ನ್ಯೂಜ್ ಡೆಸ್ಕ್:ಅರಣ್ಯಕ್ಕೆ ಹೊಂದಿಕೊಂಡ ಕಾಡು ಪ್ರದೇಶದ ಸಣ್ಣ ಕುಗ್ರಾಮದ ಅಂಗನವಾಡಿಯ ಶಿಕ್ಷಕಿಯೊಬ್ಬರು ಇಂದು
ಆಂಧ್ರಪ್ರದೇಶ ವಿಧಾನಸಭೆ ಸದಸ್ಯೆ ಅರ್ಥಾತ್ ಶಾಸಕಿ(MLA), ಅಂದು ಅಂಗನವಾಡಿ ಶಿಕ್ಷಕಿಯಾಗಿ ಎಲ್ಲಾ ಮಕ್ಕಳು ಸರಿಯಾಗಿ ಕುಳಿತಿದ್ದಾರ ಅಂಗನವಾಡಿ ಕೇಂದ್ರದಲ್ಲಿ ಎಲ್ಲಾ ವಸ್ತುಗಳು ಸರಿಯಾಗಿದೀಯಾ ಹಾಜರಾತಿ ರಿಜಿಸ್ಟರ್ನಲ್ಲಿ ಎಲ್ಲವು ದಾಖಲಾಗಿದೀಯಾ ಸರಿಯಾಗಿ ಬರೆಯಾಗಿದಿಯಾ ಅಥವಾ ಮರೆತುಬಿಟ್ಟಿದ್ದೀವಾ ಓಕೆ ಓಕೆ ಎಂದು ಸದಾ ಚಟುವಟುಕೆಯಿಂದ ಮಕ್ಕಳೊಂದಿಗೆ ಅಂಗನವಾಡಿಯಲ್ಲಿ ಒಡಾಡುತ್ತಿದ್ದ ಶಿಕ್ಷಕಿ ಇಂದು ಆಂಧ್ರದ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾದ ರಂಪಚೋಡವರಂ ಶಾಸಕರಾಗಿದ್ದಾರೆ.
ಅಂಗನವಾಡಿ ಟೀಚರ್ ಎಂಎಲ್ಎ ಹೇಗಾದರು ಎನ್ನುವುದೆ ಬಹಳಷ್ಟು ಜನಕ್ಕೆ ಕುತೂಹಲ,ಬುಡಕಟ್ಟು ಜನಾಂಗದ ಮತಗಳು ಅಕೆಯನ್ನು ಇಂದು ಈ ಮಟ್ಟಕ್ಕೆ ತಂದಿದೆ ಅನ್ನುವುದು ವಿಶೇಷ.ಆಂಧ್ರದ ಕರಾವಳಿಯಲ್ಲಿನ ಅವಿಭಜಿತ ಪೂರ್ವಗೋದಾವರಿ ಜಿಲ್ಲೆಯ ಅತಿದೊಡ್ಡ ಎಸ್ಟಿ ವಿಧಾನಸಭಾ ಕ್ಷೇತ್ರವಾದ ರಂಪಚೋಡವರಂ ಕ್ಷೇತ್ರ ಸಂಪೂರ್ಣ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ.
ಇದು ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ ಪಕ್ಷವಾದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆ ಪಕ್ಷದಿಂದ ಯಾರೆ ನಿಂತರು ಗೆಲವು ಸಾಧಿಸುತ್ತಿದ್ದ ಕ್ಷೇತ್ರ, ಅಂತಹ ಕ್ಷೇತ್ರದಲ್ಲಿ ಅನಂತಗಿರಿ ಗ್ರಾಮದ ಅಂಗನವಾಡಿ ಶಿಕ್ಷಕಿ ಮಿರಿಯಾಲ ಸಿರೀಶಾ ಶಾಸಕರಾಗಿ ಗೆದ್ದಿದ್ದಾರೆ.
ರಂಪಚೋಡವರಂ ಕ್ಷೇತ್ರದ ಮಿರ್ಯಾಲ ಸಿರೀಶಾ ಅವರು ರಾಜಬೊಮ್ಮಂಗಿ ಮಂಡಲದ ಅನಂತಗಿರಿ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಅವರ ಪತಿ ತೆಲುಗು ದೇಶಂ ಪಕ್ಷದಲ್ಲಿ ಯುವಕಾರ್ಯಕರ್ತ,ಹಿಂದೆ ಈ ಕ್ಷೇತ್ರದಲ್ಲಿ ವೈಸಿಪಿ ಪಕ್ಷದ ಶಾಸಕಿಯಾಗಿದ್ದ ನಾಗುಲಪಲ್ಲೆಧನಲಕ್ಷ್ಮಿ ಪ್ರಭಾವಿ ರಾಜಕಾರಣಿ ಇಡಿ ಜಿಲ್ಲೆಯಲ್ಲಿ ತೆಲಗುದೇಶಂ ಗೆದ್ದರು ರಂಪಚೋಡವರಂನಲ್ಲಿ ವೈಸಿಪಿ ಸೋಲಿಸುವುದು ಕಷ್ಟದ ಮಾತು ಎಂದು ಸರ್ವೆಗಳು ಹೇಳಿತ್ತು ಇದನೆಲ್ಲಾ ಉಲ್ಟಾ ಮಾಡಿ ಕ್ಷೇತ್ರದಲ್ಲಿ ಹತ್ತು ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಚರಿತ್ರೆ ಎನ್ನುತ್ತಾರೆ ಆಂಧ್ರದ ರಾಜಕೀಯ ಪಂಡಿತರು.
ತೆಲಗು ದೇಶಂ ಮುಖಂಡರ ಗಮನ ಸೇಳೆದ ಶೀರಿಷಾ
ಅಂಗನವಾಡಿ ಶಿಕ್ಷಕಿಯಾದ ಶೀರಿಷಾ ಬಿ.ಎಡ್. ಪಧವಿದರೆ ಉದ್ಯೋಗ ಅವಕಾಶ ಇಲ್ಲದೆ ಅಂಗನವಾಡಿ ಶಿಕ್ಷಕಿಯಾದರು ನಂತರದಲ್ಲಿ ನಡೆದುದ್ದು ವಿಸ್ಮಯ ತೆಲಗುದೇಶಂ ಮುಖಂಡ ಲೋಕೇಶ್ ನಡೆಸಿದ ಯುವಗಳಂ ಪಾದಯಾತ್ರ ಸಂದರ್ಭದಲ್ಲಿ ತನ್ನ ಪತಿ ತೆಲಗುದೇಶಂ ಕಾರ್ಯಕರ್ತ ವಿಜಯಭಾಸ್ಕರ್ ರೊಂದಿಗೆ ಕೂಡಿ ಲೋಕೆಶ್ ಅವರನ್ನು ಭೇಟಿಯಾಗಿ ಅಂಗನವಾಡಿ ಶಿಕ್ಷಕಿಯರು ಎದರಿಸುತ್ತಿರುವ ಸಮಸ್ಯಗಳು ಅದನ್ನು ನೀವು ಅಧಿಕಾರಕ್ಕೆ ಬಂದರೆ ನಿವಾರಿಸುವಂತೆ ಮಾತನಾಡಿದ ಶೈಲಿ ಮುಖಂಡರ ಗಮನ ಸೇಳೆಯಿತು ನಂತರದಲ್ಲಿ ಉತ್ತಮ ವಾಗ್ಮಿಯಾಗಿದ್ದ ಆಕೆಯ ಮಾತಿನ ಶೈಲಿ ಸಂಘಟನಾತ್ಮಕ ಚಟುವಟಿಕೆಯನ್ನು ಸ್ವತಹಃ ಕಂಡ ತೆಲಗುದೇಶಂ ಅಧಿನೇತ ಚಂದ್ರಬಾಬು ಮತ್ತು ಲೋಕೇಶ್ ಆಕೆಯನ್ನು ಗುರುತಿಸಿ ತೆಲುಗು ದೇಶಂ ಪಕ್ಷದಿಂದ ಸ್ಪರ್ದಿಸಲು ಟೀಕೆಟ್ ನೀಡಿ ಶಾಸಕಿಯಾಗಲು ಅವಕಾಶ ಕಲ್ಪಿಸಿದ್ದಾರಂತೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Wednesday, April 30