ಶ್ರೀನಿವಾಸಪುರ: ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರು ಜನಪರ ಕಾಳಜಿ ಹಾಗೂ ದೂರ ದೃಷ್ಟಿ ಅಭಿವೃದ್ಧಿಯಿಂದಾಗಿ ಬೆಂಗಳೂರು ಮಹಾನಗರ ಬೃಹದಕಾರವಾಗಿ ಅಭಿವೃದ್ಧಿಯಾಗಿದೆ ಇದರ ಫಲ ಇಂದು ನಾಡಿನ ಜನತೆ ಕೆಂಪೇಗೌಡರನ್ನು ಕೊಂಡಾಡುತ್ತಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ತಾಲ್ಲೂಕಿನ ಕಸಬಾ ಹೋಬಳಿ ದಳಸನೂರು ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ರಥಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೆಂಗಳೂರು ವಿಮಾನ ನಿಲ್ದಾಣದ ಬಳಿ ಮೋದಿ ಅವರಿಂದ ನ.11ರಂದು ಕೆಂಪೇಗೌಡರ ಪುತ್ಥಳಿ ಅನಾವರಣಗೊಳ್ಳಲಿದ್ದು ಇದರ ಅನ್ವಯ ರಾಜ್ಯಾದ್ಯಂತ ಪ್ರತಿ ಗ್ರಾಮದಲ್ಲೂ ಮೃತಿಕೆ ಸಂಗ್ರಹ ಮಾಡಲಾಗುತ್ತಿದ್ದು ಅದಕ್ಕಾಗಿ ನಾಡಪ್ರಭು ಕೆಂಪೇಗೌಡರ ರಥಯಾತ್ರೆ ತೆರಳುತ್ತಿದೆ ತಾಲೂಕಿನ ಕಸಬಾ ಹೋಬಳಿ ದಳಸನೂರು ಗ್ರಾಮಕ್ಕೆ ರಥಯಾತ್ರೆ ಆಗಮಿಸಿದಾಗ ತಾಲೂಕಿನ ರಾಜ್ಯ ಮಾವು ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಹಾಗು ಪ್ರಭಾವಿ ಕಾಂಗ್ರೆಸ್ ಮುಖಂಡ ದಳಸನೂರು ಗೋಪಾಲಕೃಷ್ಣ ಹಾಗು ಅವರ ಅಭಿಮಾನಿಗಳು ಮುಂದೆ ನಿಂತು ಕೆಂಪೇಗೌಡರ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿದರು
ಈ ಸಂದರ್ಭದಲ್ಲಿ ದಳಸನೂರು ಗೋಪಾಲಕೃಷ್ಣ ಮಾತನಾಡಿ ಕೆಂಪೇಗೌಡರ ಜಾತ್ಯತೀತ ನಿಲವು ಎಲ್ಲಾ ಜಾತಿ ಧರ್ಮಗಳ ಗೌರವಿಸುವ ನಿಲವುಗಳು ಮೆಚ್ಚುವಂತದ್ದು ಇಂದಿಗೂ ಆದರ್ಶ ಹಾಗಾಗಿಯೇ ಅವರು ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಹೇಳಿದರು. ಈ ಕಾರ್ಯಕ್ರಮ ಜಾತ್ಯತೀತ ಹಾಗೂ ಪಕ್ಷಾತೀತವಾಗಿದ್ದು,ಸಮಾಜದ ಎಲ್ಲ ವರ್ಗದ ಜನರೂ ಸಹಕಾರ ನೀಡುವಂತೆ ಮನವಿ ಮಾಡಿದರು
ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಮಾತನಾಡಿ, ಕೆಂಪೇಗೌಡ ಒಬ್ಬ ದಕ್ಷ ಹಾಗೂ ಜನಪರ ಆಡಳಿತಗಾರ. ಅವರಿಗೆ ಜನಹಿತ ಮುಖ್ಯವಾಗಿತ್ತು. ಹಾಗಾಗಿಯೇ ಅವರು ಕೃಷಿ ಹಾಗೂ ವ್ಯಾಪಾರಕ್ಕೆ ಆದ್ಯತೆ ನೀಡಿದ್ದರು. ಜನೋಪಕಾರ್ಯ ಕೈಗೊಳ್ಳಲು ಸದಾ ಚಿಂತಿಸುತ್ತಿದ್ದ ಮಹನೀಯರು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿರಿನ್ ತಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಕಂದಾಯ ನಿರೀಕ್ಷಕ ಮುನಿರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸರಸ್ವತಮ್ಮ ಶ್ರೀನಿವಾಸ್, ಪಿಡಿಒ ಚಿನ್ನಪ್ಪ, ವಸುಂದರಾದೇವಿ, ಬಿಜೆಪಿ ಮುಖಂಡರಾದ ಎಸ್ಎಲ್ಎನ್ ಮಂಜುನಾಥ್, ರೋಣೂರು ಚಂದ್ರಶೇಖರ್, ಎಂ.ಲಕ್ಷ್ಮಣಗೌಡ, ಕೊಟ್ರಗುಳಿ ನಾರಾಯಣಸ್ವಾಮಿ, ಜೆಸಿಬಿ ಅಶೋಕ್ ರೆಡ್ಡಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಅಶೋಕ್ ರೆಡ್ಡಿ, ರಮೇಶ್, ಎನ್.ಆರ್.ಚಂದ್ರಶೇಖರ್, ವೆಂಕಟೇಗೌಡ ಇತರರು ಇದ್ದರು.
Breaking News
- ಚಿಂತಾಮಣಿಯಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾಮಾತೆಗೆ ವಿಶೇಷ ಪೂಜೆ
- ಕೋಲಾರದಲ್ಲಿ ವಿಜಯದಶಮಿಯಂದು RSS ಬೃಹತ್ ಶಕ್ತಿ ಪ್ರದರ್ಶನ
- ಫೋಟೋಗೆ ಅಡ್ಡ ಬಂದಿದ್ದಕ್ಕೆ ಉತ್ತರ ಭಾರತೀಯನ ದೌರ್ಜನ್ಯ ರಕ್ತ ಬರುವಂತೆ ಹಲ್ಲೆ
- ವಿಶ್ವದ ಗಗನಚುಂಬಿ ಕಟ್ಟಡದ ಎತ್ತರ 1 ಕೀ.ಮಿ!
- ಚಾಮುಂಡೇಶ್ವರಿ ಆಶಿರ್ವಾದ ನನ್ನ ಮೇಲೆ ಇದೆ ಸಿದ್ದರಾಮಯ್ಯ
- ಮದನಪಲ್ಲಿ ಜಿಲ್ಲೆ ರಚನೆ ಸದ್ಯಕ್ಕಿಲ್ಲ ಚಂದ್ರಬಾಬು
- ಶ್ರೀನಿವಾಸಪುರ ನೌಕರರ ಸಂಘದ ಮತದಾರ ಪಟ್ಟಿಯಲ್ಲಿ ಅಕ್ರಮ ಅರೋಪ!
- lover Boy ಕಳ್ಳಾಟಕ್ಕೆ ಬೆಸೆತ್ತು ಕಳ್ಳಿ ಹಾಲು ಕುಡಿದ ಯುವತಿ ಆತ್ಮಹತ್ಯೆಗೆ ಯತ್ನ!
- ಶ್ರೀನಿವಾಸಪುರ ಅಪರಿಚಿತ ವಾಹನ ಬಡಿದು ಬೈಕನಲ್ಲಿದ್ದ ತಾಯಿ-ಮಗ ಸಾವು
- ಹರಿಯಾಣದಲ್ಲಿ 200 Days ಮುಖ್ಯಮಂತ್ರಿಯಿಂದ ಬಿಜೆಪಿಗೆ ಹ್ಯಾಟ್ರಿಕ್ ಗೆಲವು!
Sunday, October 13