ನ್ಯೂಜ್ ಡೆಸ್ಕ್:ಕಲಿಯುಗ ವೈಕುಂಠ ತಿರುಮಲ ಶ್ರೀನಿವಾಸನ ದರ್ಶನಕ್ಕೆ ತೆರಳುತ್ತಿರುವ ಭಕ್ತರಿಗೆ ದೇವರ ದರ್ಶನ ಮೂವತ್ತು ಗಂಟೆಗಳ ಸಮಯ ಹಿಡಿಯುತ್ತಿದೆ, ದಿನೆ ದಿನೆ ತಿರುಮಲದಲ್ಲಿ ಭಕ್ತರ ದಟ್ಟಣೆ ಹೆಚ್ಚುತ್ತಿದೆ ಕಳೆದ 20 ದಿನಗಳಿಂದ ತಿರುಮಲ ಜನಸಾಗರವಾಗಿ ಮಾರ್ಪಟ್ಟಿದೆ,ಸರ್ವದರ್ಶನ(ಉಚಿತದರ್ಶನ)ಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದೆ ಜನದಟ್ಟಣೆ ಹೆಚ್ಚಾಗಲು ಕಾರಣ ಎನ್ನುವ ಮಾತು ಕೇಳಿಬರುತ್ತಿದೆ,ಬೆಳಗ್ಗೆ ವಾಹನ ದಟ್ಟಣೆ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಸಂಜೆ ವೇಳೆಗೆ ಮತ್ತೆ ಭಕ್ತರು ಬರುವ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಹನಗಳ ದಟ್ಟನೆ ಸಹ ಹೆಚ್ಚಾಗುತ್ತಿವೆ.
ದೇವರ ದರ್ಶನ ಪಡೆಯಲು ತೆರಳುವ ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮತ್ತು ನಾರಾಯಣಗಿರಿ ಶೆಡ್ಗಳ ಎಲ್ಲಾ ಕೊಠಡಿಗಳು ಟೈಮ್ ಸ್ಲಾಟ್ ಟೋಕನ್ ಇಲ್ಲದೆ ತಿರುಮಲಕ್ಕೆ ಬಂದ ಭಕ್ತರಿಂದ ತುಂಬಿ ತುಳುಕುತ್ತಿದೆ ಕೊಠಡಿಗಳ ಹೊರಗೆ ಶಿಲಾ ತೋರಣಂ ತನಕ ಭಕ್ತರು ಕ್ಯೂ ಲೈನ್ ನಲ್ಲಿ ಕಾಯುತ್ತಿದ್ದಾರಂತೆ.
ಟೊಕನ್ ಇಲ್ಲದ ಉಚಿತ ದರ್ಶನಕ್ಕೆ ಸುಮಾರು 30 ಗಂಟೆಗಳ ಕಾಲ ಕಾಯಬೇಕಿದೆ, ರೂ.300 ಟಿಕೆಟ್ ಪಡೆದ ವಿಶೇಷ ಪ್ರವೇಶ ಟಿಕೆಟ್ ಹೊಂದಿರುವ ಭಕ್ತರು ಮೂರು-ನಾಲ್ಕು ಗಂಟೆಗಳಲ್ಲಿ ದರ್ಶನ ಪಡೆಯುತ್ತಿದ್ದು ವಾರದ ದಿನಗಳಲ್ಲಿ ಪ್ರತಿದಿನ ಸರಾಸರಿ 70 ರಿಂದ 80 ಸಾವಿರ ಹಾಗು ವಾರಾಂತ್ಯದಲ್ಲಿ ಅಂದಾಜು ಒಂದು ಲಕ್ಷ ಮಂದಿ ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಟಿಟಿಡಿ ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದು ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಅನ್ನ, ಕುಡಿಯುವ ನೀರು, ಹಾಲು ನೀಡಲಾಗುತ್ತಿದೆ. ಭಕ್ತರು ಯಾವುದೇ ರಿತಿಯ ತೊಂದರೆಯಾಗದಂತೆ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ತಿರುಮಲ ಪ್ರಯಾಣವನ್ನು ರೂಪಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿರುತ್ತಾರೆ. ದೇವರ ದರ್ಶನ ಪಡೆಯಲು ಭಕ್ತಾದಿಗಳು ಸರದಿ ಸಾಲಿನಲ್ಲಿ ಹೆಚ್ಚು ಹೊತ್ತು ಕಾಯಬೇಕಾಗುತ್ತದೆ. ಜೂನ್ 30ರವರೆಗೆ ಯಾವುದೆ ರಿತಿಯ ವಿಐಪಿ ಹಾಗು ವಾರಾಂತ್ಯ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಕಲ್ಪಿಸಲಾಗುತ್ತಿದ್ದ ಬ್ರೇಕ್ ದರ್ಶನ ರದ್ದುಗೊಳಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27