ನ್ಯೂಜ್ ಡೆಸ್ಕ್: ತಮಿಳುನಾಡಿನ ಪುರಾಣ ಪ್ರಸಿದ್ಧ ತಿರುವಣ್ಣಾಮಲೈ ಅರುಣಾಚಲೇಶ್ವರ ದೇವಾಲಯಕ್ಕೆ ಅನ್ಯಧರ್ಮೀಯರೊಬ್ಬರು ಪ್ರವೇಶಿಸಿದ ವಿಚಾರವಾಗಿ ತಮಿಳುನಾಡಿನಲ್ಲಿ ವಿವಾದಕ್ಕೆ ಕಾರಣವಾಗಿದೆ. ಅಕ್ಟೋಬರ್ ಕಾರ್ತಿಕ ದೀಪೋತ್ಸವದ ಪೂರ್ವಸಿದ್ಧತೆಗಳ ಪರಿಶೀಲನೆಗಾಗಿ 17ರಂದು ದೇವಸ್ಥಾನಕ್ಕೆ ತಮಿಳುನಾಡು ಸರ್ಕಾರದ ಇಬ್ಬರು ಸಚಿವರು ಭೇಟಿ ನೀಡಿದ್ದರು ಇವರೊಂದಿಗೆ ಬಂದಿದ್ದ ಅವರ ಅನುಯಾಯಿಗಳ ಪೈಕಿ ಅನ್ಯಧರ್ಮಿಯನೊಬ್ಬ ದೇವಾಲಯದ ಒಳಗೆ ಆಗಮಿಸಿದ್ದು ವಿವಾದದ ಕಿಡಿಗೆ ಕಾರಣವಾಗಿದೆ.
ಏನಿದು ಘಟನೆ?
ತಿರುವಣ್ಣಾಮಲೈಯ ಅರುಣಾಚಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನವೆಂಬರ್ 15ರಿಂದ ಆರಂಭವಾಗಲಿರುವ ಪ್ರಖ್ಯಾತ ಕಾರ್ತಿಕ ದೀಪೋತ್ಸವದ ಸಿದ್ಧತೆಗಳ ಪರಿಶೀಲನೆಗಾಗಿ ತಮಿಳುನಾಡಿನ PWD ಸಚಿವ ಆಧವ್ ಅರ್ಜುನ ಮತ್ತು ಹಿಂದೂ ಧಾರ್ಮಿಕ ಹಾಗೂ ದತ್ತಿ ಇಲಾಖೆ ಸಚಿವ ಎಸ್. ರಮೇಶ್ ದೇವಾಯಲಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಸಚಿವರ ತಂಡದೊಂದಿಗೆ ಬಂದಿದ್ದ ವ್ಯಕ್ತಿಯೊಬ್ಬ ಗಡ್ಡಧಾರಿ ಮುಸ್ಲಿಂ ಧರ್ಮದ ಗುರುತಾದ ಟೋಪಿ (Skullcap) ಧರಿಸಿದ್ದರು ಎನ್ನಲಾಗಿದೆ. ದೇವಾಲಯದ ಆವರಣದೊಳಗೆ ಟೋಪಿ ಧರಿಸಿ ಒಡಾಡಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಯಿತು. ಸ್ಥಳದಲ್ಲಿದ್ದ ಭಕ್ತರು ಮತ್ತು ಪತ್ರಕರ್ತರು ಇದನ್ನು ಆಕ್ಷೇಪಿಸಿದಾಗ, ಸಚಿವರು ಆತನಿಗೆ ಟೋಪಿ ತೆಗೆಯುವಂತೆ ಸೂಚಿಸಿದ್ದಾರೆ. ಸಚಿವ ಆಧವ್ ಅರ್ಜುನ ಅವರ ಅನುಯಾಯಿ ಎಂದು ಹೇಳಲಾಗಿದ್ದು, ದೇವಸ್ಥಾನದ ನಿಯಮಗಳ ಪ್ರಕಾರ ಆ ವ್ಯಕ್ತಿಗೆ ಪ್ರವೇಶ ನೀಡಿರುವುದು ಯಾವ ಮಾನದಂಡದ ಆಧಾರದಲ್ಲಿ ಎಂದು ಪ್ರಶ್ನಿಸಿದ್ದಾರೆ ಈ ಬಗ್ಗೆ ತಮಿಳು ಪತ್ರಿಕೆಯೊಂದು ವರದಿ ಮಾಡಿದೆ.

