ಶ್ರೀನಿವಾಸಪುರ:ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಯುವಕನೊರ್ವ ಮುರೇಡಶ್ವರದ ಬಳಿ ಸಮುದ್ರದ ಪಾಲಾಗಿರುತ್ತಾನೆ.
ಸಮುದ್ರದ ಪಾಲಾಗಿರುವ ಯುವಕನನ್ನು ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ನಿವಾಸಿ ಕೃಷಿ ಕಾರ್ಮಿಕ ಶೇಖ್ ಅಹ್ಮದ್ ಪಾಷ ಅವರ ಮಗ ಶೇಖ್ ಅರ್ಬಾರ್ ಪಾಷ(26) ಎಂದು ಹೇಳಲಾಗಿದೆ.ಪ್ಯಾರ ಮೆಡಿಕಲ್ ಒದನ್ನು ಇತ್ತಿಚಿಗಷ್ಟೆ ಪುರ್ಣಮಾಡಿಕೊಂಡಿದ್ದು ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದನಂತೆ.
ಬುಧವಾರದಂದು ತಾಡಿಗೋಳ್ ಗ್ರಾಮದ ಅರ್ಬಾರ್ ಸೇರಿದಂತೆ ಸುಮಾರು 12 ಮಂದಿ ಯುವಕರ ತಂಡ ಉತ್ತರ ಕಾರ್ನಾಟಕ ಉಡುಪಿ ಸೇರಿದಂತೆ ಇತರಡೆಗೆ ಟಿಟಿ ವಾಹನದಲ್ಲಿ ಪ್ರವಾಸ ಹೊರಟಿದ್ದು ಗುರುವಾರ ಸಂಜೆ ಮುರುಡೇಶ್ವರದ ಬಳಿ ಸಮುದ್ರಕ್ಕೆ ಇಳಿದಿದ್ದಾರೆ ಇಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ ಈ ಮಾಹಿತಿ ಪ್ರವಾಸಿ ಯುವಕರಿಗೆ ಮಾಹಿತಿ ಇಲ್ಲದ ಕಾರಣ ಸಮುದ್ರದಲ್ಲಿ ಈಜಾಡಿದ್ದಾರೆ ಅಲೆಗಳು ದೊಡ್ದಮಟ್ಟದಲ್ಲಿ ಬಂದಾಗ ಎಚ್ಚೆತ್ತುಕೊಂಡ ಯುವಕರ ದಡ ಸೇರಿದ್ದಾರೆ ಈ ಸಂದರ್ಭದಲ್ಲಿ ಮೂವರು ಯುವಕರು ಸಾಹಸ ಪಟ್ಟು ದಡಕ್ಕೆ ಬರುವ ಪ್ರಯತ್ನ ಮಾಡಿರುತ್ತಾರೆ ಆದರೂ ಬರಲು ಸಾಧ್ಯವಾಗದಾಗ ಸ್ಥಳೀಯ ಮೀನುಗಾರ ಸಹಕಾರದಿಂದ ಇಬ್ಬರು ಯುವಕರು ಪ್ರಯಾಸದಿಂದ ದಡಕ್ಕೆ ಬಂದಿದ್ದು ಅರ್ಬಾರ್ ಈಜು ಬಾರದೆ ದಡ ಮುಟ್ಟಲು ಸಾಧ್ಯವಾಗದೆ ಅಲೆಗಳ ಮದ್ಯ ಕಾಣೆಯಾಗಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ.
ಮುರುಡೇಶ್ವರಕ್ಕೆ ಹೋಗಿದ್ದ ಮುಖಂಡ ಕೆ.ಕೆ.ಮಂಜು
ತಾಲ್ಲೂಕಿನ ಯುವ ಮುಖಂಡ ಕೆ.ಕೆ.ಮಂಜು ಸಿಗಂದೂರುಚೌಡೇಶ್ವರಿ ದೇವಾಲಯದ ಪ್ರವಾಸಕ್ಕೆ ತೆರಳಿದ್ದು ಈ ಸಂದರ್ಭದಲ್ಲಿ ತಾಲೂಕಿನ ಯುವಕನೊರ್ವ ಮುರಡೇಶ್ವರದಲ್ಲಿ ಸಮುದ್ರಪಾಲು ಆಗಿರುವ ವಿಷಯ ತಿಳಿದವರೆ ನೇರವಾಗಿ ಘಟನಾ ಸ್ಥಳಕ್ಕೆ ಹೋಗಿ ಅತಂಕದಲ್ಲಿದ್ದ ಯುವಕರನ್ನು ಸಂತೈಸಿ ಅವರಿಗೆ ಸ್ಪಂದಿಸಿರುತ್ತಾರೆ.ಭಟ್ಕಳ ತಾಲೂಕಿಗೆ ಬರುವ ಘಟನ ಸ್ಥಳ ಸಂಬಂದಿಸಿದ ಪೋಲಿಸರು ಹೇಳುವಂತೆ ಅಲೆಗಳ ಮದ್ಯೆ ಕಾಣೆಯಾಗಿರುವ ಯುವಕ ಬದುಕುವುದು ಅಸಾದ್ಯ ಎಂದು ಶಂಕಿಸಿರುತ್ತಾರೆ. ಅರ್ಬಾರ್ ಪಾಷ ಗ್ರಾಮದಲ್ಲಿ ಎಲ್ಲರೊಂದಿಗೂ ಸ್ನೇಹಮಯಿಯಾಗಿ ಬೆರೆಯುತ್ತಿದ್ದ ಸದಾ ಚಟುವಟಿಕೆಯಿಂದ ಕೂಡಿದ್ದ ವ್ಯಕ್ತಿಯಾಗಿದ್ದ ಎಂದು ಗ್ರಾಮದ ಪಂಚಾಯಿತಿ ಸದಸ್ಯ ಮಕ್ಬೂಲ್ ಬರಿದ್ ಮತ್ತು ವಿಜಯ್ ಹೇಳುತ್ತಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



