Author: Srinivas_Murthy

ನ್ಯೂಜ್ ಡೆಸ್ಕ್: ನಾಲ್ಕು ದಶಕಗಳಿಗಿಂತಲೂ ಹೆಚ್ಚುಕಾಲದಿಂದ ಭಾರತದ ಸಿನಿಮಾ ಪ್ರೇಮಿಗಳನ್ನು ತಮ್ಮ ನೃತ್ಯ,ಫೈಟ್ಸ್, ಡೈಲಾಗ್ಸ್ ಮೂಲಕ ರಂಜಿಸುತ್ತ ಕೋಟಿಗಟ್ಟಲೆ ಅಭಿಮಾನಿಗಳನ್ನು ಗಳಿಸಿರುವ ಮೆಗಾಸ್ಟಾರ್ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಚಿರಂಜೀವಿ ಅವರ ಸಿನಿಮಾ ಪ್ರಯಾಣಕ್ಕೆ ಮತ್ತೊಂದು ಅಪರೂಪದ ಗೌರವ ಲಭಿಸಿದೆ.ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದ್ದಾರೆ,ಮೆಗಾಸ್ಟಾರ್ ಚಿರಂಜೀವಿ ತಮ್ಮ 45 ವರ್ಷಗಳ ವೃತ್ತಿ ಜೀವನದಲ್ಲಿ ಇದುವರೆಗೆ 156 ಚಿತ್ರಗಳನ್ನು ಮಾಡಿದ್ದಾರೆ. 537 ಹಾಡುಗಳಿಗೆ 24 ಸಾವಿರ ಹೆಜ್ಜೆ ಹಾಕಿ ಭಾರತದಲ್ಲಿಯೇ ಯಶಸ್ವಿ ಸ್ಟಾರ್ ನಟನಾಗಿರುವ ಚಿರಂಜಿವಿ ಅವರಿಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನನ ಪ್ರತಿನಿಧಿಗಳು ಮತ್ತು ಬಾಲಿವುಡ್ ನಟ ಅಮಿರ್ ಖಾನ್ ಜೊತೆಗೂಡಿ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.ಈ ಸಮಾರಂಭದಲ್ಲಿ ನಿರ್ಮಾಪಕರಾದ ಅಲ್ಲು ಅರವಿಂದ್, ಸುರೇಶ್ ಬಾಬು, ಜೆಮಿನಿ ಕಿರಣ್, ಮೈತ್ರಿ ರವಿಶಂಕರ್, ತಮ್ಮಾರೆಡ್ಡಿ ಭಾರದ್ವಾಜ, ಕೆಎಸ್ ರಾಮರಾವ್, ನಿರ್ದೇಶಕ ರಾಘವೇಂದ್ರರಾವ್, ಬಾಬಿ, ಗುಣಶೇಖರ್, ಬಿ ಗೋಪಾಲ್, ಕೋದಂಡರಾಮಿ ರೆಡ್ಡಿ ಮುಂತಾದವರು ಭಾಗವಹಿಸಿದ್ದರು. 1978 ರಲ್ಲಿ ಮೆಗಾಸ್ಟಾರ್ ಚಿರಂಜಿವಿ…

Read More

ಬೆಂಗಳೂರು:ತಿರುಮಲ ಪ್ರಸಾದ ತಯಾರಿಕೆಯಲ್ಲಿ ಕಲಬೆರಕೆ ವಿವಾದ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಪೂಜೆ, ದೀಪ, ಅನ್ನ ಪ್ರಸಾದಕ್ಕೆ ನಂದಿನಿ ತುಪ್ಪವನ್ನೇ ಬಳಸಬೇಕು ಎಂದು ಆದೇಶ ಹೋರಡಿಸಿದೆ ಈ ಸಂಬಂಧ ಆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

