ಶ್ರೀನಿವಾಸಪುರ: ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ವಿದ್ಯಾರ್ಥಿ ದಸೆಯಲ್ಲಿ ಕಲಿಯುವ ಆಸಕ್ತಿ ವಹಿಸಿದರೆ ಭವಿಷ್ಯತ್ತಿನಲ್ಲಿ ಸಂಸ್ಕಾರವಂತ ಪ್ರಜೆಯಾಗಲು ಸಹಕಾರಿಯಾಗುತ್ತದೆ ಎಂದು ಶ್ರೀನಿವಾಸಪುರ ಸೆಂಟ್ರಲ್ನ ರೋಟರಿ ಅಧ್ಯಕ್ಷ ಹಾಗು ತಾ.ಪಂ ಮಾಜಿ ಸದಸ್ಯ ಮಂಜುನಾಥರೆಡ್ಡಿ ಹೇಳಿದರು.ಅವರು ತಾಲೂಕಿನ ಗಡಿಗ್ರಾಮವಾದ ಪಂಚಾಯಿತಿ ಮುಖ್ಯಕೇಂದ್ರ ಮುದಿಮೊಡಗು ಸರ್ಕಾರಿ ಪ್ರೌಢ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಆಂಗ್ಲಭಾಷ ನಿಘಂಟು ವಿತರಿಸಿ ಮಾತನಾಡಿದರು.
ಸೇವೆ ಅನ್ನುವ ಪದಕ್ಕೆ ಅಂತ್ಯ ಹಾಗು ವಿರಾಮ ಇರುವುದಿಲ್ಲ ಸಮಾಜದಲ್ಲಿ ಯಾವುದೇ ರೀತಿಯಲ್ಲೂ ಸೇವೆ ಒದಗಿಸುವ ಮೂಲಕ ಸಾಮಾಜಿಕ ಕಾಳಜಿ ಹೊಂದುವ ಮೂಲಕ ವಿದ್ಯಾರ್ಥಿಗಳು ಸೇವೆ ಕುರಿತು ಆಸಕ್ತರಾಗಬೇಕು,ಶಾಲೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ರೋಟರಿ ಸಂಸ್ಥೆ ನೆರವಿಗೆ ಬರಲಿದೆ ಎಂದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ನ ಕಾರ್ಯದರ್ಶಿ ಹಾಗು ಶಿಕ್ಷಕ ಶಿವಮೂರ್ತಿ ಮಾತನಾಡಿ ಆಂಧ್ರದ ಗಡಿಭಾಗದ ಗ್ರಾಮಗಳ ವಿದ್ಯಾರ್ಥಿಗಳಿಗೆ ಭಾಷ ಸುಲಲಿತವಾಗಿ ಮಾತನಾಡಲು ಕಲಿಯಲು ಇಂಗ್ಲೀಷ್ ನಿಘಂಟು ಪ್ರಯೋಜನವಾಗುತ್ತದೆ ಇದರಿಂದಾಗಿ ಶ್ರೀನಿವಾಸಪುರ ಸೆಂಟ್ರಲ್ ರೋಟರಿ ವತಿಯಿಂದ ನೀಡಿರುವ ಉಚಿತವಾಗಿ ನಿಘಂಟುಗಳನ್ನು ಗಡಿಭಾಗದ ಮುದಿಮೊಡಗು ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ಎಂದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



