ನ್ಯೂಜ್ ಡೆಸ್ಕ್:ಕಾಲು ದಾರಿಯಲ್ಲಿ ತಿರುಮಲTirumala Venkateswara Temple ಕ್ಕೆ ಸಾಗುವ ರಸ್ತೆಯ ಬದಿ ಏಳು ಅಕ್ಕಂದಿರ ಶ್ರೀ ಸಪ್ತ ಸಪ್ತಮಾತೃಕೆಯರ ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ನರಸಿಂಹಿ, ಚಾಮುಂಡ ದೇವತೆಗಳ ಸಣ್ಣ ದೇವಾಲಯವಿದೆ. ದೇವಾಲಯದ ಪ್ರವೇಶದ್ವಾರವು ತುಂಬಾ ಕಿರಿದಾಗಿದೆ ಇದು ಸ್ಥಳೀಯರಿಗೆ ತಿಳಿದಿರಬಹುದಾದರು ಹೊರಗಿನಿಂದ ತಿರುಮಲಕ್ಕೆ ಬರುವಂತ ಬಹುತೇಕ ಭಕ್ತರಿಗೆ ತಿಳಿದಿಲ್ಲ ಎನ್ನಬಹುದು.



ದಾರಿ ಬದಿಯಲ್ಲಿರುವ ಪುಟ್ಟ ದೇವಾಲಯದಲ್ಲಿ ಏಳು ದೇವತೆಗಳು (ಸಪ್ತಮಾತೃಕೆಯರ) ಉದ್ಭವಾಗಿರುವುದು ಎಂದು ಪ್ರತಿತಿ.ಅಕ್ಕನವರ ದೇವಾಲಯದ ನಿರ್ಮಾಣದ ಹಿಂದೆ ಸಾಕಷ್ಟು ಐತಿಹಾಸಿಕ ಮಹತ್ವ ಇದೆ 1940 ರ ದಶಕದಲ್ಲಿ ಮೊದಲಬಾರಿಗೆ ರಸ್ತೆ ನಿರ್ಮಾಣಯದ ಸಮಯದಲ್ಲಿ ರಸ್ತೆ ಪಕ್ಕದಲ್ಲಿ ಬಂಡೆಗಳ ನಡುವೆ ಅಕ್ಕನವರ ಶಿಲೆಗಳು ಇತ್ತು ಇದರ ಮಾಹಿತಿ ಇಲ್ಲದೆ ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಬಂಡೆಗಳು ಅಡ್ಡಿಯಾಗಿವೆ ಎಂದು ಬಂಡೆಗಳನ್ನು ಸರಿಸಿ ಅಲ್ಲಿದ್ದ ಶಿಲೆಗಳನ್ನು ಸ್ಥಳಾಂತರಕ್ಕೆ ಮುಂದಾದಾಗ ಸಾರಾಗವಾಗಿ ಸಾಗುತ್ತಿದ್ದ ರಸ್ತೆ ನಿರ್ಮಾಣ ಕಾರ್ಯಕ್ಕೆ ಅಡ್ಡಿಯುಂಟಾಗಿದೆ ಜೊತೆಗೆ ಅಪಘಾತಗಳು ಸಂಭವಿಸಿದೆ ಈ ಹಿನ್ನಲೆಯಲ್ಲಿ ಸ್ಥಳೀಯರಿಗೆ ಅಕ್ಕನವರ ಶಿಲೆಗಳ ಮಹತ್ವದ ಅರಿವಾಗಿ ಅದನ್ನು ರಸ್ತೆ ನಿರ್ಮಾಣದ ಮತ್ತು ಟಿಟಿಡಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾದ ಹಿನ್ನಲೆಯಲ್ಲಿ ಉನ್ನತ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಸಪ್ತ ಮಾತೃಕೆಯರ ಶಿಲೆಗಳನ್ನು ರಸ್ತೆಯ ಪಕ್ಕದ ಮೊದಲ ಘಾಟ್ ರಸ್ತೆಯಲ್ಲಿ ದೊಡ್ಡ ಬಂಡೆಯ ಕೆಳಗೆ ಮರು ಸ್ಥಾಪಿಸಿ ಪೂಜಾ ಕಾರ್ಯಗಳನ್ನು ಮಾಡಿದರು.ನಂತರ,ರಸ್ತೆ ನಿರ್ಮಾಣ ಕಾರ್ಯವು ಸರಾಗವಾಗಿ ಪೂರ್ಣಗೊಂಡಿತು ಹಾಗಾಗಿ 2008 ರಿಂದ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಅಕ್ಕನವರ (ಸಪ್ತಮಾತೃಕೆಯರ)ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತ ಬಂದಿದೆ ಎನ್ನುವುದು ಸ್ಥಳಿಯರ ಮಾತು.
AlsoRead ಶ್ರೀನಿವಾಸಪುರ ಪಟ್ಟಣದಲ್ಲಿ ಲೋಕಾರ್ಪಣೆಯಾದ ಶ್ರೀ ವೆಂಕಟೇಶ್ವರ ದೇವಾಲಯ: https://www.vcsnewz.com/sri-venkateswara-temple-lokarpana-in-srinivaspur-town/