Read More

ಮಳಿಗೆ ಹಂಚಿಕೆಯಲ್ಲಿ ಅಕ್ರಮ ಇತರೆ ಸಮುದಾಯದವರಿಗೆ ಕೊಟ್ಟು ಪರಿಶಿಷ್ಟ ವ್ಯಾಪಾರಸ್ಥನಿಗೆ ನೀಡದೆ ಸೊಸೈಟಿ ಮಂಡಳಿ ಅನ್ಯಾಯ ಶ್ರೀನಿವಾಸಪುರ:ತಾಲೂಕಿನ ಗೌನಿಪಲ್ಲಿ ದೊಡ್ಡಪ್ರಮಾಣದ ಪ್ರಾಥಮಿಕ ಪತ್ತಿನ ಸಹಕಾರ ಸಂಘದ(ಗೌವನಪಲ್ಲಿ ಸೊಸೈಟಿ) ವತಿಯಿಂದ ಗೌವನಪಲ್ಲಿಯಲ್ಲಿ ಮಳಿಗೆಗಳನ್ನು ನಿರ್ಮಾಣಮಾಡಲಾಗಿದೆ ಉಳಿದ ಜಾಗದಲ್ಲಿ ತಗಡಿನ ಒಪ್ಪಾರ ಹಾಕಿ ಬಿದಿ ಬದಿ ವ್ಯಾಪರಸ್ಥರಿಗೆ ನೀಡಲು ಉದ್ದೇಶಿಸಿರುವ ಸೋಸೈಟಿ ಆಡಳಿತ ಮಂಡಳಿ ಒಪ್ಪಾರದ ಜಾಗವನ್ನು ಪಾರದರ್ಶಕತೆ ಇಲ್ಲದೆ ಒಳಗೊಳಗೆ ವ್ಯವಹಾರ ನಡೆಸಿ ತಮಗೆ ಬೇಕಿರುವರಿಗೆ ಒಪ್ಪಾರದ ಮಳಿಗೆಗಳ ಹಂಚಿಕೆ ಮಾಡಲಾಗುತ್ತಿದ್ದು ಅಲ್ಲೆ ಹೂವಿನ ವ್ಯಾಪರ ಮಾಡುತ್ತಿರುವ ಪರಿಶಿಷ್ಟ ಜಾತಿಯ ವೆಂಕಟೇಶ್ ಅವರು ಅನ್ಯಾಯವಾಗಿದೆ ಎಂದು ಸೋಸೈಟಿ ಆಡಳಿತ ಮಂಡಳಿ ವಿರುದ್ದ ಆರೋಪ ಮಾಡಿದ್ದಾರೆ.ಈ ಕುರಿತು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು ನಾನು ಮೂಲತಃ ಗೌನಿಪಲ್ಲಿ ಗ್ರಾಮದ ನಿವಾಸಿಯಾಗಿದ್ದು, ಕಳೆದ 25 ವರ್ಷಗಳಿಂದ ಸೋಸೈಟಿ ಕಟ್ಟಡಕ್ಕೆ ಹೊಂದಿಕೊಂಡು ತೆಂಗಿನ ಗರಿಗಳ ಒಪ್ಪಾರ ಹಾಕಿಕೊಂಡು ಹೂವಿನ ಅಂಗಡಿ ನಡೆಸುತ್ತ ಜೀವನ ಮಾಡುತ್ತಿರುವೆ 4 ತಿಂಗಳ ಹಿಂದೆ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಹೂವಿನ ಅಂಗಡಿ ಸುಟ್ಟು…

Read More

ನ್ಯೂಜ್ ಡೆಸ್ಕ್:ಆಂಧ್ರದಲ್ಲಿ ವೈಎಸ್ಆರ್ ಆಡಳಿಲಾವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ರಾಜ್ಯ ಆಂಧ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದಾರೆ.ಹಿಂದುಗಳ ಪರಮ ಪವಿತ್ರ ಪುಣ್ಯಕ್ಷೇತ್ರವಾದ ತಿರುಮಲ ಶ್ರೀ ವೆಂಕಟೇಶ್ವರನ ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು (ಮೀನಿನ ಎಣ್ಣೆ, ಹಂದಿಮಾಂಸದ ಕೊಬ್ಬು ಮತ್ತು ಗೋಮಾಂಸ ಕೊಬ್ಬು) ಮಿಶ್ರಣದ ತುಪ್ಪ ಬಳಕೆಯಾಗಿರುವ ಬಗ್ಗೆ ಸಂಶೋಧನ ವರದಿಗಳಿಂದ ನಾವೆಲ್ಲರೂ ತೀವ್ರವಾಗಿ ವಿಚಲಿತರಾಗಿದ್ದೇವೆ. ವೈಸಿಪಿ ಜಗನ್ ಸರ್ಕಾರ ರಚಿಸಿದ ಟಿಟಿಡಿ ಮಂಡಳಿಯು ಅನೇಕ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ಸಾಧ್ಯವಾದಷ್ಟು ಕಠಿಣ ಕ್ರಮ ತೆಗೆದುಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ಆದರೆ, ಇದು ದೇವಾಲಯಗಳ ಅಪವಿತ್ರಗೊಳಿಸುವಿಕೆ, ಅದರ ಭೂ ಸಮಸ್ಯೆಗಳು ಮತ್ತು ಇತರ ಧಾರ್ಮಿಕ ಆಚರಣೆಗಳ ಸುತ್ತಲಿನ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಅವರು ಹೇಳಿದರು.ಅವರ ಪ್ರಕಾರ, ಭಾರತದಾದ್ಯಂತ ದೇವಾಲಯಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಲು ರಾಷ್ಟ್ರೀಯ ಮಟ್ಟದಲ್ಲಿ ಸನಾತನ ಧರ್ಮ…

