ನ್ಯೂಜ್ ಡೆಸ್ಕ್:- ಆಂಧ್ರಪ್ರದೇಶದ ಯುವ ಸಚಿವ ಮೇಕಪಾಟಿ ಗೌತಮ್ ರೆಡ್ಡಿ (49) ಹೃದಾಘತದಿಂದ ನಿಧನರಾಗಿದ್ದಾರೆ. ಸೋಮವಾರ ಬೆಳಗಿನ ಜಾವ ಹೃದಯಾಘಾತಕ್ಕೆ ಒಳಗಾದ ಅವರನ್ನು ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದು ತುರ್ತು ಚಿಕಿತ್ಸಾ ವಿಭಾಗದಲ್ಲಿ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ತಲುಪಿದಾಗ ಗೌತಮ್ ಸ್ಥಿತಿ ಗಂಭೀರವಾಗಿತ್ತು ತುರ್ತು ಚಿಕಿತ್ಸೆ ನೀಡಿದರೂ ಫಲಿಸದೆ ಮೃತಪಟ್ಟಿರುವುದಾಗಿ ಅಪೋಲೋ ವೈದ್ಯರು ಗೌತಮ್ ಪತ್ನಿಗೆ ತಿಳಿಸಿರುತ್ತಾರೆ.
ಒಂದು ವಾರದ ಹಿಂದೆಯಷ್ಟೆ ದುಬೈ ಟೂರ್ ಹೋಗಿದ್ದ ಅವರು ನಿನ್ನೆ (ಭಾನುವಾರ) ಹೈದರಾಬಾದ್ ಗೆ ಆಗಮಿಸಿದ್ದರು ಎನ್ನಲಾಗಿದ್ದು
ಅವರ ಹಠಾತ್ ಸಾವಿನಿಂದ ಅಭಿಮಾನಿಗಳು ಮತ್ತು ವೈಸಿಪಿ ಕಾರ್ಯಕರ್ತರು ತೀವ್ರ ದುಖದಲ್ಲಿ ಮುಳುಗಿದ್ದಾರೆ. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ, ಸಂಪುಟ ಸಚಿವರು, ಹಲವಾರು ಶಾಸಕರು, ಎಂಎಲ್ ಸಿಗಳು ಮತ್ತು ವೈಸಿಪಿ ನಾಯಕರು ಗೌತಮ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.ಗೌತಮ್ ರೆಡ್ಡಿ ಅವರು ನವೆಂಬರ್ 2, 1971 ರಂದು ಜನಿಸಿದರು. ಗೌತಮ್ ರೆಡ್ಡಿ ಅವರ ಹುಟ್ಟೂರು ನೆಲ್ಲೂರು ಜಿಲ್ಲೆಯ ಮರ್ರಿಪದವು ಮಂಡಲದ ಬ್ರಾಹ್ಮಣಪಲ್ಲಿ. ಇಂಗ್ಲೆಂಡ್ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸ್ಸಿ ಒದಿರುವ ಅವರು ರಾಷ್ಟ್ರೀಯ ಮಟ್ಟದ ಸಿವಿಲ್ ಕಂಟ್ರಾಕ್ಟರ್ ಆಗಿದ್ದು ನೆಲ್ಲೂರು ಜಿಲ್ಲೆಯ ಖ್ಯಾತ ರಾಜಕಾರಿಣಿ ಮಾಜಿ ಸಂಸದ ಮೇಕಪಾಟಿ ರಾಜಮೋಹನ್ ರೆಡ್ಡಿ. ಅವರ ಪುತ್ರ, 2014ರ ವಿಧಾನಸಭೆ ಚುನಾವಣೆಯ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದ ಗೌತಮ್ ಚೊಚ್ಚಲ ಬಾರಿಗೆ ಆತ್ಮಕೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2019ರ ಚುನಾವಣೆಯಲ್ಲಿಯೂ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಎರಡು ಬಾರಿ ಗೆಲವು ಸಾಡಿಸಿದ್ದ ಹಿನ್ನಲೆಯಲ್ಲಿ ಆಂಧ್ರ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ. ತಮ್ಮ ಮಂತ್ರಿ ಮಂಡಲದಲ್ಲಿ ಗೌತಮ್ ಅವರಿಗೆ ಕೈಗಾರಿಕೆ ಮತ್ತು ಐಟಿ ಖಾತೆ ಸಚಿವ ಜವಾಬ್ದಾರಿ ನೀಡಿದ್ದರು.
