ಚಿಂತಾಮಣಿ:ಚಿಂತಾಮಣಿ ನಗರದಲ್ಲಿ ಮಂಗಳವಾರ ಮಧ್ಯಾನಃ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಆರ್ಭಟದ ಮಳೆಯಿಂದ ಹಳ್ಳ-ಕೊಳ್ಳ ಚರಂಡಿಗಳಲ್ಲಿ ನೀರು ತುಂಬಿ ಹರಿಯುತ್ತಿದ್ದ ದೃಶ್ಯ ಎಲ್ಲಡೆ ಕಂಡು ಬಂತು.ಕುಂಬದ್ರೋಣವಾಗಿ ಸುರಿದ ಮಳೆಗೆ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.ರಸ್ತೆ ಕಾಲುವೆ ವ್ಯತ್ಯಾಸ ಇಲ್ಲದೆ ನೀರು ರಸ್ತೆ ಮೆಲೆ ಹರಿದಿದ್ದರಿಂದ ಒಡಾಡಲು ಜನ ಪರದಾಡಿದ್ದಾರೆ ನಗರದ ಬಹುತೇಕ ರಸ್ತೆಗಳು ಜಲಾವೃತವಾಗಿದ್ದು ರಸ್ತೆ ಮೆಲೆ ಜುಳು ಜುಳು ಎಂದು ನೀರು ಹರಿದು ಬಂದಿದೆ, ಜಲಾವೃತವಾದ ರೇಷ್ಮೇ ಗೂಡು ಮಾರುಕಟ್ಟೆರಾಮಕುಂಟೆ ರಸ್ತೆಯಲ್ಲಿನ ರೇಷ್ಮೆಗೂಡು ಮಾರುಕಟ್ಟೆ ಸಂಪೂರ್ಣ ಜಲಾವೃತಗೊಂಡು ಗೂಡು ಹರಾಜಿಗೆ ತಂದಿದ್ದ ರೈತರು ತಮ್ಮ ಗೂಡಿನ ಮೂಟೆಗಳನ್ನು ನೀರಿನಿಂದ ಕಾಪಾಡಲು ಹೈರಾಣವಾಗಿ ಕೊನೆಗೆ ತಗಡಿನ ಹರಾಜು ಕಟ್ಟೆ ಏರಿ ಗೂಡುಮೂಟೆಗಳನ್ನು ಹೊತ್ತುಕೊಂಡು ನಿಂತಿದ್ದಾರೆ.ಬೆಟ್ಟಗಳಿಂದ ಹರಿದು ಬಂದ ನೀರು ಟ್ಯಾಂಕ್ ಬಂಡ್ ರಸ್ತೆ ಮೂಲಕ ರಾಯಲ್ ಸರ್ಕಲ್ ಕಿಶೋರ್ ಸ್ಕೂಲ್ ಮುಂಭಾಗದ ರಸ್ತೆಗಳಲ್ಲಿ ಧಾರಕಾರವಾಗಿ ನದಿ ನಾಲೆಗಳಂತೆ ರಸ್ತೆ ಮೇಲೆ ಹರಿದುಕೊಂಡು ಸುಮಾ ನರ್ಸಿಂಗ್ ಹೋಂ ಪ್ರದೇಶ ಸೇರಿದಂತೆ ಮಳೆ…
Author: Srinivas_Murthy
ಈರುಳ್ಳಿಕೃಷ್ಣಾರೆಡ್ಡಿಯವರ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಹಣ ಕಳ್ಳತನ ಚಿಂತಾಮಣಿ: ಚಿಂತಾಮಣಿ ನಗರದ ಸೂಣ್ಣಶೆಟ್ಟಹಳ್ಳಿ ಬಡಾವಣೆಯಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಹಣ ದೋಚಿಕೊಂಡು ಹೋಗಿದ್ದ ಖತರ್ನಾಕ್ ಕಳ್ಳನನ್ನು ಬಂದಿಸುವಲ್ಲಿ ಚಿಂತಾಮಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 1 ಲಕ್ಷ 80 ಸಾವಿರಾರು ರೂ.ಹಣ ಜಪ್ತಿ ಮಾಡಲಾಗಿದೆ.