Read More

ಶ್ರೀನಿವಾಸಪುರ : ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿವೇತನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತೆ ಶ್ರೀನಿವಾಸಪುರ ತಾಲೂಕು ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ವಿದ್ಯಾರ್ಥಿಗಳಿಗೆ ಕರೆ ಇತ್ತಿದ್ದಾರೆ.2024-25 ನೇ ಸಾಲಿನಲ್ಲಿ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯುವ ಸಲುವಾಗಿ ದಿನಾಂಕ: 01.09.2024 ರಿಂದ ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಅವರನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಸಮಾಜ ಕಲಾಣ ಇಲಾಖೆಯಿಂದ ಮೆಟ್ರಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮ ಹಾಗೂ ಪ್ರೋತ್ಸಾಹಧನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.ವಿದ್ಯಾರ್ಥಿವೇತನವನ್ನು ಅರ್ಹ ಫಲಾನುಭವಿಗಳಿಗೆ ಇ-ಆಡಳಿತ ಕೇಂದ್ರದವರು ರೂಪಿಸಿ ಸಿದ್ಧಪಡಿಸಿರುವ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮೂಲಕ ಮಂಜೂರು ಮಾಡಲಾಗುತ್ತಿದೆ. ಸದರಿ ವಿದ್ಯಾರ್ಥಿವೇತನ ಕಾರ್ಯಕ್ರಮಗಳಲ್ಲಿ ವರ್ಷದಿಂದ ವರ್ಷಕ್ಕೆ ಫಲಾನುಭವಿಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದ್ದು ಅದರಲ್ಲೂ ಮುಖ್ಯವಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಕಾರ್ಯಕ್ರಮದಲ್ಲಿ ಫಲಾನುಭವಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿತ ಕಾಣುತ್ತಿದೆೀ ಕಾರಣದಿಂದ ಸದರಿ ಕಾರ್ಯಕ್ರಮಗಳ ಬಗ್ಗೆ ಫಲಾನುಭವಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಆಯೋಜಿಸಿರುವುದಾಗಿ…