ಬಿಜೆಪಿಯಿಂದ ತೀವ್ರ ಆಕ್ಷೇಪ
ಘಟನೆಗೆ ಸಂಬಂದಿಸಿದಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಮತ್ತು ಪಕ್ಷದ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರ ಪ್ರಕಾರ, ಹಿಂದೂ ದೇವಸ್ಥಾನಗಳ ಪ್ರವೇಶಕ್ಕೆ ಸಂಬಂಧಿಸಿದ ಆಗಮ ಶಾಸ್ತ್ರಗಳ ನಿಯಮಗಳು ಮತ್ತು ಮದ್ರಾಸ್ ಹೈಕೋರ್ಟ್ನ ನಿರ್ದೇಶನಗಳನ್ನು ಪಾಲಿಸಬೇಕು. ಅನ್ಯಧರ್ಮದ ವ್ಯಕ್ತಿಯ ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದಂತೆ ಅಗತ್ಯ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಅವರು ಅಗ್ರಹಿಸಿದ್ದಾರೆ. ಸಚಿವರು ದೇವಸ್ಥಾನದ ಸಂಪ್ರದಾಯ ಮತ್ತು ನಿಯಮಗಳನ್ನು ಗೌರವಿಸಬೇಕು ಈ ವಿಚಾರದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರದ ಸ್ಪಷ್ಟನೆ ಏನು?
ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಸರ್ಕಾರದ ಅಧಿಕೃತ ಮಾಹಿತಿ ಪರಿಶೀಲನಾ ವಿಭಾಗ, ಸಂಬಂಧಪಟ್ಟ ವ್ಯಕ್ತಿ ದೇವಸ್ಥಾನದ ಆವರಣ ಪ್ರವೇಶಿಸಲು ಅಗತ್ಯವಾದ ಅರ್ಜಿ ಸಲ್ಲಿಸಿ, 2026ರ ಅಕ್ಟೋಬರ್ 16ರಂದು ಪೂರ್ವಾನುಮತಿ ಪಡೆದಿದ್ದರು ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ಈ ಘಟನೆಯಲ್ಲಿ ಆಗಮ ನಿಯಮಗಳ ಉಲ್ಲಂಘನೆಯಾಗಿಲ್ಲ ಎಂದು ತಮಿಳುನಾಡು ವಿಜಯ್ ಸರ್ಕಾರ ಸ್ಪಷ್ಟಪಡಿಸಿದೆ.
ಸಚಿವರ ಹೇಳಿಕೆ.
ಅಕ್ಟೋಬರ್ 18ರಂದು ತಿರುಚಿಯ ಶ್ರೀರಂಗಂ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂ ಧಾರ್ಮಿಕ ಹಾಗೂ ದತ್ತಿ ಇಲಾಖೆಯ ಸಚಿವ ಎಸ್. ರಮೇಶ್ ಸಂಬಂಧಪಟ್ಟ ವ್ಯಕ್ತಿ ಅನ್ಯಧರ್ಮದವರ ಪ್ರವೇಶಕ್ಕೆ ಅಗತ್ಯವಿರುವ ನಮೂನೆಗಳಿಗೆ ಸಹಿ ಹಾಕಿದ್ದಾರೆ; ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯಕ್ಕೆ ಮಹತ್ವವಿದೆ ಈ ವಿಚಾರವನ್ನು ರಾಜಕೀಯವಾಗಿ ದೊಡ್ಡದಾಗಿ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ನ್ಯಾಯಾಲಯದ ಆದೇಶದ ಉಲ್ಲಂಘನೆ!
2024 ಜನವರಿಯಲ್ಲಿ ಮದ್ರಾಸ್ ಹೈಕೋರ್ಟ್ ನೀಡಿದ ಆದೇಶದ ಪ್ರಕಾರ, ಅನ್ಯಧರ್ಮೀಯರು ಹಿಂದೂ ಧರ್ಮ ಮತ್ತು ದೇವಸ್ಥಾನದ ಸಂಪ್ರದಾಯಗಳ ಮೇಲೆ ತಮಗೆ ನಂಬಿಕೆ ಇದೆ ಎಂದು ಲಿಖಿತವಾಗಿ ಪತ್ರ ನೀಡದೆ ದೇಗುಲದ ಧ್ವಜಸ್ತಂಭವನ್ನು ದಾಟಿ ಒಳಹೋಗುವಂತಿಲ್ಲ. ಈ ನಿಯಮವನ್ನು ಇಲ್ಲಿ ಗಾಳಿಗೆ ತೂರಲಾಗಿದೆ ಎಂದು ಭಕ್ತರು ಹಾಗೂ ಬಿಜೆಪಿ ಆರೋಪಿಸಿವೆ
ಹಿಂದೂ ಧಾರ್ಮಿಕ ಹಾಗೂ ದತ್ತಿ ಇಲಾಖೆಯ ಸಚಿವ ಎಸ್. ರಮೇಶ್ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ PWD ಹಾಗು ಕ್ರೀಡಾ ಸಚಿವ ಆಧವ್ ಅರ್ಜುನ ಮಾವ ಸ್ಯಾಂಟಿಯಾಗೊ ಮಾರ್ಟಿನ್ (Santiago Martin)ಲಾಟರಿ ಉದ್ಯಮಿ ‘ಲಾಟರಿ ಕಿಂಗ್’ ಎಂದೇ ಖ್ಯಾತಿ ಪಡೆದಿದ್ದು ಭಾರತದ ಲಾಟರಿ ಉದ್ಯಮದಲ್ಲಿ ಪ್ರಮುಖ ಸ್ಥಾನ ಹೊಂದಿದ್ದಾರೆ



