ಶ್ರೀನಿವಾಸಪುರ: ಬೀದಿಯಲ್ಲಿ ಕಸ ಹಾಕುವ ವಿಚಾರದಲ್ಲಿ ಗಲಾಟೆ ನಡೆದು ವ್ಯಕ್ತಿಯೊಬ್ಬರು ಅಮಾನುಷವಾಗಿ ಕೊಲೆಯಾಗಿದ್ದು ಮತ್ತೋರ್ವ ವ್ಯಕ್ತಿ ಗಾಯಗೊಂಡ ಘಟನೆ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ನಡೆದಿದೆ ಮೃತಪಟ್ಟ ವ್ಯಕ್ತಿಯನ್ನು ಗೌನಿಪಲ್ಲಿ ನಿವಾಸಿ ಶಾಜು ಖಾನ್ (65) ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ವಾಸಿಂ ಎನ್ನುವವರು ಮಟನ್ ಅಂಗಡಿ ಇಟ್ಟುಕೊಂಡಿದ್ದಾರೆ ಅಲ್ಲಿ ಕಸ ಹಾಕುವ ಬಗ್ಗೆ ಮೃತ ಶಾಜುಖಾನ್ ಹಾಗು ವಾಸಿಂ ನಡುವೆ ಮೊದಲಿನಿಂದಲೂ ವೈಮನಸ್ಯ ಇದ್ದು ಇಂದು ಕಸ ಹಾಕುವ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ವಾಸಿಂ ಪರವಾಗಿ ಶಬ್ಬೀರ್ ಎನ್ನುವ ಬೆಂಬಲಕ್ಕೆ ನಿಂತಿದ್ದು ಇದು ಮಾತಿಗೆ ಮಾತು ಬೆಳೆದು ಗಲಾಟೆ ದೊಡ್ಡದಾಗಿದೆ. ವಾಸಿಂ ಮಟನ್ ಕತ್ತರಿಸುವ ಮಚ್ಚಿನಿಂದ ಶಾಜುಖಾನ್ ಮೇಲೆ ಬಿಸಿದ್ದಾನೆ ಮಚ್ಚು ಬೀಸಿದ ರಭಸಕ್ಕೆ ಶಾಜುಖಾನ್ ಕತ್ತುಗೆ ತಗುಲಿದೆ ದೊಡ್ಡದಾಗಿ ಗಾಯವಾಗಿದೆ ತೀವ್ರವಾಗಿ ರಕ್ತ ಸಾವ್ರಾವಾಗಿ ಶಾಜುಖಾನ್ ಪ್ರಾಣ ಬಿಟ್ಟಿದ್ದು ಮೃತನೊಂದಿಗೆ ಇದ್ದ ವ್ಯಕ್ತಿಗೂ ಗಾಯಗಳಾಗಿವೆ.ಗಲಾಟೆ ಸಂದರ್ಭದಲ್ಲಿ ಆರೋಪಿ ವಾಸಿಂ ಹಾಗೂ ಬೆಂಬಲಕ್ಕೆ ನಿಂತಿದ್ದ ಶಬ್ಬಿರ್ ಸ್ಥಳದಿಂದ ಪರಾರಿಯಾಗಿದ್ದಾರೆ.ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನು ಓದಿ