Read More

ಡಾ.ವಿಷ್ಣುವರ್ಧನ್ ಅಂತ್ಯಸಂಸ್ಕಾರವಾದ ಪುಣ್ಯಭೂಮಿ ಇರುವಂತ ಜಾಗವನ್ನು ಅಭಿಮಾನ್ ಸ್ಟೂಡಿಯೋ ಮಾಲಿಕರು ಮಾರಟ ಮಾಡಲು ಸನ್ನಾಹ ಬೆಂಗಳೂರು: ಕನ್ನಡ ಸಿನಿಮಾರಂಗದ ಮೇರು ನಟ ಸಾಂಸೃತಿಕ ರಾಯಬಾರಿ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ ಸೆಪ್ಟೆಂಬರ್ 18 ಸಂಬ್ರಮದ ಹಬ್ಬ ತಮ್ಮ ಅಭಿಮಾನ ನಟ ಸಾಹಸಸಿಂಹ ಅಭಿನಯಬಾರ್ಗವ ಡಾ.ವಿಷ್ಣುವರ್ಧನ್ ಜನುಮದಿನದ ಆಚರಣೆ ಅದಕ್ಕಾಗಿ ಇಡಿ ರಾಜ್ಯಾದ್ಯಂತ ಇರುವಂತ ಲಕ್ಷಾಂತರ ಜನರು ಡಾ.ವಿಷ್ಣುವರ್ಧನ್ ಅಂತ್ಯಸಂಸ್ಕಾರವಾದ ಪುಣ್ಯಭೂಮಿ ಇರುವಂತ ಅಭಿಮಾನ್ ಸ್ಟೂಡಿಯೊ ಆವರಣಕ್ಕೆ ಆಗಮಿಸಿ ತಮ್ಮ ನೆಚ್ಚಿನ ನಟನಿಗೆ ಅಭಿಮಾನದಿಂದ ಪೂಜೆ ಸಲ್ಲಿಸಿ ಸಂಬ್ರಮದಿಂದ ವಾಪಸ್ಸಾಗುತ್ತಿದ್ದರು ಇಂದು ಸಹ ನೂರಾರು ಮೈಲಿಗಳ ದೂರದೂರುಗಳಿಂದ ಬೆಳ್ಳಂಬೆಳಗ್ಗೆಯೇ ಬಂದು ಸಾಲುಗಟ್ಟಿ ನಿಂತಿದ್ದರಾದರೂ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ನಟ ಬಾಲಣ್ಣ ಅವರ ಮಕ್ಕಳು ತಡೆಯೊಡ್ಡಿದ್ದಾರೆ. ಸ್ಟುಡಿಯೋ ಗೇಟ್‌ ಬೀಗ ಹಾಕಿ ಸ್ಮಾರಕ ಮೈಸೂರಿನಲ್ಲಿ ಆಗಿದೆ ಹೋಗಿ ಪೂಜೆ ಮಾಡುವಂತೆ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಸ್ಮಾರಕದ ಗೇಟ್‌ ಬಳಿ ಪ್ರತಿಭಟನೆ ನಡೆಸಿ ಅಭಿಮಾನ್ ಸ್ಟೂಡಿಯೋ ಮಾಲಿಕರ ವಿರುದ್ದ ಅಸಮಧಾನ ವ್ಯಕ್ತಪಡಿದ್ದಾರೆ.ಡಾ.ವಿಷ್ಣುವರ್ಧನ್ ಜನುಮದಿನದ ಪ್ರಯುಕ್ತ ಸಂಘ…

Read More

ನ್ಯೂಜ್ ಡೆಸ್ಕ್:ಯಾಗಿ ಚಂಡಮಾರುತದ ಎಫೇಕ್ಟ್ ಸುಂದರವಾದ ಹಾಗು ಪ್ರವಾಸಿಗರ ಸ್ವರ್ಗ ದೇಶ ಮ್ಯಾನ್ಮಾರ್‌ ನಲ್ಲಿ ದೊಡ್ಡಮಟ್ಟದಲ್ಲಿ ಹಾನಿಗೊಳಗಾಗಿದೆ ಭಾರೀ ಮಳೆ ಮತ್ತು ಬಿರುಗಾಳಿಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಸುಮಾರು 236 ಜನರು ಸಾವನ್ನಪ್ಪಿದ್ದು 77 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂಎನ್ನಲಾಗಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. 6.31 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ರಸ್ತೆಗಳು ದೊಡ್ಡ ಪ್ರಮಾಣದಲ್ಲಿ ಹಾಳಾಗಿದ್ದು, ಆಸ್ತಿಪಾಸ್ತಿಗೆ ಹಾನಿಯಾಗಿದೆ. ಭಾರತದ ನೇರವು ಯಾಗಿ ಚಂಡಮಾರುತದಿಂದ ತತ್ತರಿಸಿರುವ ಮ್ಯಾನ್ಮಾರ್, ವಿಯೆಟ್ನಾಂ ಮತ್ತು ಲಾವೋಸ್‌ಗೆ ಭಾರತ ಸರ್ಕಾರ ಮಾನವೀಯತೆಯ ಸಹಾಯ ಹಸ್ತ ಚಾಚಿದೆ ಮ್ಯಾನ್ಮಾರ್‌ಗೆ ರೇಷನ್, ಬಟ್ಟೆ ಮತ್ತು ಔಷಧಗಳು ಸೇರಿದಂತೆ ಹತ್ತು ಟನ್‌ಗಳ ನೆರವು. IAF ವಿಯೆಟ್ನಾಂಗೆ ನೀರು ಶುದ್ಧೀಕರಣ ವಸ್ತುಗಳನ್ನು ನೀರಿನ ಪಾತ್ರೆಗಳು, ಹೊದಿಕೆಗಳು, ಅಡುಗೆ ಪಾತ್ರೆಗಳು, ಸೌರ ಲ್ಯಾಂಟರ್ನ್‌ಗಳನ್ನು ಒಳಗೊಂಡ 35 ಟನ್‌ಗಳ ನೆರವನ್ನು ಒಯ್ಯುತ್ತಿದೆ. ಜೆನ್‌ಸೆಟ್, ನೀರು ಶುದ್ಧೀಕರಣ ವಸ್ತುಗಳು, ನೈರ್ಮಲ್ಯ ಸರಬರಾಜು, ಸೊಳ್ಳೆ ಪರದೆಗಳು, ಹೊದಿಕೆಗಳು…

