ನ್ಯೂಜ್ ಡೆಸ್ಕ್: ಪಂಚೆ ಉಟ್ಟು ಬಂದಿದ್ದ ರೈತನನ್ನು ಮಾಲ್ ಸಿಬ್ಬಂದಿ ಒಳಗೆ ಬಿಡದೆ ಅಪಮಾನಿಸಿದ ಘಟನೆ ಬೆಂಗಳೂರು ನಗರದ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ನಲ್ಲಿ ನಡೆದಿದೆ.
ಹಾವೇರಿ ಮೂಲದ ನಾಗರಾಜ್ ತಮ್ಮ ತಂದೆ, ತಾಯಿಯನ್ನು ಮಾಲ್ ವ್ಯವಸ್ಥೆಯನ್ನು ಪರಿಚಯಿಸಿ ಮಾಲನಲ್ಲಿ ಸಿನೆಮಾ ತೋರಿಸಲು ಕರೆದುಕೊಂಡು ಹೋಗಿದ್ದು ಮಾಲ್ ಪ್ರವೇಶ ದ್ವಾರದಲ್ಲಿ ನಾಗರಾಜ್ ತಂದೆ ರೈತ ಫಕೀರಪ್ಪ ಪಂಚೆ ಉಟ್ಟಿದ್ದಾರೆ ಅನ್ನೋ ಕಾರಣಕ್ಕೆ ಮಾಲ್ ಒಳಗೆ ಬಿಡದೆ ತಡೆದಿದ್ದಾರೆ ನಾಗರಾಜ್ ತಂದೆ ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಎಂಬ ಗ್ರಾಮದ ನೇಗಿಲಯೋಗಿ.
ಮಾಲ್ ಮುಂದೆ ಅರ್ಧ ಗಂಟೆಗೂ ಹೆಚ್ಚು ಕಾಲ ನಿಲ್ಲಿಸಿದ್ದಾರೆ. ನಾಗರಾಜ್ ಒಳಗೆ ಬಿಡಿ ಅಂತ ಎಷ್ಟು ಪರಿಪರಿಯಾಗಿ ಬೇಡಿಕೊಂಡರು ಪಂಚೆ ನೇಪ ಹೇಳಿ ಬಿಡುವುದಿಲ್ಲ, ಮಾಲ್ನಲ್ಲಿ ಪಂಚೆ ಉಟ್ಟು ಬಂದವರನ್ನು ಬಿಡುವುದಿಲ್ಲ. ನಮ್ಮ ಮಾಲ್ನಲ್ಲಿ ಈ ರೀತಿ ರೂಲ್ಸ್ ಇದೆ ಅಂತ ಉದ್ದಟತನ ತೋರಿಸಿದ ಹಿನ್ನಲೆಯಲ್ಲಿ ನಾಗರಾಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು.
ಪಂಚೆ ಉಟ್ಟ ವ್ಯಕ್ತಿಯನ್ನು ಮಾಲ್ ನಲ್ಲಿ ಬಿಟ್ಟಿಲ್ಲ ಎಂಬ ಸುದ್ದಿ ಸಾಮಜಿಕ ಜಾಲತಾಣಗಳಲ್ಲಿ ಹರಿದಾಡಿದೆ ಇದು ಸಾರ್ವಜನಿಕರ ಹೋರಾಟಗಾರನ್ನು ಕೆರಳಿಸಿದೆ ಕೆಲವೊಂದು ಡಿಜಿಟಲ್ ಮಾಧ್ಯಮಗಳು ವಿಶೇಷವಾಗಿ ಪರಗಣಿಸಿದ್ದು ರಾಜ್ಯಾದ್ಯಂತ ವ್ಯಾಪಾಕವಾಗಿ ಸುದ್ದಿ ಹಬ್ಬಿದ ಹಿನ್ನಲೆಯಲ್ಲಿ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮಾಲ್ನವರು ಕೂಡಲೇ ರೈತನ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಮಾಲ್ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಘಟನೆಯನ್ನು ವಿರೋಧಿಸಿದ ಕನ್ನಡ ಸಂಘಟನೆಯ ಕಾರ್ಯಕರ್ತರು ರೈತರ ಗೆಟಪ್ನಲ್ಲಿ ಬೆಳಗ್ಗೆ ಮಾಲ್ ಮುಂದೆ ಜಮಾಯಿಸಿದ್ದರು.ಎಚ್ಚೆತ್ತುಕೊಂಡ ಜಿಟಿ ಮಾಲ್ ಆಡಳಿತ ಮಂಡಳಿ ತಕ್ಷಣ ಘಟನೆ ಕುರಿತು ಸ್ಪಷ್ಟನೆ ನೀಡಿದ್ದಲ್ಲದೆ ಪಂಚೆ ಉಟ್ಟಿದ್ದ ವ್ಯಕ್ತಿ ರೈತ ಫಕೀರಪ್ಪ ರನ್ನು ತಡೆದಿದ್ದ ಸೆಕ್ಯೂರಿಟಿ ಅರುಣ್ ಕೈಯಲ್ಲಿ ಹಿರಿಯ ವ್ಯಕ್ತಿಗೆ ಕ್ಷಮೆ ಯಾಚಿಸಿದಲ್ಲದೆ ಯಾವುದೆ ದುರುದ್ದೇಶದಿಂದ ನಾವು ತಡೆದಿಲ್ಲ. ಮ್ಯಾನೇಜ್ಮೆಂಟ್ ಅವರಿಂದ ಉತ್ತರ ಬರುವ ತನಕ ಕಾಯಿಸಿದ್ದೆವು ಅಷ್ಟೇ ಎಂದು ಸಮಜಾಯಿಸಿ ನೀಡಿದ್ದಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27