ಶ್ರೀನಿವಾಸಪುರ:-ಮದನಪಲ್ಲಿಯಲ್ಲಿ ನಾಳೆ ಜುಲೈ 6 ಬುಧವಾರ ನಡೆಯಲಿರುವ ತೆಲಗುದೇಶಂ ಪಕ್ಷದ ಕ್ಷೇತ್ರಮಟ್ಟದ ಸಮಾವೇಶ ಹಾಗು ಬಹಿರಂಗ ಸಭೆ,ಮಿನಿಮಹಾನಾಡು ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯುಡು ಭಾಗವಹಿಸುತ್ತಿದ್ದು ಅವರು ನಾಳೆ ವಿಜಯವಾಡ ನಗರದಿಂದ ಬೆಂಗಳೂರು ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಗಮಿಸಿ ನಂತರ ಮಧ್ಹಾನಃ ಸುಮಾರು 2 ಗಂಟೆಗೆ ರಸ್ತೆಮಾರ್ಗದ ಮೂಲಕ ಹೆಚ್ ಕ್ರಾಸ್,ಮಾಡಿಕೆರೆ ಕ್ರಾಸ್ ತಾಲೂಕಿನ ತಾಡಿಗೊಳ್ ಕ್ರಾಸ್ ಮೂಲಕ ಮದನಪಲ್ಲಿಗೆ ತೆರಳಲಿದ್ದಾರೆ.
ಆಂಧ್ರದ ರಾಯಸೀಮೆಯ ಹೆಬ್ಬಾಗಿಲು ಆಗಿರುವ ಆಂಧ್ರಪ್ರದೇಶದ ರಾಜಂಪೇಟ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮದನಪಲ್ಲಿಯಲ್ಲಿ ನಡೆಯಲಿರುವ ತೆಲಗು ದೇಶಂ ಕಾರ್ಯಕ್ರಮದಲ್ಲಿ ಶ್ರೀನಿವಾಸಪುರ ತಾಲೂಕು ಕೋಡಿಪಲ್ಲಿ ಪಂಚಾಯಿತಿ ವ್ಯಾಪ್ತಿಯ ಕೊಂಡಾಮರಿ ಬಳಿಯ ಕಲ್ಲುಕ್ವಾರಿ ಮಾಲಿಕ ಹಾಗು ಮದನಪಲ್ಲಿ ವಿಧಾನಸಭಾ ಕ್ಷೇತ್ರದ ತೆಲಗುದೇಶಂ ಪಕ್ಷದ ಅಭ್ಯರ್ಥಿ ಅಕಾಂಕ್ಷಿಯಾಗಿರುವ ಜಯರಾಮ ನಾಯ್ಡು ತಾಡಿಗೊಳ್ ಕ್ರಾಸ್(ಪೈ ಕ್ರಾಸ್) ಬಳಿ ಚಂದ್ರಬಾಬು ನಾಯುಡು ಅವರಿಗೆ ದೊಡ್ಡ ಮಟ್ಟದ ಸ್ವಾಗತ ಕೋರುವ ಮೂಲಕ ಕರ್ನಾಟಕದಲ್ಲೂ ತಮ್ಮ ಹವಾ ಇರುವುದನ್ನು ಆಂಧ್ರದ ಮಾಜಿ ಸಿಎಂ ಗೆ ತೋರಿಸಲು ಶಕ್ತಿ ಪ್ರದರ್ಶನಕ್ಕೆ ತಯಾರಿ ನಡೆಸಿದ್ದಾರೆ.
ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ಗಜಮಾಲೆ ಸ್ವಾಗತ ಕೋರಿ ನಂತರ ಅವರೊಂದಿಗೆ ಮಿನಿಮಹಾನಾಡು ಕಾರ್ಯಕ್ರಮಕ್ಕೆ ಹೋಗಲಿರುವುದಾಗಿ ಸ್ವತಃ ಜಯರಾಮ ನಾಯ್ಡು vcsnewz.com ಗೆ ತಿಳಿಸಿರುತ್ತಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