ಎರಡು ತಿಂಗಳ ಹಿಂದೆ ಅಂದರೆ ಜುಲೈ 15 ರಂದು ಚಿಂತಾಮಣಿಯ ಈರುಳ್ಳಿಕೃಷ್ಣಾರೆಡ್ಡಿ ಅವರು ಕೆನರಾಬ್ಯಾಂಕ್ ನಲ್ಲಿ ಹಣ ಡ್ರಾಮಾಡಿಕೊಂಡು ನಗರದ ಸೊಣ್ಣಶೇಟ್ಟಿಹಳ್ಳಿ ಬಡಾವಣೆಯ ಯಾಜ್ಞವಲ್ಕ ದೇವಾಲಯ ಬಳಿ ಕಾರನ್ನು ನಿಲ್ಲಿಸಿ ದೇವಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿ ಇಟ್ಟಿದ್ದ 5 ಲಕ್ಷ ಹಣವನ್ನು ಕಳ್ಳತನ ಮಾಡಲಾಗಿತ್ತು ಈ ಬಗ್ಗೆ ಹಣ ಕಳೆದುಕೊಂಡ ಈರುಳ್ಳಿಕೃಷ್ಣಾರೆಡ್ಡಿ ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು ಈ ಮೇರೆಗೆ ಕಳ್ಳತನದ ಜಾಡು ಹಿಡಿದು ಹೋರಟ ಪೋಲಿಸರು ಚಿಕ್ಕಬಳ್ಳಾಪುರ ಜಿಲ್ಲಾ ಎಸ್.ಪಿ, ಕುಶಲ್ ಚೌಕ್ಸಿ,ಎ.ಎಸ್.ಪಿ ರಾಜಾ ಇಮಾಮ್ ಖಾಸಿಂ, ಚಿಂತಾಮಣಿ ಉಪವಿಭಾಗದ ಡಿವೈ.ಎಸ್.ಪಿ.ಮುರಳೀಧರ ಮಾರ್ಗದರ್ಶನದಲ್ಲಿ ಚಿಂತಾಮಣಿ ನಗರ ಪೊಲೀಸ್ ಠಾಣೆಯ…
ಶ್ರೀನಿವಾಸಪುರ:ಪೋಲಿಸ್ ಬೀಗಿ ಬಂದೋಬಸ್ತಿನಲ್ಲಿ ಒತ್ತುವರಿಯಾಗಿದ್ದ ಸ್ಮಶಾನದ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳು ತೆರವು ಮಾಡಿಸಿರುತ್ತಾರೆ.ತಾಲ್ಲೂಕಿನ ಕಸಬಾ ಹೋಬಳಿ ಕೇತಗಾನಹಳ್ಳಿ ಗ್ರಾಮದ ಸರ್ವೇ ನಂ.79 ರಲ್ಲಿ 1 ಎಕರೆ 32 ಗುಂಟೆ ಜಮೀನು ಸಾರ್ವಜನಿಕರ ಸ್ಮಶಾನಕ್ಕೆ ಮೀಸಲಿಡಲಾಗಿದ್ದು ಇದನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು ಈ ಬಗ್ಗೆ ತೆರವುಗೊಳಿಸಿಕೊಡುವಂತೆ ಕೇತಗಾನಹಳ್ಳಿ ಗ್ರಾಮಸ್ಥರು ಜಿಲ್ಲಾಡಳಿತ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ಹೈರಾಣವಾಗಿದ್ದರು ಆದರೂ ಬೆಂಬಡದೆ ಗ್ರಾಮಸ್ಥರು ಹೆಬ್ಬಟ ಪಂಚಾಯತಿ ಸದಸ್ಯ ಅನಂತ್ ಸಹಕಾರದೊಂದಿಗೆ ಸ್ಮಶಾನ ಜಾಗವನ್ನು ಗುರುತಿಸಿಕೊಡುವಂತೆ ಕಂದಾಯ ಇಲಾಖೆಗೆ ಮನವಿ ಮಾಡಿದ ಮೇರೆಗೆ ಸ್ಪಂದಿಸಿದ ತಾಲೂಕು ಆಡಳಿತ ಕಂದಾಯ ಅಧಿಕಾರಿಗಳಾದ ಡೆಪ್ಯೂಟಿ ತಹಶೀಲ್ದಾರ್ ನಂಜುಂಡಪ್ಪ, ಕಸಬಾ ರೆವಿನ್ಯೂ ಇನ್ಸಪೆಕ್ಟರ್ ಮುನಿರೆಡ್ಡಿ ಸರ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕ ಸ್ಮಶಾನಕ್ಕೆ ಸಂಬಂದಿಸಿದ ಜಾಗ ಗುರುತಿಸಿ ಗ್ರಾಮಸ್ಥರೆಗೆ ಅನಕೂಲ ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಚಲ್ದಿಗಾನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗದೀಶ್ ಹಾಗು ಸಿಬ್ಬಂದಿ ಸ್ಮಶಾನದ ಜಾಗವನ್ನು ಜೆಸಿಬಿ ಮೂಲಕ ಗಿಡಗಂಟಿಗಳನ್ನು ತೆರವುಗೊಳಿಸಿ…
ಶ್ರೀನಿವಾಸಪುರ:ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದರು ಎನ್ನಲಾದ ರೈತರು ಉಳುಮೆ ಮಾಡುತ್ತಿದ್ದ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಗಿಡನಾಟಿ ಮಾಡಲು ಮುಂದಾದಾಗ ರೈತಾಪಿ ಕುಟುಂಬದ ಸದಸ್ಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ತಳ್ಳಾಟ ನೂಕಾಟ ನಡೆದ ಘಟನೆ ತಾಲೂಕಿನ ಕೋಟಬಲ್ಲಪಲ್ಲಿ ಗ್ರಾಮದ ಬಳಿ ನಡೆಯಿತು ಈ ಸಂದರ್ಭದಲ್ಲಿ ಒರ್ವ ರೈತ ಮಹಿಳೆ ಅಯಾತಪ್ಪಿ ಕೆಳಗೆ ಬಿದ್ದು ಅಸ್ವಸ್ತರಾಗಿದ್ದು ತಕ್ಷಣ ಸ್ಥಳೀಯರು 108 ಅಂಬುಲೆನ್ಸ್ ಕರೆಸಿ ಅಸ್ಪತ್ರೆಗೆ ಸಾಗಿಸಿದರು. ಜಮೀನು ನಮ್ಮದು ರೈತರ ಆಕ್ರೋಶನಾವು ಉಳುಮೆ ಮಾಡುತ್ತಿದ್ದ ಜಾಗ ನಮ್ಮದು ಎಂದು ರೈತರು ಘೋಷಣೆಗಳನ್ನು ಕೂಗುತ್ತ ನಾವು ಬೆಳೆದಿದ್ದ ಮಾವು ಇತರೆ ಬೆಳೆಗಳನ್ನು ತೆರವು ಮಾಡಿ ನಮಗೆ ಅನ್ಯಾಯ ಮಾಡಿ ಈಗ ಸಸಿ ನೆಡಲು ಮುಂದಾಗಿರುವ ಅರಣ್ಯ ಇಲಾಖೆ ಅಕ್ರಮ ನಡೆಸುತ್ತಿದೆ ಇದು ರೈತರ ಭೂಮಿ ಅರಣ್ಯ ಇಲಾಖೆ ಸಸಿ ನೆಡಲು ಬಿಡುವದಿಲ್ಲವೆಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದ ರೈತರು ಪ್ರಾಣವನ್ನು ಬಿಡುತ್ತೇವೆ ಭೂಮಿಯನ್ನು ಬಿಡುವದಿಲ್ಲವೆಂದು ಪ್ರತಿಭಟಿಸಿದರು.…