ಜಿಮ್ ಪ್ರಿಯಾ ಗೌತಮ್ ರೆಡ್ಡಿ
ಪಿಟ್ನೆಸ್ ವಿಚಾರದಲ್ಲಿ ತುಂಬಾ ಆಸಕ್ತಿ ಇದ್ದ ಗೌತಮ್ ರೆಡ್ಡಿ ವರ್ಕೌಟ್ ಮಾಡುತ್ತಿದ್ದರು ಎನ್ನಲಾಗಿದೆ ಯುವಜನರನ್ನು ಆಕರ್ಷಿಸುವ ಮೈಕಟ್ಟು ಹೊಂದಿದ್ದ ಆಂಧ್ರ ಸಚಿವ ಗೌತಮ್ ರೆಡ್ಡಿ ಜಿಮ್ ಆರನೆಯ ಪ್ರಾಣ ಎನ್ನುತ್ತಾರೆ ಸ್ನೆಹಿತರು.
ಎಷ್ಟೇ ಬ್ಯುಸಿ ಶೆಡ್ಯೂಲ್ ಇದ್ದರೂ ಬೆಳಗ್ಗೆ ಮತ್ತು ಸಂಜೆ ಒಂದು ಗಂಟೆಯಿಂದ ಎರಡು ಗಂಟೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದರಂತೆ ನೆಲ್ಲೂರು ಮತ್ತು ಹೈದರಾಬಾದ್ನಲ್ಲಿರುವ ಅವರ ನಿವಾಸಗಳಲ್ಲಿ ಜಿಮ್ಗಾಗಿ ನಿರ್ದಿಷ್ಟವಾಗಿ ಕೋಣೆಯನ್ನು ಸ್ಥಾಪಿಸಿದರು. ಜಿಮ್ ನೋಡಿಕೊಳ್ಳಲು ನಿರ್ದಿಷ್ಟವಾದ ಒರ್ವ ತರಬೇತುದಾರರನ್ನು ನೇಮಿಸಿಕೊಂಡಿದ್ದರಂತೆ ಆಹಾರ ಸೇವಿಸಬೇಕು. ಎಂದು ತರಬೇತುದಾರ ಸಲಹೆ ಪಾಲಿಸುತ್ತಿದ್ದರಂತೆ ಜೊತೆಗೆ ಗೌತಮ್ ರೆಡ್ಡಿ ತಿಂಡಿಪೋತರು ಎಂಬ ಪ್ರಚಾರದ ನಡುವೆಯೂ ಅವರು ತಿಂದಷ್ಟು ಖರ್ಚು ಮಾಡುವವರೆಗೂ ಜಿಮ್ ರೂಂ ಬಿಡುವುದಿಲ್ಲ, ಹೀಗಾಗಿಯೇ ಅವರ ಮೈಕಟ್ಟು ಫಿಟ್ ಆಗಿದೆ ಎನ್ನುತ್ತಾರೆ ಫಾಲೋವರ್ಸ್.
ಕೊರೋನಾ ಸೋಂಕಿನಿಂದ ಹೃದಾಘಾತ!
ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಗೌತಮ್ ಇತ್ತಿಚಿಗಷ್ಟೆ ಚೇತರಿಸಿಕೊಂಡಿದ್ದರು. ಕೊರೊನಾ ಸೋಂಕು ಹೃದಯಾಘಾತಕ್ಕೆ ಕಾರಣ ಎನ್ನಲಾಗುತ್ತಿದೆ.