ಸಿನಿ ಡೆಸ್ಕ್:ಮೆಗಾಸ್ಟಾರ್ ಚಿರಂಜೀವಿ ಮತ್ತು ಅನಿಲ್ ರಾವಿಪುಡಿ ಕಾಂಬಿನೇಷನಲ್ ಬರುತ್ತಿರುವ ಹೊಸ ಸಿನಿಮಾದ ರೋಮಾಂಚಕಾರಿ ಅಪ್ಡೇಟ್ ಹೊರ ಬಿದ್ದಿದೆ. ಚಿರಂಜೀವಿ ಹುಟ್ಟುಹಬ್ಬಕ್ಕೆ ಸಿನಿಮಾದ ಟೈಟಲ್ ಹಾಗು ಗ್ಲಿಂಪ್ಸ್ ಬಿಡುಗಡೆಯಾಗಿದ್ದು ಸಿನಿಮಾದ ಟೈಟಲ್ “ಮನ ಶಂಕರವರ ಪ್ರಸಾದ್” ಎಂದು ಸಬ್ ಟೈಟಲ್ ಪಂಡುಗಕಿ ವಸ್ತುನ್ನಾರು ಹೆಸರಿಸಲಾಗಿದೆ. ಇದರೊಟ್ಟಿಗೆ ಫಸ್ಟ್ ಲುಕ್ ಪ್ರೋಮೊ ಸಹ ಬಿಡುಗಡೆ ಮಾಡಲಾಗಿದೆ. ಇದರಲ್ಲಿ, ಗ್ಲಿಂಪ್ಸ್ ನಲ್ಲಿ ಜೀಪಿನಿಂದ ಇಳಿಯುವ ಚಿರಂಜೀವಿ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಯಿಯಲ್ಲಿ ಸಿಗರೇಟ್ ಹಿಡಿದು ಕನ್ನಡಕ ಧರಿಸಿ ಹೆಜ್ಜೆಹಾಕುತ್ತಿರುವ ಅವರ ಲುಕ್ ಮಾಸ್ & ಕ್ಲಾಸ್ ಮಿಕ್ಸೆಡ್ ಆಗಿದ್ದು ಚಿರಂಜೀವಿ ಭುಜದ ಮೇಲೆ ಬಂದೂಕನ್ನು ಹಿಡಿದು ಮೆಟ್ಟಿಲುಗಳಿಂದ ಇಳಿಯುವ ದೃಶ್ಯವು ಗ್ಲಿಂಪ್ಸ್ನ ಹೈಲೈಟ್ ಎನ್ನಬಹುದು.
ವಿಂಟೇಜ್ ಲುಕ್ ಅಲ್ಲಿ ಚಿರು… ಸಿಗರೇಟ್ ಎಸೆಯುವ ಶೈಲಿ, ಅವರ ನಡಿಗೆ ಮತ್ತು ಅವರ ಸ್ಟೈಲ್ ಎಲ್ಲವೂ ವಿಂಟೇಜ್ ಮೆಗಾಸ್ಟಾರ್ ಅನ್ನು ನೆನಪಿಸುತ್ತದೆ. ಹಿನ್ನೆಲೆ ಸಂಗೀತ ಚಿರಂಜೀವಿ ಅವರ ಹಳೆಯ ಕ್ಲಾಸಿಕ್ ಸಿನಿಮಾಗಳ ರೀತಿಯಂತೆ ಸೇಳೆಯುತ್ತದೆ ವಿಡಿಯೋ ಗ್ಲಿಂಪ್ಸ್ ನೋಡುತ್ತಿದರೆ ಚಿರಂಜೀವಿ ಕಮಾಂಡೋ ಮುಖ್ಯಸ್ಥನ ಪಾತ್ರವನ್ನು ನಿರ್ವಹಿಸುತ್ತಿದ್ದಾರ ಎಂಬ ಭಾವನೆ ಮೂಡುತ್ತದೆ. “ಮನ ಶಂಕರವರ ಪ್ರಸಾದ್” ಪಂಡುಗಕಿ ವಸ್ತುನ್ನಾರು ಎಂದು ನಟ ವಿಕ್ಟರಿ ವೆಂಕಟೇಶ್ ಅವರ ಹೇಳಿರುವ voice over ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲ ಸೃಷ್ಟಿಸುತ್ತಿದೆ.
ಮೆಗಾಸ್ಟಾರ್-ವಿಕ್ಟರಿ ವೆಂಕಟೇಶ್ ಫಸ್ಟ್ ಕಾಂಬೊ… ಮನ ಶಂಕರವರ ಪ್ರಸಾದ್ ಚಿತ್ರದಲ್ಲಿ ವಿಕ್ಟರ್ ವೆಂಕಟೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿರಂಜೀವಿ ಮತ್ತು ವೆಂಕಟೇಶ್ ಒಟ್ಟಿಗೆ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದೆ ಎಂಬುದು ಗಮನಾರ್ಹ. ಈ ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಕ್ಯಾಥರೀನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿರಂಜೀವಿ ಅವರ ಪುತ್ರಿ ಸುಶ್ಮಿತಾ ಕೊನಿದೇಲಾ ಅವರೊಂದಿಗೆ ಸಾಹು ಗರಪತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಸಂಕ್ರಾಂತಿಗೆ ಬಿಡುಗಡೆ… ಚಿರಂಜೀವಿ ನಟನೆಯ 157 ನೇ ಚಿತ್ರ ಇದಾಗಿದ್ದು 2026 ರ ಸಂಕ್ರಾಂತಿಗೆ ಸಿನಿಮಾ ಬಿಡುಗಡೆಯಾಗಲಿದೆ. ನಿರ್ದೇಶಕ ಅನಿಲ್ ರಾವಿಪುಡಿ ಈ ಚಿತ್ರವನ್ನು ಕೌಟುಂಬಿಕ ಆಕ್ಷನ್ ಎಂಟರ್ಟೈನರ್ ಅಡಿಯಲ್ಲಿ ನಿರ್ದೇಶಿಸುತ್ತಿದ್ದಾರೆ. “ಮನ ಶಂಕರವರ ಪ್ರಸಾದ್” ಅವರ ಮುಂದಿನ ಶೆಡ್ಯೂಲ್ಡ್ ಶೂಟಿಂಗ್ ಕೊಚ್ಚಿಯಲ್ಲಿ ನಡೆಯಲಿದ್ದು ವೆಂಕಟೇಶ್ ಈ ಚಿತ್ರದ ಚಿತ್ರೀಕರಣದ ಭಾಗದಲ್ಲಿ ಪಾಲ್ಗೋಳ್ಳಲಿದ್ದಾರೆ. 2025 ಬ್ಲಾಕ್ ಬಸ್ಟರ್ ಸಂಕ್ರಾಂತಿ ನಂತರದಲ್ಲಿ ಬರುತ್ತಿರುವ ಅನಿಲ್ ರಾವಿಪುಡಿ ನಿರ್ದೇಶನದ ಸಿನಿಮಾ ಇದಾಗಿದೆ.