Read More

ನ್ಯೂಜ್ ಡೆಸ್ಕ್:ರೈತ ಕಾರ್ಮಿಕನೊರ್ವ ಕೃಷಿ ಕೆಲಸಕ್ಕೆ ಹೋಗುತ್ತಿರುವಾಗ ಅವನಿಗೆ ಅದೃಷ್ಟ ಕುಲಾಯಿಸಿದೆ ಇತನಿಗೆ ಅಪರೂಪದ ವಜ್ರದ ಹರಳು ದೊರೆತಿದೆ. ಇದು ಎಲ್ಲೋ ವಿದೇಶದಲ್ಲಿ ನಡೆದಿರುವುದಲ್ಲ ಇಲ್ಲೆ ಪಕ್ಕದ ಆಂಧ್ರಪ್ರದೇಶದಲ್ಲಿ ರಾಯಲಸಿಮೆ ಪ್ರಾಂತ್ಯದ ಕರ್ನೂಲು ಜಿಲ್ಲೆಯ ತುಗ್ಗಲಿ ಮಂಡಲದ ಸೂರ್ಯತಾಂಡದಲ್ಲಿ ರೈತನೊಬ್ಬ ಹೊಲಕ್ಕೆ ಕೆಲಸಕ್ಕೆ ಹೋಗುತ್ತಿದ್ದಾಗ ಕಣ್ಣಿಗೆ ಬಿದದ್ದು ಹೊಳೆಯುತ್ತಿದ್ದ ಬಿಳಿ ಬಣ್ಣದ ಕಲ್ಲು ತಕ್ಷಣ ಹತ್ತಿರ ಹೋಗಿ ಪರೀಕ್ಷಿಸಿದಾಗ.ಬೆಳ್ಳಗೆ ಮಿರಮಿರನೆ ಕಣ್ಣಿಗೆ ರಾಚಿದೆ ತಕ್ಷಣ ಅದನ್ನು ಕೈಗೆ ತೆಗೆದುಕೊಂಡು ನೋಡಿದ್ದಾನೆ ಅವನಿಗೆ ಅದು ಏನು ಎಂಬುದು ಅರ್ಥವಾಗಿಲ್ಲ ತನ್ನ ಸಹೋದ್ಯೋಗಿಗಳು ತೋರಿಸಿದ್ದಾನೆ ಅವರು ಇದು ವಜ್ರ ಇರಬಹುದು ಎಂದು ಅಂದಾಜಿನಲ್ಲಿ ಹೇಳಿದ್ದು ರೈತ ಕಾರ್ಮಿಕನಿಗೆ ಆನಂದಕ್ಕೆ ಮಿತಿಯೇ ಇಲ್ಲದಂತಾಗಿದೆ ಇದು ಹೊರ ಜಗತ್ತಿಗೆ ಗೊತ್ತಾಗಿ ರೈತನ ಕೂಲಿಕಾರನ ಮನೆಗೆ ಚಿನ್ನದ ವ್ಯಾಪಾರಿಗಳು ಅದನ್ನು ಖರೀದಿಸಲು ಸಾಲುಗಟ್ಟಿ ನಿಂತಿದ್ದಾರೆ, ಕೆಲವು ವ್ಯಾಪಾರಿಗಳು ವಜ್ರವನ್ನು ಪರೀಕ್ಷಿಸಿ ಅದು 8 ಕ್ಯಾರೆಟ್ ಎಂದು ತೀರ್ಮಾನಿಸಿ ವಜ್ರ ಖರೀದಿಗೆ ಪೈಪೋಟಿಗೆ ಬಿದ್ದಿದ್ದಾರೆ ಎನ್ನೂ ಅರಿಯದ ಕಾರ್ಮಿಕ ನನಗೆ…

