ನ್ಯೂಜ್ ಡೆಸ್ಕ್:ತೆಲಗು ರಾಜ್ಯಗಳಲ್ಲಿ ಸ್ಟಾರ್ ಹೀರೋಗಳ ಸಿನಿಮಾ ಬಿಡುಗಡೆಗೆ ಕಾದು ಕುಳಿತ ಅಭಿಮಾನಿಗಳು ತಮ್ಮ ನಟನ ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗಲಿ ಎಂದು ಹರಕೆ ಹೊತ್ತು ಪುಜೆ ಹೋಮ ಹವನ ನಡೆಸುವುದು ಸಾಮನ್ಯ ಆದರೆ ಇಲ್ಲೊಬ್ಬ ತೆಲಗು ಸಿನಿಮಾಗಳ ಖ್ಯಾತ ನಿರ್ಮಾಪಕ ಬಂಡ್ಲ ಗಣೇಶ್ Bandla Ganesh ತಾವು ಅಭಿಮಾನಿಸುವ ರಾಜಕೀಯ ನಾಯಕನ ಶ್ರೇಯಸ್ಸು ಕೋರಿ ಹರಕೆ ಹೊತ್ತು ಹೈದರಾಬಾದ್ ನಿಂದ ತಿರುಮಲ ಶ್ರೀ ವೇಂಕಟೇಶ್ವರನ ಸನ್ನಿಧಾನಕ್ಕೆ ಇಪ್ಪತ್ತು ಮೂರು ದಿನಗಳ ಪಾದಯಾತ್ರೆ ಕೈಗೊಂಡು ಅದನ್ನು ಯಶಸ್ವಿಯಾಗಿ ಪೊರೈಸಿದ್ದಾರೆ.
ಆಂಧ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ವೈಎಸ್ಆರ್ಸಿಪಿ ಜಗನ್ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅಲ್ಲಿನ ವಿರೋಧ ಪಕ್ಷದ ನಾಯಕ ಚಂದ್ರಬಾಬುನಾಯ್ಡು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು, ಆ ಸಂದರ್ಭದಲ್ಲಿ ಚಂದ್ರಬಾಬು ಅವರು ಸುರಕ್ಷಿತವಾಗಿ ಜೈಲಿನಿಂದ ಹೊರಬಂದರೆ, ಹೈದರಾಬಾದ್ನಿಂದ ತಿರುಮಲಕ್ಕೆ ಕಾಲನಡಿಗೆಯಲ್ಲಿ ಬಂದು ದರ್ಶನ ಪಡೆಯುವುದಾಗಿ ನಿರ್ಮಾಪಕ ಬಂಡ್ಲ ಗಣೇಶ್ ಪ್ರತಿಜ್ಞೆ ಮಾಡಿ ಹರಕೆ ಹೊತ್ತಿದ್ದರು.
ನಂತರದಲ್ಲಿ ಜೈಲಿನಿಂದ ಹೊರ ಬಂದ ಚಂದ್ರಬಾಬುನಾಯ್ಡು N Chandrababu Naidu ಚುನಾವಣೆ ಎದುರಿಸಿ ಆಂಧ್ರದ ಮುಖ್ಯಮಂತ್ರಿಯೂ ಆದರೂ ಆದರೆ ಅವರಿಗಾಗಿ ಹರಕೆ ಹೊತ್ತಿದ್ದ ನಿರ್ಮಾಪಕ ಬಂಡ್ಲ ಗಣೇಶ್ ಪೋರೈಸಿರಲಿಲ್ಲ ಅವರು ಕಳೆದ ತಿಂಗಳು ಜನವರಿ 19 ರಂದು ಸಂಕಲ್ಪ ಯಾತ್ರೆ ಹೆಸರಿನಲ್ಲಿ ಹೈದರಾಬಾದ್ನ ತಮ್ಮ ಮನೆ ಇರುವ ಷಾದ್ ನಗರದಿಂದ ಪಾದಯಾತ್ರೆ ಕೈಗೊಂಡು ಅಲಿಪಿರಿ ಮೆಟ್ಟಿಲುಗಳ ಮೂಲಕ ತಿರುಮಲ ತಲುಪಿ 23 ದಿನಗಳ ಕಾಲ 537 ಕೀ.ಮಿ ಪಾದಯಾತ್ರೆಯನ್ನು ಪೂರ್ಣಗೊಳಿಸಿದರು.ತಿರುಮಲದಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ನಿರ್ಮಾಪಕ ಬಂಡ್ಲ ಗಣೇಶ್ ಅವರನ್ನು ಸ್ವಾಗತಿಸಿ ವೈಕುಂಠವಾಸನ ದರ್ಶನ ಮಾಡಿಸಿದ್ದಾರೆ.

ಅಭಿಮಾನ ನಾಯಕನ ಭೇಟಿ
ತಿರುಮಲ ಶ್ರೀವೆಂಕಟೇಶ್ವರನ ದರ್ಶನದ ನಂತರ,ನಿರ್ಮಾಪಕ ಬಂಡ್ಲ ಗಣೇಶ್ ಆಂಧ್ರದ ರಾಜಧಾನಿ ಅಮರಾವತಿಗೆ ಹೋಗಿದ್ದಾರೆ ಅಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದಾರೆ.ಅವರ ಮಗ ಪ್ರಭಾವಿ ಮಂತ್ರಿ ಲೋಕೆಶ್ ಅವರನ್ನು ಸಹ ಭೇಟಿಯಾಗಿದ್ದಾರೆ. ತಿರುಮಲ ಪ್ರಸಾದವನ್ನು ಚಂದ್ರಬಾಬು ನಾಯ್ಡು ಅವರಿಗೆ ನೀಡಿ ಪಾದಯಾತ್ರೆಯ ಉದ್ದಕ್ಕೂ ತಮಗೆ ದೊರೆತ ಪ್ರತಿಕ್ರಿಯೆ ಮತ್ತು ಜನರ ಮೆಚ್ಚುಗೆಯನ್ನು ಗಣೇಶ್ ಹಂಚಿಕೊಂಡಿದ್ದಾರೆ.



