ಶ್ರೀನಿವಾಸಪುರ:ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಅ.23 ರಂದು ನಡೆಯಲಿರುವ ಚುನಾವಣೆಯಲ್ಲಿ ಎನ್ಡಿಎ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಂ.ಸುರೇಶ್ ಪರ ಚುನಾವಣೆ ಪ್ರಚಾರದಲ್ಲಿ ಶ್ರೀನಿವಾಸಪುರ ರಾಜಕಾರಡ ತ್ರಿಮೂರ್ತಿಗಳು ಇಂದು ಒಂದೇ ವೇದಿಕೆಯಲ್ಲಿ ಕೂತು ಸುದ್ಧಿಗೋಷ್ಠಿ ನಡೆಸಿದ್ದಾರೆ.
ಪದವೀಧರ ಕ್ಷೇತ್ರದ ಚುನಾವಣೆ ಮೈತ್ರಿಕೂಟಕ್ಕೆ ಅತ್ಯಂತ ಪ್ರತಿಷ್ಟೆಯಾಗಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಇದು ದಿಕ್ಸೂಚಿಯಾಗಲಿದೆ ಎಂದು ರಾಜ್ಯ ಮಟ್ಟದಲ್ಲಿ ಮೈತ್ರಿ ನಾಯಕರ ಮಾತು, ಹಾಗಾಗಿ ಸ್ಥಳೀಯ ಮಟ್ಟದಲ್ಲಿ ಮೈತ್ರಿ ಕೂಟದ ಹಾಲಿ ಶಾಸಕರು ಮಾಜಿ ಶಾಸಕರು ಒಗ್ಗೂಡಿ ಮತ ಸೇಳೆಯಲು ಚುನಾವಣೆ ರಣತಂತ್ರ ರೂಪಿಸಲು ಒಗ್ಗಟ್ಟು ಪ್ರದರ್ಶಿಸುವ ಸೂಚನೆ ಬಂದ ಹಿನ್ನಲೆಯಲ್ಲಿ ಶ್ರೀನಿವಾಸಪುರದ ಜಡಗಟ್ಟಿದ ರಾಜಕಾರಣದಲ್ಲಿ ಖ್ಯಾತರಾದ ಹಾಲಿ ಶಾಸಕ ವೆಂಕಟಶಿವಾರೆಡ್ಡಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಯಣಸ್ವಾಮಿ ಹಾಗು ತೂಪಲ್ಲಿ ಚೌಡರೆಡ್ಡಿ ಇಂದು ಭಾನುವಾರ ಶ್ರೀನಿವಾಸಪುರದಲ್ಲಿ ತರಾತುರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮೈತ್ರಿ ಕೂಟದ ಅಭ್ಯರ್ಥಿ ಕೆ.ಎಂ.ಸುರೇಶ್ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಹೇಳಿದ್ದಾರೆ.

ಬಿಜೆಪಿ ಭದ್ರಕೋಟೆ ಆಗ್ನೆಯ ಪದವೀಧರ ಕ್ಷೇತ್ರ
ಆಗ್ನೆಯ ಪದವೀಧರ ಕ್ಷೇತ್ರವು ದಾವಣಗೆರೆ (ಹರಿಹರ, ದಾವಣಗೆರೆ, ಜಗಳೂರು ತಾಲ್ಲೂಕು), ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಕ್ಷೇತ್ರ ಹರಡಿಕೊಂಡಿದೆ. 10 ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿ ಅಭ್ಯರ್ಥಿಯಾಗಿರುವ ದಾವಣಗೆರೆಯ ಕೆ.ಎಂ. ಸುರೇಶ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ತುಮಕೂರಿನ ಶಶಿ ಹುಲಿಕುಂಟೆಮರ್ ನಡುವೆ ನೇರ ಹಣಾಹಣಿ ಇದೆ.
ಪದವಿಧರ ಕ್ಷೇತ್ರದಲ್ಲಿ 1972 ರಿಂದ 2020 ರವರಿಗೂ ಕಳೆದ ಹತ್ತು ಚುನಾವನೆಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ ಹಾಗಾಗಿ ಇದು ಬಿಜೆಪಿ ಭದ್ರಕೋಟೆ ಎನ್ನಬಹುದು ಆದರೆ ಈ ಬಾರಿ ಚುನಾವಣೆ ಬಿಜೆಪಿಗೆ ಅಷ್ಟು ಸಲಿಸು ಅಲ್ಲ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಚಾರ.ಬಿಜೆಪಿ 8 ಹಾಗೂ ಜೆಡಿಎಸ್ 2 ಬಾರಿ ಚುನಾವಣೆಯಲ್ಲಿ ಗೆಲವು ಸಾಧಿಸಿದೆ. ಈಗ ಎರಡೂ ಪಕ್ಷಗಳು ಒಂದಾಗಿದ್ದು ಎನ್ಡಿಎ ಮೈತ್ರಿ ಕೂಟಕ್ಕೆ ಆನೆ ಬಲ ಬಂದಂತಾಗಿದೆ. 54 ವರ್ಷಗಳಿಂದ ನಿರಂತರ ಸೆಣೆಸುತ್ತಿರುವ ಕಾಂಗ್ರೆಸ್, ಎರಡು ವರ್ಷಗಳ ಹಿಂದೆ ನಡೆದ ಆಗ್ನೆಯ ಶಿಕ್ಷಕರ ಕ್ಷೇತ್ರ ಗೆದ್ದ ಮಾದರಿಯಲ್ಲೇ ಮುನ್ನಡೆಯುವ ವಿಶ್ವಾಸ ಒಂದಡೆಯಾದರೆ ಒಂದು ವರ್ಷಕ್ಕೂ ಮೊದಲೇ ಅಭ್ಯರ್ಥಿ ಘೋಷಣೆ ಮಾಡಿದ ಕಾಂಗ್ರೆಸ್, ಚುನಾವಣಾ ಅಖಾಡದಲ್ಲಿ ಒಡಾಡುತ್ತ ನೋಂದಣಿ ಹಂತದಿಂದಲೇ ಮತದಾರರ ತಲುಪುವ ಪ್ರಯತ್ನದಲ್ಲಿ ಶಶಿ ಹುಲಿಕುಂಟೆಮಠ್ ಯಶಸ್ವಿಯಾಗಿದ್ದಾರೆ ಎನ್ನುತ್ತಾರೆ.