ಪ್ರೀತ್ಸೇ ಪ್ರೀತ್ಸೇ ಎಂದು ಕಾಟಕೊಡುತ್ತಿದ್ದ ಯುವಕನ ಹುಚ್ಚಾಟಕ್ಕೆ ಬೆಸತ್ತ ವಿದ್ಯಾರ್ಥಿನಿ ಕಾಲೇಜು ಮಹಡಿಯಿಂದು ಜಿಗಿದು ಅತ್ಮಹತ್ಯೆ ಚಿತ್ರದುರ್ಗ:ಪ್ರೀತ್ಸೇ ಪ್ರೀತಿಸು ಎಂದು ಕಾಡುತ್ತಿದ್ದ ಯುವಕನ ಕಾಟ ತಾಳಲಾರದೆ ಮನನೊಂದ ವಿದ್ಯಾರ್ಥಿನಿ ಕಾಲೇಜು ಕಟ್ಟಡದ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯನ್ನು ಚಳ್ಳಕೆರೆ ಮೆದೆಹಳ್ಳಿ ನಿವಾಸಿಆಗಿದ್ದ ಪ್ರೇಮಾ(18) ಎಂದು ಗುರುತಿಸಲಾಗಿದ್ದು ಚಿತ್ರದುರ್ಗ ನಗರದ ಡಾನ್ ಬೋಸ್ಕೋ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ಪದವಿ ವ್ಯಾಸಾಂಗ ಮಾಡುತ್ತಿದ್ದು ಇಂದು ಕಟ್ಟಡದ ಮೇಲಿನಿಂದ ಬಿದ್ದು ಪ್ರೇಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಳಗ್ಗೆ ಮಗಳು ಕಾಲೇಜಿಗೆ ಹೋಗಿ ಫೋನ್ ಮಾಡಿ ಕಾಲೇಜು ತಲುಪಿದೆ ಎಂದು ಕರೆ ಮಾಡಿ ಹೇಳಿದ್ದಾಳೆ ಇದಾದ ಕೆಲ ಕ್ಷಣಗಳಲ್ಲೇ ನಿಮ್ಮ ಮಗಳು ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ ಅಂತಾ ಕಾಲೇಜು ಕಡೆಯಿಂದ ಫೋನ್ ಬಂದಿದೆ ಹುಡುಗ ನೋರ್ವ ನಿತ್ಯ ಮಗಳಿಗೆ ಪ್ರೀತಿ ಮಾಡುವಂತೆ ಪೀಡುಸುತ್ತಿದ್ದನಂತೆ. ಅಲ್ಲದೇ ವಾಟ್ಸಾಪ್ ನಲ್ಲಿ ನಿತ್ಯವೂ ಚಾಟಿಂಗ್ ಮಾಡಿ ಕಿರಿಕಿರಿ ನೀಡುತ್ತಿದ್ದನಂತೆ ಇತ್ತಿಚಿಗೆ ಇವನ ಕಾಟ ಹೆಚ್ಚಾದ…
ನ್ಯೂಜ್ ಡೆಸ್ಕ್:ತೆಲಂಗಾಣ ರಾಜ್ಯದಲ್ಲಿ ಅಪರೂಪದ ವಿಚಾರವೊಂದು ಬೆಳಕಿಗೆ ಬಂದಿದೆ ಅದೇನಪ್ಪ ಅಂದರೆ ತಾಯಿ ಮತ್ತು ಮಗಳು ಇಬ್ಬರೂ ಒಟ್ಟಿಗೆ ಸರ್ಕಾರಿ ಸೇವೆಗೆ ಸೇರಿದ್ದಾರೆ ಬಹುಶಃ ಈ ವಿಚಾರ ಅಪರೂಪದಲ್ಲಿ ಅಪರೂಪ ಎನ್ನಬಹುದು ತೆಲಂಗಾಣ ರಾಜ್ಯದ ಪೆದ್ದಪಲ್ಲಿ ಜಿಲ್ಲೆಯ ಮಂಥಿನಿ ಮಂಡಲದ ರಾಮಕೃಷ್ಣಾಪುರ ಗ್ರಾಮದ ಸಿಂಗರೇಣಿ ಕಾಲೋನಿಯಯಲ್ಲಿ ಸಣ್ಣ ಉದ್ಯೋಗದ ರಮೇಶ್ ಅವರ ಕುಟುಂಬದ ಇಬ್ಬರಿಗೆ ಎರಡು ಸರ್ಕಾರಿ ಕೆಲಸಗಳು ಒಂದೆ ದಿನ ಸಿಕ್ಕಿದೆ ಆ ಕುಟುಂಬದಲ್ಲಿ ಇಂದು ಹಬ್ಬದ ವಾತವರಣ ಮನೆ ಮಾಡಿದೆ ರಮೇಶ್ ಹೆಂಡತಿ ಪದ್ಮಾಗೆ ಉಪನ್ಯಾಸಕಿಯಾಗಿ ಕೆಲಸ ಸಿಕ್ಕಿದರೆ ಅಕೆಯ ಮಗಳು ಅಲೇಖ್ಯಗೆ ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉದ್ಯೋಗ ಸಿಕ್ಕಿದೆ.