ಶ್ರೀನಿವಾಸಪುರ:ಶಂಕಿತ ಡೆಂಘೀ ಜ್ವರಕ್ಕೆ ಮಗುವೊಂದು ಬಲಿಯಾಗಿದೆ ಎಂದು ಜಾಕೀರ್ ಹುಸೇನ್ ಮೊಹಲ್ಲಾದ ನಿವಾಸಿಯೊಬ್ಬರು ಹೇಳಿದ್ದು ಕಳೆದ 20 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ 8 ತಿಂಗಳ ಹಸುಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದೆ ಎಂದು ಕುಟುಂಬಿಕರು ಹೇಳುತ್ತಾರೆ ವಿಷಮ ಜ್ವರ ಇದ್ದ ಮಗುವಿಗೆ ಪೋಷಕರು ಕೋಲಾರ ಚಿಕಿತ್ಸೆಗೆ ಕರೆದೊಯಿದಿದ್ದು ಅಲ್ಲಿ ಫಲಕಾರಿಯಾಗದೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು ಫಲ ನೀಡದೆ ಮಗು ಮೃತಪಟ್ಟಿರುವುದಾಗಿ ಪೋಷಕರು ಅಲವತ್ತುಕೊಳ್ಳುತ್ತಾರೆ.
ಜಾಕೀರ್ ಹುಸೆನ್ ಮೊಹಲ್ಲಾದಲ್ಲಿ ಡೆಂಘೀ ಜ್ವರದಿಂದ ಮಗು ಸಾವನ್ನಪ್ಪಲು ಸ್ಥಳಿಯವಾಗಿ ಸ್ವಚ್ಚತೆ ಇಲ್ಲದ್ದೆ ಕಾರಣವಾಗಿದ್ದು ಇಲ್ಲಿ ಇನ್ನೂ 15 ರಿಂದ 20 ಮಕ್ಕಳು ವಿಷಮ ಜ್ವರದಿಂದ ಬಳಲುತ್ತಿರುವುದಾಗಿ ಜನ ಹೇಳುತ್ತಾರೆ.
ಹರಿಯದ ಕೊಳಚೆ ನೀರಿನಿಂದ ವಿಷಮ ಜ್ವರ ಹರಡಲು ಕಾರಣ
ವಿಷಮ ಜ್ವರಗಳ ಕುರಿತಾಗಿ ಸಾರ್ವಜನಿಕವಾಗಿ ಸಾಕಷ್ಟು ಮಟ್ಟದಲ್ಲಿ ಅರಿವು ಮೂಡಿಸಲಾಗಿತ್ತಿದೆ ಇಂದ್ರಧನುಷ್ ಕಾರ್ಯಕ್ರಮ ಮಾಡಿದಾಗಲೂ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಜನತೆಗೆ ಜಾಗೃತಿ ಮೂಡಿಸಲಾಗುತ್ತಿದೆ ಶಾಲಾಕಾಲೇಜುಗಳಲ್ಲಿ ಸಹ ವಿಷಮ ಜ್ವರಗಳ ಕುರಿತಾಗಿ ಜನಜಾಗೃತಿ ಮೂಡಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಮೊಹಮದ್ ಷರೀಫ್ ತಿಳಿದರು ಪಟ್ಟಣದಲ್ಲಿ ನಡೆದಿರುವ ಡೇಂಘಿ ಪ್ರಕರಣ ಕುರಿತಾಗಿ ಮಾಹಿತಿ ನೀಡಿದ ಅವರು ಪ್ರತಿ ಗ್ರಾಮ ಹಾಗು ವಾರ್ಡಗಳಲ್ಲೂ ಆಶಾ ಕಾರ್ಯಕರ್ತರಿಂದ ವಿಶೆಷವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಎಲ್ಲೆಲ್ಲಿ ವಿಷಮ ಜ್ವರಗಳು ಇದಿಯೊ ಅಲ್ಲಿ ವಿಶೇಷವಾಗಿ ಗಮನ ಹರಸುತ್ತಿರುವುದಾಗಿ ಹೇಳಿದರು,ಜನತೆ ವೈಯುಕ್ತಿಕ ಸ್ವಚ್ಚತೆಗೂ ಆದ್ಯತೆ ನೀಡಬೇಕು ಮನೆಗಳ ಬಳಿ ನೀರುನಿಲ್ಲದಂತೆ ಎಚ್ಚರಿಕೆ ವಹಿಸಬೇಕಿದ್ದು ಈಗಿನ ಪರಿಸ್ಥಿಯಲ್ಲಿ ಸೊಳ್ಳೆಯಿಂದ ಬಚಾವಾಗಲು ಅಗತ್ಯಕ್ರಮಗಳನ್ನು ತಗೆದುಕೊಳ್ಳುವಂತೆ ಸೂಚಿಸಿದ ಅವರು ಸೊಳ್ಳೆ ನಿವಾರಣೆಗೆ ಸೊಳ್ಳೆಬತ್ತಿ ಬಳಸುವುದು ಸೊಳ್ಳೆಪರದೆ ಬಳಸುವುದು ಹಾಗೆ ಮಕ್ಕಳ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸುವ ಮೂಲಕ ಮಕ್ಕಳನ್ನು ಸೊಳ್ಳೆಗಳಿಂದ ರಕ್ಷಿಸಲು ಪೋಷಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27