Read More

ನಾಗಮಂಗಲ ಗಣೇಶ ವಿಸರ್ಜನೆ ಗಲಭೆಯಲ್ಲಿ ಕೆರಳದ ಇಬ್ಬರು ಪಿಎಫ್‌ಐ ಕಾರ್ಯಕರ್ತರು! ನ್ಯೂಜ್ ಡೆಸ್ಕ್:ನಾಗಮಂಗಲ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದಂತ ಗಲಭೆಗೆ ಸಂಬಂಧಿಸಿದಂತೆ ಕೇರಳ ಮೂಲದ ಇಬ್ಬರನ್ನು ಬಂಧಿಸಲಾಗಿದೆ ಎಂದು ಸಚಿವ ಚೆಲುವರಾಯ ಸ್ವಾಮಿ ಸ್ಪಷ್ಟನೆ ನೀಡಿದ್ದಾರೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾಗಮಂಗಲ ಗಲಭೆ ಸಂಬಂಧ ಅಲ್ಲೇ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕೇರಳ ಮೂಲದವರನ್ನು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಬಂಧಿಸಲಾಗಿದೆ.ನಾಗಮಂಗಲದ ಕೋಮು ಗಲಭೆಗೆ ಕೇರಳ ಲಿಂಕ್ ಇರೋದು ಕಂಡುಬರುತ್ತಿದೆ, ಅಲ್ಲದೇ ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರೂ ಈ ಗಲಭೆ ಹಿಂದಿದ್ದಾರೆ ಎನ್ನಲಾಗಿದ್ದು ಕೃತ್ಯಕ್ಕೆ ಮೊದಲೇ ಪ್ಲಾನ್‌ ಮಾಡಿದ್ದರು ಎಂಬ ಶಂಕೆಯೂ ವ್ಯಕ್ತವಾಗಿದೆ.FIRನಲ್ಲಿ ಆರೋಪಿಗಳ ಪೈಕಿ ಇಬ್ಬರು ಕೇರಳದವರುಇದಕ್ಕೆ ಪೂರಕ ಎನ್ನುವಂತೆ FIR ನಲ್ಲಿ ಉಲ್ಲೇಖವಾಗಿರುವ ಆ ಎರಡು ಹೆಸರುಗಳು ಕಾರಣವಾಗಿದೆ. FIR ನಲ್ಲಿರುವ 74 ಆರೋಪಿಗಳ ಪೈಕಿ ಕೇರಳದ ಇಬ್ಬರು ಪ್ರಕರಣದ 44ನೇ ಆರೋಪಿ ಯೂಸೂಫ್‌, ಹಾಗು 61ನೇ ಆರೋಪಿ ನಾಸೀರ್‌ ಎಂದು ನಮೂದಿಸಲಾಗಿದ್ದು ಇಬ್ಬರೂ ಕೇರಳದ ಮಲ್ಲಪುರಂ ನಿವಾಸಿಗಳು ಎಂದು…

Read More

ನ್ಯೂಜ್ ಡೆಸ್ಕ್:ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಗೂ ಮುನ್ನ ಅಲ್ಲಿ ದಿನೆದಿನೆ ಉಗ್ರರ ಚಟುವಟಿಕೆ ಹೆಚ್ಚುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಭಯೋತ್ಪಾದಕರು ಮತ್ತು ಭಾರತೀಯ ಸೇನಾ ಯೋಧರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ,ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮೊದಲ ಹಂತದ ಚುನಾವಣೆ ಇದೇ ತಿಂಗಳ 18ರಂದು ಆರಂಭವಾಗಲಿದೆ. 2019 ರಲ್ಲಿ ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿದ ನಂತರದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆಯಾಗಿದ್ದು ಕೆಲವು ತಿಂಗಳುಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಮತ್ತು ಎನ್‌ಕೌಂಟರ್‌ಗಳ ಸರಣಿಗಳು ನಡೆಯುತ್ತಿದೆ.ಇತ್ತೀಚೆಗೆ ಕಥುವಾ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಇಬ್ಬರು ಸೇನಾ ಯೋಧರು ಹತರಾಗಿದ್ದರು. ಇನ್ನೂ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂವರು ಉಗ್ರರು ಹತರಾಗಿದ್ದಾರೆ. ಗುಪ್ತಚರ ಮೂಲಗಳಿಂದ ಲಭಿಸಿದ ಮಾಹಿತಿಯೊಂದಿಗೆ ಖಾಯಂ ಪ್ರವೇಶಿಸಿದ ಭಾರತೀಯ ಸೇನೆ, ಉಗ್ರರನ್ನು ಸುತ್ತುವರಿದು ಸದೆಬಡಿದು ಜಮ್ಮು ಮತ್ತು ಕಾಶ್ಮೀರದ ಕಥುವಾ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿ ಶುಕ್ರವಾರ ಎರಡು ಎನ್‌ಕೌಂಟರ್‌ಗಳು…

Read More