ಶ್ರೀನಿವಾಸಪುರ: ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಆಯಾ ಶಾಲೆಗಳ ಹಳೇಯ ವಿಧ್ಯಾರ್ಥಿಗಳು ಸಹಕಾರ ನೀಡುವ ಮೂಲಕ ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುವಂತೆ ಶ್ರೀರಂಗಪಟ್ಟಣದ ಪ್ರಥಮ ದರ್ಜೆ ಕಾಲೇಜು ಪ್ರಾದ್ಯಾಪಕ ಡಾ.ಶಿವಪ್ರಸಾದ್ ಹೇಳಿದರು ಅವರು ತಮ್ಮ ಸ್ವಗ್ರಾಮವಾದ ತಾಲೂಕಿನ ನಂಬಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ಓದಿದ ಹಳೇಯ ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡಿರುವಂತವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳನ್ನು ಉಳಸಿಕೊಳ್ಳುವಂತ ಆಂದೋಲನ ಎಲ್ಲಡೆ ಇದೆ,ಗ್ರಾಮೀಣ ಭಾಗದಲ್ಲಿ ಇದು ಪರಿಣಾಮಕಾರಿಯಾಗಿ ಜಾರಿಯಗಲು ಎಲ್ಲರ ಸಹಕಾರ ಬೇಕಿರುತ್ತದೆ ಎಂದರು.
ಸನ್ಮಾನ ಸ್ವೀಕರಿಸಿದ ಚಿಂತಾಮಣಿಯ ಉಪನ್ಯಾಸಕ ಡಾ.ಮುನಿರೆಡ್ದಿ ಮಾತನಾಡಿ ಸಾಧನೆ ಸುಲಭದ ಮಾತಲ್ಲ, ಸಾಧನೆಯ ಹಾದಿಯಲ್ಲಿ ಬರುವ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಗುರಿ ತಲುಪುವವನೆ ನಿಜವಾದ ಸಾಧಕನಾಗುತ್ತಾನೆ ಇದು ಇತರರಿಗೆ ಪ್ರೇರಣೆ ಆಗಬೇಕು. ನಮ್ಮ ಸಾಧನೆ ಕಂಡು ಇತರರೂ ಸಂತಸ ಪಡಬೇಕು.ನಾವೂ ಸಹ ಹೀಗೆ ಸಾಧಿಸಬೇಕು ಎಂಬ ಛಲ ಅವರಲ್ಲಿ ಹುಟ್ಟಬೇಕು ಎಂದರು.
ಕೋಲಾರದ ಎಸ್.ಎನ್.ಆರ್ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಎಸ್.ವಿ.ಮಂಜುನಾಥ್ ಮಾತನಾಡಿ ಪಂಚಲಿಂಗ ಕ್ಷೇತ್ರ ಎಂದು ಖ್ಯಾತ ಪಡೆದಿರುವ ನಂಬಿಹಳ್ಳಿ ಪ್ರೌಡಶಾಲೆ ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಿದೆ ಈ ಪರಂಪರೆಯನ್ನು ಇಲ್ಲಿನ ಉಪಾದ್ಯಾಯರು ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ವಿನಂತಿಸಿದ ಅವರು ವಿದ್ಯಾರ್ಥಿಗಳು ಸಹ ಸೋಲೇ ಗೆಲುವಿಗೆ ಮೆಟ್ಟಿಲು ಎಂಬ ಭಾವನೆಯಿಂದ ಪ್ರಯತ್ನ ಬಿಡದೆ ಆಶಾವಾದಿಗಳಾಗಿ ನಿರ್ದೀಷ್ಟ ಗುರಿಯಿಟ್ಟುಕೊಂಡು ಸಾಧಿಸುವ ಮೂಲಕ ಶಾಲೆಯ ಹೆಸರು ಘನತೆಯನ್ನು ಉಳಿಸಿಕೊಳ್ಳುವಂತೆ ಹೇಳಿದರು.
ಈ ಸಂದರ್ಭದಲ್ಲಿ ಪ್ರೌಡಶಾಲೆ ಮುಖ್ಯೋಪಾದ್ಯಾಯ ನಾರಯಣಸ್ವಾಮಿ ಸೇರಿದಂತೆ ನಾಲ್ಕು ಜನರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಸುಬ್ರಮಣಿ,ಮುಖ್ಯೊಪಾದ್ಯಾಯರಾದ ಐಮಾರೆಡ್ಡಿ,ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನರಸಿಂಹಪ್ಪ,ರಾಮಚಂದ್ರಪ್ಪ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