ಬಿಜೆಪಿ ಭದ್ರಕೋಟೆ ಬೇಧಿಸಿದ ಡಿ.ಟಿ.ಶ್ರೀನಿವಾಸ್
2020ರಲ್ಲಿ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಡಿ.ಟಿ.ಶ್ರೀನಿವಾಸ್ ಮತ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದರು. ನಂತರ ಎರಡು ವರ್ಷಗಳ ಹಿಂದೆ ನಡೆದ ವಿಧಾನಪರಿಷತ್ನ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದಿರುವ ಇವರನ್ನು ಪಕ್ಷ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಉಸ್ತುವಾರಿ ಅನುಸರಿಸಿದ ಅಲ್ಪಸಂಖ್ಯಾತ ಹಿಂದುಳಿದ ಲೆಕ್ಕಚಾರ ತಂತ್ರಗಾರಿಕೆಯನ್ನು ಇಲ್ಲೂ ಪ್ರಯೋಗಿಸುವ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಇದೆ ಎನ್ನುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಕಳೆದ ಬಾರಿ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಗೆಲವು ಸಾಧಿದ್ದ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಗೆದ್ದ ನಂತರ ಕ್ಷೇತ್ರದತ್ತ ಮುಖ ಮಾಡಿಲ್ಲ ಎಂಬುದು ದೊಡ್ಡ ಆರೋಪ ಎಲ್ಲಡೆ ಮತದಾರರಿಂದ ಕೇಳಿ ಬರುತ್ತಿದೆ.
ಮೈತ್ರಿ ಕೂಟ ಎನ್ಡಿಎ ಯಶಸ್ವಿಯಾಗುತ್ತ
ಬಿಜೆಪಿಗೆ ಸದಾ ಎದುರಾಳಿಯಾಗುತ್ತಿದ್ದ ಜೆಡಿಎಸ್ ಪ್ರಸಕ್ತ ಚುನಾವಣೆಯಲ್ಲಿ ‘ಎನ್ಡಿಎ’ ಭಾಗವಾಗಿದೆ. ಜೆಡಿಎಸ್ನಲ್ಲೂ ಕೆಲವರು ಟಿಕೆಟ್ ಆಕಾಂಕ್ಷಿಗಳಿದ್ದರೂ ಜೆಡಿಎಸ್-ಬಿಜೆಪಿ ಒಗ್ಗೂಡಿದ್ದರೂ ಒಳ ಏಟಿನ ಭೀತಿಯನ್ನು ತಳ್ಳಿಹಾಕುವಂತಿಲ್ಲ. ಕಳೆದ ಮೂರ್ನಾಲ್ಕು ಚುನಾವಣೆಯಲ್ಲಿ ಸ್ಥಳಿಯ ಅಭ್ಯರ್ಥಿಗಳು ಜೆಡಿಎಸ್-ಬಿಜೆಪಿ ಯಿಂದ ಸ್ಪರ್ದಿಸುತ್ತ ಇದ್ದರು ಈಗ ಎನ್ಡಿಎ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಜಿಲ್ಲೆಯ ಹೊರಗಿನವರು ಎಂಬ ಅಸಮಾಧಾನ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಭಾಗದಲ್ಲಿದೆ.ಇದರ ಜೋತೆಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶ್ರೀನಿವಾಸಪುರ ಮುಳಬಾಗಿಲು ಹಾಗು ಶಿಡ್ಲಘಟ್ಟದಲ್ಲಿ ಹೊರತು ಪಡಿಸಿದರೆ ಉಳಿದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರಿದ್ದಾರೆ ಇದು ಸಹ ಕಾಂಗ್ರೆಸ್ ಅಭ್ಯರ್ತಿಗೆ ಪ್ಲಸ್ ಪಾಯಿಂಟ್ ಎನ್ನಬಹುದು.



