ಚಿಂತಾಮಣಿಯ ದಸರಾ ಉತ್ಸವದ ಅಂಗವಾಗಿ ಭವ್ಯವಾದ ಮಂಟಪಗಳು, ಆಕರ್ಷಕ ವಿದ್ಯುತ್ ದೀಪಾಲಂಕಾರ ಹಾಗೂ ದೇವಿ ದುರ್ಗೆಯ ಸುಂದರ ಮೂರ್ತಿ ಭಕ್ತರ ಗಮನ ಸೆಳೆಯುತ್ತಿವೆ.
ಚಿಂತಾಮಣಿ: ನಗರದ ಪಾಲಿಟೆಕ್ನಿಕ್ ಆಟದ ಮೈದಾನದಲ್ಲಿ ಆಯೋಜಿಸಿರುವ ದಸರಾ ಉತ್ಸವ 2026 ಭವ್ಯ ಅಲಂಕಾರ ಹಾಗೂ ಧಾರ್ಮಿಕ ವಾತಾವರಣದಿಂದ ಜನರ ಗಮನ ಸೆಳೆಯುತ್ತಿದೆ.
ಉತ್ಸವದ ಅಂಗವಾಗಿ ಮೈದಾನದಲ್ಲಿ ಭವ್ಯವಾದ ದೇವಾಲಯದ ಮಾದರಿಯ ಮಂಟಪವನ್ನು ನಿರ್ಮಿಸಲಾಗಿದ್ದು, ಆಕರ್ಷಕ ವಿದ್ಯುತ್ ದೀಪಾಲಂಕಾರ, ಬಣ್ಣಬಣ್ಣದ ಹೂವಿನ ಸಿಂಗಾರ ಹಾಗೂ ವಿವಿಧ ಧಾರ್ಮಿಕ ಕಲಾಕೃತಿಗಳು ಮಂಟಪದ ಸೌಂದರ್ಯವನ್ನು ಹೆಚ್ಚಿಸಿವೆ.
ಮಂಟಪದ ಒಳಾಂಗಣದಲ್ಲಿನ ಚಿನ್ನದ ಬಣ್ಣದ ಅಲಂಕಾರ ಹಾಗೂ ಸಾಂಪ್ರದಾಯಿಕ ವಿನ್ಯಾಸಗಳು ಉತ್ಸವದ ವೈಭವವನ್ನು ತೋರಿಸುತ್ತಿವೆ.
ಸಿಂಹವಾಹಿನಿ ದುರ್ಗಾದೇವಿಯ ಸುಂದರ ಮೂರ್ತಿ ಭಕ್ತರ ಗಮನ ಸೆಳೆಯುತ್ತಿದ್ದು,ಇದರೊಂದಿಗೆ ನರಸಿಂಹಸ್ವಾಮಿ ಮೂರ್ತಿ ಹಾಗು ಮೂರ್ತಿಗಳು ಉತ್ಸವದ ಆಕರ್ಷಣೆಯ ಕೇಂದ್ರವಾಗಿದೆ.

ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ, ರಾತ್ರಿ ವೇಳೆಯಲ್ಲಿ ಜಗ ಮಗಿಸುವ ದೀಪಗಳ ಬೆಳಕಿನಲ್ಲಿ ಭವ್ಯವಾದ ಮಂಟಪ ಕಂಗೊಳಿಸುತ್ತಿದ್ದು ಮಂಟಪದ ಮುಂಬಾಗದಲ್ಲಿ ಸ್ಥಾಪಿಸಿರುವ ಶ್ರೀರಾಮಚಂದ್ರ ಹಾಗು ಶ್ರೀ ಹನುಂತನ ಕಟೌಟ್ ಗಳು ದಸರಾ ಸಂಭ್ರಮದ ಉತ್ಸವಕ್ಕೆ ವಿಶೇಷ ಮೆರುಗು ನೀಡುತ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವದ ಶ್ರದ್ಧಾ ಕೇಂದ್ರವಾಗಿ ವಿಶೇಷ ಆಕರ್ಷಣೆಯಾಗಿದೆ.
ಚಿಂತಾಮಣಿ ನಗರದಲ್ಲಿ ಧಾರ್ಮಿಕ ಭಕ್ತಿ ಮತ್ತು ಸಾಂಸ್ಕೃತಿಕ ಸಂಭ್ರಮವನ್ನು ಪ್ರತಿಬಿಂಬಿಸುವ ಈ ದಸರಾ ಉತ್ಸವ ನಗರದ ಹಬ್ಬದ ವಾತಾವರಣಕ್ಕೆ ವಿಶೇಷ ಕಳೆ ತಂದಿದೆ.