ಮದುವೆಯಾಗಿ ಒದುವುದನ್ನೆ ಬಿಟ್ಟಿದ್ಯಾಕೆರಮೇಶ ಅವರ ಪತ್ನಿ ಪದ್ಮ ಅವರನ್ನು ಅವರ ತವರು ಮನೆಯವರು ಹತ್ತನೆ ತರಗತಿ ಮುಗಿಸಿದ ತಕ್ಷಣ ಮದುವೆ ಮಾಡಿ ಗಂಡನ ಮನೆಗೆ ಸಾಗಹಾಕಿದ್ದರು, ಗಂಡನ ಮನೆಗೆ ಬಂದ ಪದ್ಮ ಮದುವೆಯ ನಂತರ ವಿದ್ಯಾಭ್ಯಾಸ ನಿಲ್ಲಿಸಿದರು, ನಂತರ ಪತಿ ರಮೇಶ ಅವರ ಪ್ರೋತ್ಸಾಹದಿಂದ ಮತ್ತೆ ವಿದ್ಯಾಭ್ಯಾಸ…
ಶ್ರೀನಿವಾಸಪುರ:ಪಟ್ಟಣದ ತಾಲೂಕು ಕಚೇರಿ ಮುಂಬಾಗದಿಂದ ಆರಂಭವಾದ ಮೆರವಣಿಗೆಗೆ ಅದ್ಧೂರಿ ಚಾಲನೆ ನೀಡಲಾಯಿತು.ಮೆರವಣಿಗೆಯಲ್ಲಿ ಡೊಳ್ಳು,ಮೇಳ, ತಮಟೆ ಸದ್ದಿಗೆ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ವಾಲ್ಮೀಕಿ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಬಂಧುಗಳು ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಪ್ರತಿ ಹಳ್ಳಿಯಿಂದಲೂ ವಾಲ್ಮೀಕಿ ಭಾವಚಿತ್ರ ಇರುವ ಪಲ್ಲಕ್ಕಿಗಳು ಹಾಗು ಯುವಕ ಸಂಘದ ಪದಾಧಿಕಾರಿಗಳು ಪ್ಲೆಕ್ಸ್‌ಗಳನ್ನು ಕಟ್ಟಿಕೊಂಡು ತಂಡೋಪ ತಂಡವಾಗಿ ಆಗಮಿಸುವ ಮೂಲಕ ಮೆರವಣಿಗೆಗೆ ಮೆರಗು ಹೆಚ್ಚಿಸಿದರು.ಮೆರವಣಿಗೆಯಲ್ಲಿ ಡಿ.ಜೆ. ಸೌಂಡ್ ಸದ್ದು ಮಾಡಿದರೆ ಯುವಕರು ಒಗ್ಗೂಡಿ ಹೆಜ್ಜೆಹಾಕುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಮೆರವಣಿಗೆ ನಂತರ ಸ್ಟೇಡಿಯಂನಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀನಿವಾಸಪುರ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತದಿಂದ ಕಳೆದ ಎರಡು ದಿನಗಳಿಂದ ಸುರುಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ ಜನ ಸಾಕಪ್ಪ ಮಳೆ ಎನ್ನುವಂತಾಗಿದೆ. ಮಳೆಯಿಂದ ಮರಗಳು ಹಾಗೂ ಮರದ ಟೊಂಗೆಗಳು ಧರೆಗುರುಳಿವೆ ತಾಡಿಗೋಳ್ ಕ್ರಾಸ್ ನಲ್ಲಿ ಕಡಪಾ-ಬೆಂಗಳೂರು ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ 11 ಕೆ.