ಶ್ರೀನಿವಾಸಪುರ:ಕಾಂಗ್ರೆಸ್ ಪಕ್ಷ ಮುಸ್ಲಿಂರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡದೆ ಕೆವಲ ವೋಟ್ ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ವಿಧಾನಪರಿಷತ್ ಮುಖ್ಯಸಚೇತಕ ವೈ.ಎ. ನಾರಾಯಣಸ್ವಾಮಿ ಆರೋಪಿಸಿದರು ಅವರು ತಮ್ಮ ಸ್ವಗ್ರಾಮ ಹೆಚ್ಚನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಶ್ರೀ ಸೀತಾರಾಮ ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ್ದ ಅವರು ಗಂಗಾಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ವಿವಿಧ ಸಮುದಾಯದ ಫಲಾನುಭವಿಗಳಿಗೆ ಆದೇಶ ಪತ್ರಗಳು ಮತ್ತು ಶ್ರಮ ಶಕ್ತಿಯೋಜನೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ನೇರ ಸಾಲ ವಿತರಣೆ ಮಾಡಿದ ಅವರು ಭಾರತೀಯ ಜನತಾ ಪಕ್ಷ ಯಾವುದೇ ಕಾರಣಕ್ಕೂ ಮುಸ್ಲಿಂ ವಿರೋಧಿ ಅಲ್ಲ ಎಂದು ಹೇಳಿದರು.ಎಲ್ಲಾ ಜಾತಿ ಧರ್ಮದ ಮಹಿಳೆಯರಿಗೆ ಅನಕೂಲ ಆಗಬೇಕು ಎಂದು ವಿಶೇಷವಾಗಿ ಮುಸ್ಲಿಂ ಮಹೆಳೆಯರು ಯೋಜನೆಯ ಪ್ರಯೋಜನ ಪಡೆಯಲು ಹತ್ತು ಸಾವಿರ ನೇರ ಸಾಲ ಯೋಜನೆಯನ್ನು ಪ್ರಧಾನಿ ಮೋದಿ ಜಾರಿಗೆ ತಂದಿರುವುದಾಗಿ ಹೇಳಿದರು.
ಕೆಸಿ ವ್ಯಾಲಿ ಎರಡನೇಯ ಹಂತ
ಕೆಸಿ ವ್ಯಾಲಿ ಯೋಜನೆಯ ಎರಡನೆಯ ಹಂತಕ್ಕೆ ಸರ್ಕಾರ ನಾಲ್ಕನೂರ ಐವತ್ತು ಕೋಟಿ ಹಣ ಬೀಡುಗಡೆ ಮಾಡಲಾಗಿದ್ದು ಈ ಯೋಜನೆ ಅಡಿಯಲ್ಲಿ ಮುದುವಾಡಿ ಕೆರೆಯಿಂದ ಹೆಚ್ಚನಳ್ಳಿ ಕೆರೆಗೆ ನೇರವಾಗಿ ನೀರು ಬರಲಿದೆ ಎಂದು ತಿಳಿಸಿದರು.
ಮುಳಬಾಗಿಲು ಘಟನೆ ಬೇಸರ ವ್ಯಕ್ತಪಡಿಸಿದ ವೈ.ಎ.ಎನ್.
ಮುಳಬಾಗಿಲಿನಲ್ಲಿ ನಡೆದಂತ ಶ್ರೀರಾಮರ ಶೋಭಾಯಾತ್ರೆ ವೇಳೆ ಕಲ್ಲು ಬೀಸಿದ ದುಷ್ಕರ್ಮಿಗಳ ವಿರುದ್ದ ಪೋಲಿಸರು ಕಠಿಣ ಕ್ರಮ ಜರುಗಿಸಬೇಕು ಎಂದು ವೈ.ಎ. ನಾರಾಯಣಸ್ವಾಮಿ ಒತ್ತಾಯಿಸಿದರು.ಮುಳಬಾಗಿಲು ಘಟನೆ ಪೂರ್ವಯೋಜಿತ ಕೃತ್ಯವಾಗಿದ್ದು ವಿದ್ಯತ್ ಕಡಿತ ಗೋಳಿಸಿ ಮಾಡಲಾಗಿರುವ ಕೃತ್ಯ ಹಿಂದೆ ಯಾರ ಕೈವಾಡ ಇದೆ ಎಂಬುದಾಗಿ ತನಿಖೆ ನಡೆಸುವಂತೆ ಮತ್ತು ಕಲ್ಲು ತೂರಿದವರನ್ನು ಗೂಂಡಾ ಕಾಯೆಯಡಿ ಬಂಧಿಸಿವಂತೆ ಪೋಲಿಸರನ್ನು ಒತ್ತಾಯಿಸಿದರು.
ಮಾವಿನ ಬೆಳೆಗಾರನಿಗೆ ಅನ್ಯಾಯವಾಗಬಾರದು
ನಾನು ಸ್ವತಃ ಮಾವು ಬೆಳೆಗಾರನಾಗಿದ್ದು ಮಾವಿನ ಬೆಳೆ ಬೆಳೆಯಲು ಏನೆಲ್ಲ ಸಮಸ್ಯೆಗಳು ಇದೆ ಎಂಬ ಅರಿವು ಇದೆ ಮಾವಿನ ಬೆಳೆಗಾರನಿಗೆ ಯಾವುದೇ ರೀತಿಯ ಅನ್ಯಾಯ ಆಗಬಾರದು ಎಂಬುದು ನನ್ನ ಕಳಕಳಿ ಎಂದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಮಾವಿನ ಮಂಡಿ ತೆರೆದು ವಹಿವಾಟು ನಡೆಸಲಿ ಎಂದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್,ತಾಲೂಕು ಅಧ್ಯಕ್ಷ ಅಶೋಕ್ ರೆಡ್ಡಿ,ಪುರಸಭೆ ಸದಸ್ಯ ನಲ್ಲಪಲ್ಲಿ ರೆಡ್ಡೆಪ್ಪ,ಜಯರಾಮರೆಡ್ಡಿ,ಷಫೀಉಲ್ಲಾ,ಫೈರೋಜ್,ರೋಣೂರುಚಂದ್ರಶೇಖರ್,ರಮೇಶ್ ರೆಡ್ದಿ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



