ಶ್ರೀನಿವಾಸಪುರ: ತಾಲೂಕಿನ ಜೀವನಾಡಿ ಬೆಳೆಯಾಗಿರುವ ಮಾವು ಕಳೆದ ಎರಡು ಮೂರು ವರ್ಷಗಳಿಂದ ಹವಾಮಾನ ವೈಪರಿತ್ಯದಿಂದ ಬೆಳೆಗಾರನಿಗೆ ನಷ್ಟ ಉಂಟಾಗುತ್ತಿದೆ ಈ ವಿಚಾರ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳಿಗೂ ತಿಳಿದ ವಿಚಾರವಾಗಿದೆ ಆದರೂ ಮಾವು ಬೆಳೆಗಾರರಿಂದ ವಿಮೆ ಕಟ್ಟಿಸಿಕೊಂಡಿರುವ ಸಂಸ್ಥೆ ಹವಾಮಾನ ವೈಪರಿತ್ಯದಿಂದ ಯಾವುದೆ ಬೆಳೆಹಾನಿಯಾಗಿಲ್ಲ ನಮ್ಮಲ್ಲಿ ಉಪಗ್ರಹ ಅಧಾರಿತ ವರದಿ ಇದೆ ಎಂದು ವಿಮಾ ದಾರರಿಗೆ ನಷ್ಟದ ವಿಮೆ ಹಣ ನೀಡದೆ ವಿಮೆ ಸಂಸ್ಥೆ ಮೋಸ ಮಾಡುತ್ತಿದೆ ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಆರೋಪಿಸಿದರು.
ಇಂದು ವಿವಿಧ ರೈತ ಸಂಘಗಳಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಕೇಂದ್ರ ಸರ್ಕಾರವೆ ಮಾವು ಬೆಳೆಗೆ ವಿಮೆ ಕಟ್ಟುವಂತೆ ಪ್ರಚಾರಮಾಡಿತ್ತು ಅದರಂತೆ ಮಾವು ಬೆಳೆಗಾರರು ದೊಡ್ಡ ಸಂಖ್ಯೆಯಲ್ಲಿ ಮಾವುಬೆಳೆಗೆ 2021-2022 ಸಾಲಿನ ವಿಮೆ ಕಂತು ಕಟ್ಟಿದ್ದರು ಆದರೆ 2021 ಸಾಲಿನಲ್ಲಿ ಹವಾಮಾನ ವೈಪರಿತ್ಯದಿಂದ ಹೆಚ್ಚಿನ ಮಳೆಯಾಗಿ ಮಾವು ಇಳುವರಿ ಬಾರದೆ ಬಂದಂತ ಇಳುವರಿ ಹೆಚ್ಚು ದಿನ ನಿಲ್ಲದೆ ಮಾವು ಬೆಳೆಗಾರರು ಸಾಕಷ್ಟು ನಷ್ಟಕ್ಕೆ ಒಳಗಾಗಿದ್ದರು ಇಂತಹ ಸಂಕಷ್ಟವನ್ನು ಮಾವು ಬೆಳೆ ಅನುಭವಿಸಿದ್ದಾರೆ ಇಂತಹ ಸಂದರ್ಭದಲ್ಲಿ ಬೆಳೆ ಹಾನಿಗೆ ರೈತರಿಗೆ ವಿಮೆ ಹಣ ಪಾವತಿ ಮಾಡಬೇಕಾಗಿದ್ದ ವಿಮಾ ಸಂಸ್ಥೆ ಯಾವುದೆ ಹಾನಿಯಾಗಿಲ್ಲ ಎಂದು ಜಾರಿಕೊಳ್ಳುತ್ತಿದೆ ಎಂದು ದೂರಿದರು.