ವಿ ವಿದ್ಯುತ್ ಕಂಬ ರಸ್ತೆ ಬದಿ ಧರೆಗೆ ಬಿದ್ದಿದೆ ವಿದ್ಯುತ್ ತಂತಿ ನಡು ರಸ್ತೆಯಲ್ಲಿ ಬಿದ್ದಿದ್ದು ಸದೃಶಾವತ್ ಯಾವುದೇ ಅನಾಹುತ ಆಗಿಲ್ಲ ಘಟನೆ ಆಗುತ್ತಿದ್ದಂತೆ ಸ್ಥಳೀಯರು ಬೆಸ್ಕಾಂ. ಅಧಿಕಾರಿಗಳಿಗೆ ಪೋನ್ ಮೂಲಕ ಕರೆ ಮಾಡಿ ವಿದ್ಯುತ್ ಸರಬರಾಜು ನಿಲ್ಲಿಸಿದ್ದಾರೆ. ಬೆಂಗಳೂರು-ಕಡಪಾ ನೂರಾರು ವಾಹನಗಳು ಸಂಚರಿಸುತ್ತವೆ. ವಿದ್ಯುತ್ ಕಂಬ ಉರುಳಿ ಬಿದ್ದಾಗ ಜನತೆ ಎಚ್ಚೆತ್ತುಕೊಳ್ಳದೆ ಹೋಗಿದ್ದಾರೆ ಬಾರಿ ಅನಾಹುತ ಆಗುತ್ತಿತ್ತು ಎನ್ನುತ್ತಾರೆ. ವರುಣನ ಆರ್ಭಟಕ್ಕೆ ತಾಲ್ಲೂಕಿನ ಬದ್ದಿಪಲ್ಲಿ ಪೆದ್ದೂರು ಸೇರಿದಂತೆ ಸಾಕಷ್ಟು ಕಡೆ ಬೆಳೆ ಹಾನಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.ಕಟಾವಿಗೆ ಬಂದಿರುವ ಬತ್ತ ನೀರು ಪಾಲಾಗಿದೆ ಆದಾಯದ ನಿರೀಕ್ಷೆಯಲ್ಲಿದ್ದ ಟೊಮೊಟೊ ಬೆಳೆ ಸಹ ಹಾಳಾಗಿ ಕೊಯ್ಲಿಗೆ ಬಂದಿದ್ದ ಟೊಮೊಟೊ ನೆಲಕ್ಕೆ…
ರಾಜಕೀಯ ಪಕ್ಷಗಳು ಘೋಷಿಸುವ ಉಚಿತ ಯೋಜನೆ ಕುರಿತಾಗಿ ಕೇಂದ್ರ ಸರ್ಕಾರಕ್ಕೆ,ಚುನಾವಣೆ ಆಯೋಗಕ್ಕೆ ನೋಟಿಸ್ ಜಾರಿ ನೂಜ್ ಡೆಸ್ಕ್:ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳು ನೀಡುವ ಉಚಿತ ಭರವಸೆಗಳನ್ನು ಲಂಚ ಎಂದು ಪರಿಗಣಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಮನವಿಯ ಮೇರೆಗೆ, ಕೇಂದ್ರ ಸರ್ಕಾರಕ್ಕೆ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.