ಶ್ರೀನಿವಾಸಪುರ:ಪಟ್ಟಣದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿ ದಂಧೆಯ ಕಿಂಗ್ ಪಿನ್ ಮಹಿಳೆ ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಪ್ರಕರಣದ ಕಿಂಗ್ ಪಿನ್ ಆಗಿರುವ ಮಹಿಳೆ ಶ್ರೀನಿವಾಸಪುರ ಪಟ್ಟಣದ ಜನವಸತಿ ಪ್ರದೇಶದ ಹಳೆಯ ಮನೆಯೊಂದರಲ್ಲಿ ದೀರ್ಘಕಾಲದಿಂದ ರಾಜಾರೋಷವಾಗಿ ಅನೈತಿಕ ಚಟುವಟಿಕೆಗಳು ನಡೆಸುತ್ತಿರುವ ಕುರಿತು ಸಾರ್ವಜನಿಕರು ಪೋಲಿಸರಿಗೆ ಸಮಾಚಾರ ನೀಡಿದ್ದರು ಇದರ ಅನ್ವಯ ಪೊಲೀಸರು ಶನಿವಾರ ಸಂಜೆ ಶ್ರೀನಿವಾಸಪುರ ವೃತ್ತ ನಿರೀಕ್ಷಕ (CPI) ಶಂಕರಾಚಾರ್ಯ ಹಾಗೂ ಉಪನಿರೀಕ್ಷಕ (PSI) ಜಯರಾಂ ಅವರ ನೇತೃತ್ವದ ಪೊಲೀಸ್ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.ಪೋಲಿಸ್ ದಾಳಿ ಸಂದರ್ಭದಲ್ಲೂ ದಂದೆಯಲ್ಲಿದ್ದ ಕಿಂಗ್ ಪಿನ್ ಮಹಿಳೆ, ಆಕೆಗೆ ಸಹಕಾರ ನೀಡುತಿದ್ದ ಇಬ್ಬರು ಮಹಿಳೆಯರು ಹಾಗೂ ಒಬ್ಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದ್ದಾರೆ.
ಪೋಲಿಸರ ಕಾರ್ಯಚರಣೆ ನಾಗರಿಕರಿಗೆ ನೆಮ್ಮದಿ
ರಾಮಕೃಷ್ಣ ಬಡಾವಣೆ ಹಾಗು ಪ್ರವಾಸಿ ಮಂದಿರದ ನಡುವಿನ ಹಿಂಬಾಗದ ಗುಂಪು ಮನೆಗಳ ಪ್ರದೇಶದಲ್ಲಿ ಅವ್ಯಾಹುತವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಸ್ಥಳೀಯ ಜನರು ಮುಜಗರಕ್ಕೆ ಒಳಗಾಗಿದ್ದು ಹಲವಾರು ಬಾರಿ ಪೋಲಿಸರ ಗಮನಕ್ಕೆ ತಂದಿದ್ದರಾದರೂ ನಿರ್ಲಕ್ಷ್ಯ ವಹಿಸಿದ್ದು ಈಗ ಪೊಲೀಸರು ಕಾರ್ಯಚರಣೆ ನಡೆಸಿರುವುದು ನೆಮ್ಮದಿ ತಂದಿದೆ ಮುಂದೆ ಇದು ಸಂಪೂರ್ಣವಾಗಿ ನಿಲ್ಲುವಂತೆ ಕ್ರಮ ಜರುಗಿಸಲು ಹಾಗು ಇತರೆಡೆ ಇಂತಹ ದಂಧೆಗಳು ತಲೆ ಎತ್ತದಂತೆ ನಿರಂತರ ನಿಗಾ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



