ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗೆ ಕಲ್ಪಿಸಿರುವ ಉಚಿತ ಬಸ್ ಪ್ರಯಾಣದ ಕುರಿತಂತೆ ಅಧ್ಯಯನ ನಡೆಸಲು ಆಂಧ್ರ ಸರ್ಕಾರದ ಮಂತ್ರಿಗಳು ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದರು,ಇದಕ್ಕಾಗಿ ರಚಿಸಿರುವ ಆಂಧ್ರ ಸರ್ಕಾರದ ಉಪ ಸಮಿತಿಯ ಸಚಿವರಾದ ಸಾರಿಗೆ ಮಂತ್ರಿ ಮಂಡಿಪಲ್ಲಿರಾಮಪ್ರಸಾದ್ ರೆಡ್ಡಿ, ಗೃಹಮಂತ್ರಿ ವಂಗಲಪುಡಿ ಅನಿತಾ ಮತ್ತು ಗುಮ್ಮಡಿ ಸಂಧ್ಯಾರಾಣಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಬಸ್ ಪ್ರಯಾಣ ಮಾಡಿ ಬಸ್ಸಿನಲ್ಲಿದ್ದ ಪ್ರಯಾಣಿಕರ ಅಭಿಪ್ರಾಯಗಳನ್ನು ಶೇಖರಿಸಿದ ಅವರು ಮಹಿಳಾ ಪ್ರಯಾಣಿಕರು ಪಡೆದ ಉಚಿತ ಟಿಕೆಟ್ ಪಡೆದು ಪರಶೀಲನೆ ಮಾಡಿದ್ದಾರೆ ಬಳಿಕ ಕರ್ನಾಟಕ ಸರ್ಕಾರದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗು ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಉಚಿತ ಬಸ್ ಪ್ರಯಾಣದ ಕಾರ್ಯಚಟುವಟಿಕೆ ಕುರಿತಾಗಿ ಮಾಹಿತಿ ಪಡೆದಿರುತ್ತಾರೆ.
200 ಕೋಟಿ ನಷ್ಟದ ಅಂದಾಜು
ಆಂಧ್ರ ಪ್ರದೇಶ ರಾಜ್ಯ ಸಾರಿಗೆ ಸಂಸ್ಥೆ ತನ್ನ ಸಿಬ್ಬಂದಿಗೆ ತಿಂಗಳಿಗೆ ರೂ.300 ಕೋಟಿ ಸಂಬಳಕ್ಕೆ ಖರ್ಚು ಮಾಡುತ್ತಿದ್ದು ಒಂದು ವೇಳೆ ಕರ್ನಾಟಕದಂತೆ ಆಂಧ್ರದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದ್ದೆ ಆದರೆ ತಿಂಗಳಿಗೆ ರೂ.200 ಕೋಟಿ ಆದಾಯ ಕಳೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