ಉಚಿತ ಭರವಸೆಗಳನ್ನು ನೀಡುವುದನ್ನು ನಿಷೇಧಿಸಲು ತಕ್ಷಣದ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಈ ನೋಟಿಸ್ ಜಾರಿ ಮಾಡಿದ್ದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಕೇಂದ್ರ ಮತ್ತು ಚುನಾವಣಾ ಸಮಿತಿಗೆ ನೋಟಿಸ್ ಜಾರಿಗೊಳಿಸಿದೆ ಇದರೊಂದಿಗೆ ಇದಕ್ಕೆ ಸಂಬಂದಪಟ್ಟ ಬಾಕಿ ಇರುವ ಪ್ರಕರಣಗಳೊಂದಿಗೆ ಅರ್ಜಿಯೊಂದಿಗೆ ಸೇರ್ಪಡೆ ಮಾಡಿದೆ.ಉಚಿತ ಭರವಸೆ ನೀಡುವ ರಾಜಕೀಯ ಪಕ್ಷಗಳ ವಿರುದ್ಧ ತಕ್ಷಣದ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ನಿವಾಸಿ ಶಶಾಂಕ್ ಜೆ ಶ್ರೀಧರ…
ನ್ಯೂಜ್ ಡೆಸ್ಕ್: ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮಾಹನಗರದಲ್ಲಿ ಗ್ಯಾಂಗ್ ಸ್ಟಾರ್ ಗಳು ಬಿಟ್ಟುಬಿಡದಂತೆ ಒಂದಲ್ಲ ಒಂದು ರೀತಿಯಲ್ಲಿ ಮುಂಬೈನಲ್ಲಿನ ಸೆಲೆಬ್ರಿಟಿಗಳು,ಬಾಲಿವುಡ್ ಸೆಲೆಬ್ರಿಟಿಗಳನ್ನು ಕಾಡುವುದು ರಾಜಕೀಯ ಮುಖಂಡರನ್ನು ಉದ್ಯಮಿಗಳನ್ನು ಟಾರ್ಗೆಟ್ ಮಾಡುತ್ತ ಬೆದರಿಕೆಗಳು ಒಡ್ಡುತ್ತ ಅವರ ನೆಮ್ಮದಿಯನ್ನು ಹಾಳು ಮಾಡುತ್ತಲೇ ಇರುವುದು ಇಲ್ಲಿ ಸಾಮನ್ಯ ಎನ್ನಬಹುದು.D ಗ್ಯಾಂಗ್ ದಾವೂದ್ ಇಬ್ರಾಹಿಂ ಹಿಡಿತ ಕಡಿಮೆಯಾಗುತ್ತಿರುವ ಸಮಯದಲ್ಲಿ ಅಂಡರ್ ವರ್ಲ್ಡ್ ಮೇಲೆ ಹಿಡಿತ ಸಾಧಿಸಲು ಹೊಸ ಹೆಸರು ಮುನ್ನಲೆಗೆ ಬಂದಿದೆ ಸದ್ಯ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವುದು ಹೊಸ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಎನ್ನುವ ಖತರ್ನಾಕ್ ಹೆಸರು.NCP ಮುಖಂಡ ಬಾಬಾ ಸಿದ್ದಿಕಿ ಹತ್ಯೆಮಹಾರಾಷ್ಟ್ರದ NCP ಪಕ್ಷದ ಮುಖಂಡ ಬಾಬಾ ಸಿದ್ದಿಕಿಯನ್ನು ಗುಂಡೇಟು ಹೊಡೆದು ಹತ್ಯೆ ಮಾಡಿದ್ದು ಈ ಹತ್ಯೆ ಇಡೀ ದೇಶವನ್ನು ತಲ್ಲಣ ಗೊಳಿಸಿದೆ ಸಲ್ಮಾನ್ ಖಾನ್ ಜೊತೆ ನಂಟು ಹೊಂದಿದ್ದಕ್ಕೆ ಬಾಬಾ ಸಿದ್ದಿಕಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಹತ್ಯೆ ಹೊಣೆಯನ್ನು ಕುಖ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಅಂದಾಜಿಗೂ ನಿಲುಕದ ರೀತಿ…