ಚಿಂತಾಮಣಿ:-ಚಿಂತಾಮಣಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಭೂಕಂಪನ ಆಗಿದ್ದು ಜನತೆ ಬಯಭೀತರಾಗಿ ಮನೆಯಿಂದ ಹೊರಬಂದ ಘಟನೆ ಇಂದು ಮಂಗಳವಾರ ರಾತ್ರಿ ಸುಮಾರು 8.50 ಗಂಟೆ ಸಮಯದಲ್ಲಿ ನಡೆದಿರುತ್ತದೆ.
ಚಿಂತಾಮಣಿ ತಾಲೂಕಿನ ಕೆಂಚರ್ಲಾಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ ಮಿಟ್ಟಹಳ್ಳಿ,ಅಪ್ಸಾನಹಳ್ಳಿ, ದೊಡ್ಡಹಳ್ಳಿ,ನಂದನಹಳ್ಳಿ, ಗೋನಿಪಲ್ಲಿ,ಅನಪಲ್ಲಿ,ರಾಸಪಲ್ಲಿ ಹಾಗು ಸುತ್ತುಮುತ್ತಲಿನ ಹಲವಾರು ಗ್ರಾಮಗಳಲ್ಲಿ ಭೂಮಿನಡುಗಿದ ಅನುಭವ ಆಗಿದೆ ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಜನರು ಹೊರಗೆ ಬಂದಿರುತ್ತಾರೆ.ಕೆಲವು ಗ್ರಾಮಗಳಲ್ಲಿ ದೊಡ್ಡ ಸದ್ದಿನ ಕಂಪನ ನಡೆದರೆ ಇನ್ನೂ ಕೆಲವು ಗ್ರಾಮಗಳಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಆದರೆ ಯಾವುದೇ ಪ್ರಾಣ ಹಾನಿ ಆಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಭೂಮಿಯ ಕಂಪನದಿಂದ ಮನೆಯಲ್ಲಿನ ಪಾತ್ರೆಗಳು ಅಲ್ಲಾಡಿ ಕೆಳಗೆ ಬಿದ್ದಿದ್ದು ಜನತೆ ಆತಂಕ ಗೊಂಡಿರುತ್ತಾರೆ. ಮನೆಯಿಂದ ಹೊರ ಬಂದ ಜನತೆ ರಸ್ತೆಗಳಲ್ಲಿ ನಿಂತು ಇದು ನಿಜನಾ ಅಥಾವ ಕನಸ ಎಂದು ಆತಂಕದಿಂದ ಪರಸ್ಪರ ಮುಟ್ಟಿನೊಡಿಕೊಂಡು ಅನಿಭವ ಹೇಳಿಕೊಳ್ಳುತ್ತಿದ್ದಾರೆ.
ಮನೆ ಮಂದಿಯಲ್ಲ ಮನೆಯಿಂದ ಹೊರ ಬಂದಿದ್ದು ಈಗ ಮತ್ತೆ ಮನೆಯ ಒಳಗೆ ಹೋಗಲು ಜನತೆಗೆ ಧೈರ್ಯವೇ ಇಲ್ಲವಂತೆ ಹೀಗೆಂದು ನಡು ರಸ್ತೆಯಲ್ಲೇ ನಿಂತ ಗ್ರಾಮಸ್ಥರು ಬೆಡ್ ಶೀಟ್ ಹೊದ್ದಿಕೊಂಡು ಬಿಳುತ್ತಿರುವ ಮಂಜಿನಲ್ಲೆ ನಡುಗುತ್ತ ಹೇಳುತ್ತಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