ಪ್ರಾಂತ ರೈತ ಸಂಘದ ಪಾತಕೋಟೆ ನವೀನ್ ಮಾತನಾಡಿ ಬೆಳೆ ಹಾನಿ ಕುರಿತಂತೆ ಸರ್ಕಾರದ ವರದಿ ಅಥಾವ ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಸರ್ವೆ ವರದಿ ಅಧಾರಿತವಾಗಿ ಹವಾಮಾನ ವೈಪರಿತ್ಯದಿಂದ ಆಗಿರುವ ಮಾವುಬೆಳೆಯ ನಷ್ಟದ ಅಂದಾಜು ಪಡೆಯಬೇಕಿದ್ದ ವಿಮಾ ಸಂಸ್ಥೆ ಉಪಗ್ರಹ ಆದಾರಿತವಾಗಿ ಬಂದಿರುವ ವರದಿಯಂತೆ ಯಾವುದೆ ಹವಾಮಾನ ವೈಪರಿತ್ಯ ಆಗಿಲ್ಲ ಹಾಗೆ ಬೆಳೆ ನಷ್ಟ ಸಹ ಆಗಿಲ್ಲ ಎಂದು ಅವೈಙ್ಞಾನಿಕವಾದ ಹೇಳಿಕೆ ಕೋಡುತ್ತಿದೆ ಮಾವು ಬೆಳೆಯದ ತಾಲೂಕಿನ ಉತ್ತರ ಭಾಗದ ಬೈರಗಾನಹಳ್ಳಿ,ರಾಯಲ್ಪಾಡು ಸೇರಿದಂತ ನಾಮಕಾವಸ್ಥೆ ಎನ್ನುವಂತೆ ಅರಿಕುಂಟೆ ಭಾಗದಲ್ಲಿ ಬೆಳೆಹಾನಿಯಾಗಿದೆ ಎಂದು ತಿಪ್ಪೆಸಾರಿಸುವ ವರದಿ ನೀಡುವ ಮೂಲಕ ಮಾವು ಬೆಳೆಗಾರರನ್ನು ವಂಚಿಸಿದೆ ಎಂದರು.
ಹಸಿರು ಸೇನೆಯ ತಾಲೂಕು ಅಧ್ಯಕ್ಷ ನಂಬಿಹಳ್ಳಿಶ್ರೀರಾಮರೆಡ್ದಿ ಮಾತನಾಡಿ ವಿಮೆ ಸಂಸ್ಥೆ ಮಾವು ಬೆಳೆಗಾರರಿಗೆ ಬೆಳೆ ನಷ್ಟದ ವಿಮೆ ಹಣ ನೀಡದೆ ಸಬೂಬು ಹೇಳಿಕೊಂಡು ವಂಚಿಸುತ್ತಿದೆ ಎಂದು ಒಂದು ತಿಂಗಳ ಹಿಂದೆ ಈ ಬಗ್ಗೆ ಕೊಲಾರ ಜಿಲ್ಲಾಧಿಕಾರಿ ಹಾಗೆ ತಾಲೂಕು ತಹಶೀಲ್ದಾರ್ ಗಮನಕ್ಕೆ ತಂದಿರುವುದಾಗಿ ತಿಳಿಸಿದ ಅವರು ಅವರುಗಳಿಂದ ಯಾವುದೆ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ವಿಮೆ ಸಂಸ್ಥೆ ವಂಚನೆ ವಿರುದ್ದ ಈ ತಿಂಗಳ 9 ರಂದು ಶ್ರೀನಿವಾಸಪುರದಿಂದ ಮಾವು ಬೆಳೆಗಾರರು ಬೈಕ್ ರ್ಯಾಲಿ ಮೂಲಕ ಹೋಗಿ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೇಳಿದರು.
ರೈತ ಸಂಘದ ಬೀಸನಹಳ್ಲಿ ಬೈಚೇಗೌಡ ಮಾತನಾಡಿ ಸರ್ಕಾರದ ನಿಲುವುಗಳಿಂದ ಮಾವು ಬೆಳೆಗಾರರು ನಿರಂತರವಾಗಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ ಅದರಲ್ಲಿ ವಿಮಾ ಸಂಸ್ಥೆ ಸಹ ಬೆಳೆಗಾರರನ್ನು ವಂಚಿಸಲು ಹೋರಟಿದೆ ಎಂದ ಅವರು ಕೋಲಾರದ ಉಸ್ತುವಾರಿ ಸಚಿವರೇ ತೋಟಗಾರಿಕೆ ಸಚಿವರಾಗಿದ್ದರು ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದೆ ಇರುವುದು ದುರದುಷ್ಟಕರ ವಿಮೆ ಸಂಸ್ಥೆಯ ವಂಚನೆ ವಿರುದ್ದ ಹೋರಾಟದಲ್ಲಿ ಮಾವು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಈರಪ್ಪರೆಡ್ಡಿ,ಸಯ್ಯದ್ ಫಾರೂಖ್,ಅಸ್ಲಾಂ,ಶ್ರೀಧರ್ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



