ನ್ಯೂಜ್ ಡೆಸ್ಕ್:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಗಾದಿಗೆ ಕಳೆದ ಎರಡು ವರ್ಷಗಳಿಂದ ಹಲವಾರು ಹೆಸರುಗಳು ತಳುಕು ಹಾಕಿಕೊಂಡು ಇನ್ನೂ ಕೆಲ ಹೆಸರುಗಳು ಮುನ್ನೆಲೆಗೆ ಬಂದಿತ್ತು ಆದರೆ ಇಂದು ಭಾನುವಾರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಚ್ಚರಿ ಹೆಸರು ಪ್ರಕಟಿಸಲಾಗಿದೆ.
ಬಿಹಾರದಲ್ಲಿ 5 ಬಾರಿ ಶಾಸಕರಾಗಿ ನಿತಿನ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರದಲ್ಲಿ ರಸ್ತೆ ಮತ್ತು ಕಟ್ಟಡಗಳ ಮಂತ್ರಿ ಆಗಿರುವ 45 ವರ್ಷದ ನಿತಿನ್ ನಬಿನ್ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಧ್ಯಕ್ಷ ಪದವಿಗೆ ಘೋಷಿಸಲಾಗಿದೆ. ಬಿಜೆಪಿ ಸಂಸದೀಯ ಮಂಡಳಿ ಭಾನುವಾರ ಈ ನಿರ್ಧಾರ ತೆಗೆದುಕೊಂಡಿದ್ದು ಪ್ರಸ್ತುತ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಈ ನೇಮಕಾತಿ ಮಾಡಲಾಗಿದೆ. 2020 ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ನಡ್ಡಾ ಅವರನ್ನು 2024 ರ ಲೋಕಸಭಾ ಚುನಾವಣೆ ಸೇರಿದಂತೆ ಹಲವಾರು ಪ್ರಮುಖ ರಾಜಕೀಯ ಘಟನೆಗಳ ಹಿನ್ನೆಲೆಯಲ್ಲಿ ಹಲವಾರು ಬಾರಿ ವಿಸ್ತರಿಸಲಾಗಿದೆ. ಪಕ್ಷದಲ್ಲಿ ನಾಯಕತ್ವ ಬದಲಾವಣೆಗಳ ಪ್ರಕ್ರಿಯೆ ನಡೆಯುತ್ತಿರುವ ಸಮಯದಲ್ಲಿ ಈ ಇತ್ತೀಚಿನ ಮರುಸಂಘಟನೆ ಮಹತ್ವ ಪಡೆದುಕೊಂಡಿದೆ.
ನಿತಿನ್ ನಬಿನ್ ಯಾರು?
ನಿತಿನ್ ನಬಿನ್ ಎಬಿವಿಪಿ ಮೂಲಕ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದು ಬಿಹಾರ ರಾಜ್ಯ ರಾಜ್ಯ ರಾಜಕೀಯದಲ್ಲಿ ಕ್ರೀಯಾಶಿಲಾ ಮುಖಂಡ.ರಾಂಚಿಯಲ್ಲಿ ಜನಿಸಿದ ಅವರು, ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರ. ನಿತಿನ್ ನಬಿನ್ ತಮ್ಮ ತಂದೆಯ ರಾಜಕೀಯ ವಾರಸತ್ವ ಪರಂಪರೆಯನ್ನು ಪಡೆಯುವ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು.
ನಿತಿನ್ ನಬಿನ್ ಐದು ಬಾರಿ ಶಾಸಕರಾಗಿ ಗೆಲ್ಲುವ ಮೂಲಕ ಬಿಜೆಪಿ ಪಕ್ಷದಲ್ಲಿ ಪ್ರಭಾವಿ ಸಚಿವರಾಗಿದ್ದಾರೆ ವಿವಾದಗಳಿಂದ ಅಂತರ ಕಾಪಾಡಿಕೊಂಡು ಬಂದಿರುವ ಅವರು ತಂದೆಯ ಮರಣದ ನಂತರ, ಅವರು ಮೊದಲು 2006 ರಲ್ಲಿ ಪಾಟ್ನಾ ಪಶ್ಚಿಮ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದರು. ನಂತರ, ಅವರು ಬಂಕಿಪುರ ಕ್ಷೇತ್ರದಿಂದ ಸತತ ನಾಲ್ಕು ಚುನಾವಣೆಗಳಲ್ಲಿ ಗೆದ್ದರು – 2010, 2015, 2020 ಮತ್ತು 2025. ವಿಶೇಷವಾಗಿ 2020 ರ ವಿಧಾನಸಭಾ ಚುನಾವಣೆಯಲ್ಲಿ, ಅವರು ನಟ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ಅವರ ಮಗ ಲವ್ ಸಿನ್ಹಾ ಬಾರಿ ಅಂತರದಲ್ಲಿ ಚುನಾಯಿತರಾದ ಅವರು 2025 ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ವಿರುದ್ಧ 51,000 ಸಾವಿರ ಮತಗಳ ಭಾರಿ ಬಹುಮತದಿಂದ ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರು.
ಅವರು ಪ್ರಸ್ತುತ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರದಲ್ಲಿ ರಸ್ತೆ ನಿರ್ಮಾಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಿತಿನ್ ನಬಿನ್ ರಾಜ್ಯ ಮಟ್ಟದಲ್ಲಿ ಪ್ರಬಲ ನಾಯಕ ಮತ್ತು ಸತತ ಚುನಾವಣೆಗಳಲ್ಲಿ ಗೆದ್ದ ವ್ಯಕ್ತಿ ಎಂದು ಪ್ರಸಿದ್ಧರಾಗಿದ್ದಾರೆ.ಛತ್ತಿಸ್ ಘಡ್ ಚುನಾವಣೆಯಲ್ಲಿ ಗೆಲುವಿನ ರೂವಾರಿ ಎಂದು ಖ್ಯಾತರಾಗಿದ್ದ ಅವರನ್ನು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ, ಇದು ಅವರ ರಾಜಕೀಯ ಜೀವನದಲ್ಲಿ ಪ್ರಮುಖ ತಿರುವು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ
ಪ್ರಧಾನಿ ಮೋದಿ ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಧ್ಯಕ್ಷ ನಿತಿನ್ ನಬಿನ್ ಅವರನ್ನು ಅಭಿನಂದಿಸಿ ಪಕ್ಷದಲ್ಲಿ ವಿಶಿಷ್ಟ ಗುರುತನ್ನು ಸ್ಥಾಪಿಸಿರುವ ಸಮರ್ಪಿತ ಕಾರ್ಯಕರ್ತ ಎಂದು ಬಣ್ಣಿಸಿದ್ದಾರೆ.



