ ಜಿ.ಕೆ. ಅವರ ಕುಟುಂಬಕ್ಕೆ ನೆರವು ನೀಡುವಂತೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ)ಮನವಿಮಾಡಿತ್ತು ಈ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ಲಕ್ಷ ರೂ ಪರಿಹಾರ ಮಂಜೂರು ಮಾಡಿ ಮಾನವೀಯತೆ ಮೆರೆದಿದ್ದಾರೆ.ಪ್ರಜಾವಾಣಿ ಸೇರಿದಂತೆ ಹಲವು ಮಾಧ್ಯಮದಲ್ಲಿ ಕೆಲಸ ಮಾಡಿದ್ದ ವೀರೇಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕುಟುಂಬ ತೀವ್ರ ಸಂಕಷ್ಟದಲ್ಲಿದ್ದು ಈ ಬಗ್ಗೆ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಗಮನಕ್ಕೆ ವಿಚಾರ ಮುಟ್ಟಿಸಿ ನಂತರ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಿದ್ದರು.ಕೆಯುಡಬ್ಲೂಜೆ ಸಲ್ಲಿಸಿದ ಕೋರಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರ ಮಂಜೂರು ಮಾಡಿದ್ದಾರೆ.ಪರಿಹಾರ ಮಂಜೂರು ಮಾಡಿರುವ ಸಿಎಂ ಸಿದ್ದರಾಮಯ್ಯ ಮತ್ತು ಈ ವಿಚಾರದಲ್ಲಿ ಸಹಕರಿಸಿದ ಕೆ.ವಿ.ಪ್ರಭಾಕರ್ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಕೃತಜ್ಞತೆ ಸಲ್ಲಿಸಿದೆ.
ಚಿಂತಾಮಣಿ:ಚಿಂತಾಮಣಿ ನಗರದ ಎಪಿಎಂಸಿ ಮಾರುಕಟ್ಟೆ ಭಾನುವಾರದ ಸಂತೆಯಂದು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತದೆ ಇದು ಜಗತ್ತಿಗೆ ಗೊತ್ತಿರುವ ಸತ್ಯ ಇಂತಹ ಮಾರುಕಟ್ಟೆಯಲ್ಲಿ ಹೊಲ್ ಸೇಲ್ ಅಂಗಡಿಯಲ್ಲಿ ಮೊನ್ನೆ ಭಾನುವಾರ ಖತರನಾಕ್ ಕಳ್ಳರು 5 ಲಕ್ಷ ರೂ ಹಣ ಎಗರಿಸಿಕೊಂಡು ಹೋಗಿರುವ ಘಟನೆ ನಡೆದಿರುತ್ತದೆ.ಚೇಳೂರು ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಧವಸಧಾನ್ಯ ವಿಭಾದಲ್ಲಿರುವ ಕೈಲಾಸ ಟ್ರೇಡರ್ಸ್ ಮಾಲೀಕ ಅಕ್ಕಿ ಹೋಲ್ ಸೇಲ್ ಮಾರಾಟಗಾರ ರಾಮಕೃಷ್ಣಪ್ಪ ಭಾನುವಾರ ಸಂತೆ ದಿನವಾದ ಹಿನ್ನಲೆಯಲ್ಲಿ ಅಕ್ಕಿ ಖರೀದಿಸಲು ಗಿರಾಕಿಗಳು ಬರುತ್ತಿದ್ದು ಜನ ಸಂದಣಿ ಏರ್ಪಟ್ಟಿದೆ ಈ ಸಂದರ್ಭದಲ್ಲಿ ಮಾಲಿಕ ಸೈಕಲ್ ಗ್ಯಾಪ ವಿರಾಮದಲ್ಲಿ ಪಕ್ಕದ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಕೈಲಾಸ ಟ್ರೇಡರ್ಸ್ ಅಂಗಡಿಯಲ್ಲಿ ಬೀಗ ಹಾಕಿಟ್ಟಿದ್ದ ಕ್ಯಾಷ್ ಟೇಬಲ್‌ನ ಡೋರ್ ಬಾಗಿಲು ಮುರಿದ ಕಳ್ಳರು ಕ್ಷಣಾರ್ಧದಲ್ಲಿ 5 ಲಕ್ಷ ರೂಗಳನ್ನು ದೋಚಿ ಕೊಂಡು ಹೋಗಿರುವ ಘಟನೆ ನಡೆದಿದೆ. ಭಾನುವಾರ ಸಂತೆ ದಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಹೋಲ್ ಸೇಲ್ ಅಂಗಡಿಗಳಲ್ಲಿ ಕೊಟ್ಯಾಂತರ ಹಣದ ವ್ಯವಹಾರ ನಡೆಯುತ್ತದೆ ಈ ಹಿನ್ನಲೆಯಲ್ಲಿ…
ನ್ಯೂಜ್ ಡೆಸ್ಕ್:ಪಂಜಾಬ್‌ನ ಜಲಂಧರ್‌ನ ಪ್ರೀತಮ್ ಲಾಲ್ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿಸಿ ಮಾರುವಂತ ಗುಜರಿ ವ್ಯಾಪರಸ್ಥ ಈತ ತನ್ನ ಸಂಪಾಧನೆಯಲ್ಲಿ ಕಳೆದ 50 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ, ಆದರೆ ಲಾಟರಿಯಲ್ಲಿ ಪ್ರತಿ ಬಾರಿಯೂ ನಿರಾಸೆ ಅನುಭವಿಸುತ್ತಿದ್ದ. ಇನ್ನು ಲಾಟರಿ ಕೊಳ್ಳಬಾರದು ಅಂದುಕೊಂಡೆ ಮತ್ತೆ ಮತ್ತೆ ಲಾಟರಿ ಕೊಳ್ಳುವುದು ನಿರಾಸೆ ಪಡುವುದು 70 ವರ್ಷದ ಪ್ರೀತಮ್ ಲಾಲ್ ಗೆ ಸಾಮನ್ಯವಾಗಿತ್ತು ಇದೇ ಕೊನೆಯದು ಎಂದು ಹೆಂಡತಿ ಹೇಳಿದ ಮೇಲೆ 500 ರೂಪಾಯಿ ಕೊಟ್ಟು ಖರೀದಿಸಿದ ಲಾಟರಿಯಲ್ಲಿ ರೂ.2.5 ಕೋಟಿ ಗೆದ್ದಿದ್ದಾರೆ.ತಾಳ್ಮೆ ಪರೀಕ್ಷಿಸಿದ ಅದೃಷ್ಟ ಕೊನೆಗು ಪ್ರೀತಮ್ ಮನೆ ಬಾಗಿಲು ತಟ್ಟಿದ್ದು ಪಂಜಾಬ್ ರಾಜ್ಯದ ಲಾಟರಿ ಕೈ ಹಿಡದಿದೆ.