ಚಿಂತಾಮಣಿ: ತಾಲ್ಲೂಕಿನ ಕೋಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ವೀರಪಲ್ಲಿ ಗ್ರಾಮದ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಅಂಜನಿಸುತ ಫೌಂಡೇಶನ್ ಅಧ್ಯಕ್ಷ ಪ್ರದೀಪ್ ಆಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮಗಳ ಭಾಗವಾಗಿ ಇಲ್ಲಿನ ಶ್ರೀ ಅಭಯ ಆಂಜನೇಯ ಸ್ವಾಮಿ ಮೂರ್ತಿಗೆ ತುಳುನಾಡು ದಕ್ಷಿಣ ಕನ್ನಡದ ಕರಾವಳಿಯ ಪಂಜುರ್ಲಿ ದೈವದ ಅಲಂಕಾರವನ್ನು ಮಾಡಲಾಗಿತ್ತು.
ಪ್ರತಿವರ್ಷವೂ ಹನುಮ ಜಯಂತಿ ಮಾರನೇ ದಿನ ಅಭಯಾಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ನಡೆಯುವುದು ವಿಶೇಷ.
ದೇವರ ಮೂರ್ತಿಗೆ ಅಭಿಷೇಕ ಮಾಡಿದ ನಂತರ ವಿಶೇಷವಾಗಿ ಪಂಜುರ್ಲಿ ಅಲಂಕಾರ ಮಾಡಲಾಗಿದ್ದು, ದೇವಾಲಯದಲ್ಲಿ ಪೂಜೆ ಹೋಮ ಹವನ ನೆರವೇರಿಸಲಾಯಿತು.ಬೆಳಿಗ್ಗೆಯಿಂದ ಸಂಜೆವರೆಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಹನುಮ ಭಕ್ತರು ಆಂಜನೇಯ ದೇವಸ್ಥಾನಗಳಿಗೆ ಶಕ್ತಿ ಸ್ವರೂಪನಾದ ಹನುಮ ದೇವರ ಮೂರ್ತಿಯ ದರ್ಶನ ಪಡೆದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿದರು.
ಕಾಂತರ ಸಿನಿಮಾ ಪ್ರಭಾವ ಪಂಜುರ್ಲಿ
ಕಾಂತಾರ ಸಿನಿಮಾ ಬಿಡುಗಡೆಯಾದ ನಂತರ ಸಿನಿಮಾದ ಪ್ರಭಾವದಿಂದಾಗಿ ಪಂಜುರ್ಲಿ ದೈವದ ಬಗ್ಗೆ ದಕ್ಷಿಣ ಭಾಗದ ಕರ್ನಾಟಕದ ಜನರಲ್ಲೂ ಪಂಜುರ್ಲಿ ದೈವದ ಭಕ್ತಿ ಹೆಚ್ಚಾಗಿದ್ದು, ದೈವಗಳ ಆರಾಧನೆ, ನಾಗರಾಧಾನೆ ಮತ್ತು ಭೂತಕೋಲ ಸೇರಿದಂತೆ ಕರಾವಳಿಯ ಸಂಸ್ಕೃತಿಯನ್ನು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗುತ್ತಿದೆ. ಈ ಬಗ್ಗೆ ಜನ ಕರಾವಳಿ ಸಂಸ್ಕಾರ ಸಂಸ್ಕೃತಿಯನ್ನು ಅಭಿಮಾನಿಸುವರ ಸಂಖ್ಯೆ ಹೆಚ್ಚುತ್ತಿದೆ.ಕಾಂತಾರ ಸಿನಿಮಾ ಪ್ರದರ್ಶನಗಳ ವೇಳೆ ಜನ ಪಂಜುರ್ಲಿ ವೇಷಭೂಷಣ ತೊಟ್ಟು ಕುಣಿಯುತ್ತ ಅಭಿಮಾನ ಮೆರೆದಿದ್ದರು.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



