ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನಲ್ಲಿ ನಿರುದ್ಯೊಗ ಸಮಸ್ಯೆ ನಿವಾರಣೆಗೆ ಪಟ್ಟಣಕ್ಕೆ ಹೊಂದಿಕೊಂಡಂತೆ ಕೈಗಾರಿಕ ಪ್ರದೇಶ ನಿರ್ಮಾಣ ಮಾಡಲು ಯೋಜನೆ ಸಿದ್ದಪಡಿಸುತ್ತಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಇಂದು ಪಟ್ಟಣದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿ ವಿಕ್ಷಿಸಿ ಮಾತನಾಡಿದ ಅವರು ತಾಲೂಕಿಗೆ ಕೈಗಾರಿಕೆಗಳು ಬಂದರೆ ಇಲ್ಲಿನ ನಿರುದ್ಯೊಗಿ ಯುವಕರ ಸಮಸ್ಯೆ ಬಗೆಹರೆಯಲು ಸಹಕಾರಿಯಾಗುತ್ತದೆ ಎಂದರು.
ತಾಲೂಕಿನ ಮುಳಬಾಗಿಲು ರಸ್ತೆ ಅಥಾವ ಪುಂಗನೂರು ರಸ್ತೆಯಲ್ಲಿ ಜಮೀನು ಗುರುತಿಸಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡುವ ಕುರಿತಾಗಿ ಕೈಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ರೂಪು ರೇಷೆ ಸಿದ್ದಪಡಿಸುವುದಾಗಿ, ಮಾವು ಟಮ್ಯಾಟೊ ಸೇರಿದಂತೆ ತೋಟಗಾರಿಕೆ ಬೆಳೆಗಳ ಸಂಸ್ಕರಣ ಘಟಕಗಳು ಮತ್ತು ಕೃಷಿ ಆಧಾರಿತ ಕೈಗಾರಿಕೆಗಳ ನಿರ್ಮಾಣ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದರು.
ಒಳಾಂಗಣ ಶೆಟಲ್ ಕೊರ್ಟ್ ನಿರ್ಮಾಣ
ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಒಳಾಂಗಣ ಶೆಟಲ್ ಕೊರ್ಟ್ ನಿರ್ಮಾಣಕ್ಕೆ ಸಂಸದ ಮುನಿಶಾಮಿ ತಮ್ಮ ನಿಧಿಯಿಂದ ಹಣ ನೀಡಲಿದ್ದು ಇದಕ್ಕೆ ಸಂಬಂದಿಸಿದಂತೆ ಜಮೀನು ನೀಡುವುದಾಗಿ ತಿಳಿಸಿದ ಶಾಸಕ ವೆಂಕಟಶಿವಾರೆಡ್ಡಿ ಪಟ್ಟಣದ ಜನರ ಕ್ರೀಡಾಚಟುವಟಿಕೆಗಾಗಿ ಅತ್ಯಾಧುನಿಕವಾಗಿ ಕ್ರೀಡಾಂಗಣ ಸರ್ವರೀತಿಯಲ್ಲೂ ನವೀಕರಣವಾಗುತ್ತಿದೆ ಹಾಗೆ ಸುಸಜ್ಜಿತ ಒಳಾಂಗಣ ಶೆಟಲ್ ಕೊರ್ಟ್ ನಿರ್ಮಾಣಕ್ಕೆ ಸದ್ಯದಲ್ಲಿಯೆ ಭೂಮಿ ಪೂಜೆ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಯುವಜನ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ,ಲೋಕೋಪಯೋಗಿ ಇಲಾಖೆ ಅಭಿಯಂತರ ಟಿ.ನಾಗರಾಜ್,ಗುತ್ತಿಗೆದಾರರಾದ ಶಿವಾರೆಡ್ಡಿ,ಕಂಬಾಲಹಳ್ಳಿ ಶ್ರೀನಿವಾಸರೆಡ್ಡಿ,ಯುವ ಮುಖಂಡರಾದ ದುರ್ಗಾಪ್ರಸಾದ್,ಗುರುಮೂರ್ತಿ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



