ನ್ಯೂಜ್ ಡೆಸ್ಕ್(ಕ್ರೈಂ ಟೀಂ):ಶ್ರೀನಿವಾಸಪುರ ಪಟ್ಟಣದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆ ಶ್ರೀನಿವಾಸಪುರ-ಕೋಲಾರ ರಸ್ತೆಯಲ್ಲಿನ ಮುದುವಾಡಿ ಬಳಿಯ ನಾಯಕರಹಳ್ಳಿ-ತೊಂಡಾಲದ ಖಾಸಗಿ ಜಮೀನಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಇಂದು ಪತ್ತೆಯಾಗಿದೆ.
ಸುಟ್ಟು ಕರಕಲರಾಗಿರುವ ಮಹಿಳೆಯನ್ನು ಶೊಭಾ(30)ಎಂದು ಗುರುತಿಸಲಾಗಿ ಆಕೆ ಮುಳಬಾಗಿಲು ತಾಲೂಕಿನವರಾಗಿದ್ದು ಆಂಧ್ರದ ವ್ಯಕ್ತಿಗೆ ಮದುವೆ ಮಾಡಿಕೊಟ್ಟಿದ್ದು ನಂತರದಲ್ಲಿ ವಿವಾದವಾಗಿ ಆಕೆ ಮಕ್ಕಳೊಂದಿಗೆ ಶ್ರೀನಿವಾಸಪುರದ ವೆಂಕಟೇಶ್ವರ ಬಡಾವಣೆಯಲ್ಲಿ ವಾಸಿಸುತ್ತಿದ್ದರು ಜೀವನ ಪೋಷಣೆಗೆ ಪಟ್ಟಣದ ಪೊಸ್ಟ್ ಆಫಿಸ್ ಬಳಿ ಲಕ್ಷ್ಮೀ ಹರ್ಬಲ್ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು ಎನ್ನುತ್ತಾರೆ,ಈಕೆಯ ಸಾವಿನ ಹಿಂದೆ ಹಲವಾರು ಅನುಮಾನಗಳು ವ್ಯಕ್ತವಾಗಿದ್ದು ಮೃತ ಮಹಿಳೆ ಬಳಸುತ್ತಿದ್ದರು ಎನ್ನಲಾದ ಮೊಬೈಲ್ ಹಾಗು ದ್ವಿಚಕ್ರವಾಹನ ಶ್ರೀನಿವಾಸಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ಅವಲಕುಪ್ಪ ಗ್ರಾಮದ ಹೊಲದಲ್ಲಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಮಹಿಳೆಯನ್ನು ಅವಲಕುಪ್ಪದ ಬಳಿ ಹತ್ಯೆ ಮಾಡಿ ತೊಂಡಾಲದ ಬಳಿಯ ಜಮೀನಿಗೆ ಸಾಗಿಸಿ ಸುಟ್ಟುಹಾಕಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ, ಇದರ ಅದಾರದಂತೆ ಪ್ರಕರಣವನ್ನು ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದಾಖಲು ಮಾಡಲಾಗಿದ್ದು ಈ ಸಂಬಂದ ಅನುಮಾನಸ್ಪದ ಮೇಲೆ ಶ್ರೀನಿವಾಸಪುರ ತಾಲೂಕಿನ ಚಿರುವನಹಳ್ಳಿಯ ರಮೇಶ್ ಸೇರಿದಂತೆ ಇಬ್ಬರನ್ನು ಶ್ರೀನಿವಾಸಪುರ ಪೋಲಿಸರು ವಶಕ್ಕೆ ಪಡೆದಿರುತ್ತಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



