ನ್ಯೂಜ್ ಡೆಸ್ಕ್:ಜಗತ್ತನ್ನೇ ನಡುಗಿಸಿದ ಕೊರೊನಾ ವೈರಸ್ Covid-19,ಮತ್ತೆ ಬರುತ್ತಿದೆ ಈಗಾಗಲೆ ಕೆಲ ಭಾಗಗಳಲ್ಲಿ ಪ್ರಕರಣಗಳು ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 2019ರಿಂದ 2022ರ ಸಂದರ್ಭದಲ್ಲಿ ಕೊರೊನಾಗೆ ಜನ ಭೀತಿಗೆ ಒಳಗಾಗಿ ದೊಡ್ಡಸಂಖ್ಯೆಯಲ್ಲಿ ಜನ ಮೃತಪಟ್ಟಿದ್ದರು. ಸಿಂಗಾಪುರ ಮತ್ತು ಹಾಂಗ್ ಕಾಂಗ್ ನಲ್ಲಿ ಇತ್ತೀಚೆಗೆ ಕೋವಿಡ್ ವೈರಸ್ ಹರಡುತ್ತಿದ್ದು ಭಾರತದಲ್ಲಿ ಪತ್ತೆಯಾಗಿರುವ ವರದಿಗಳು ಹೊರಬರುತ್ತಿದೆ ಮುಂಬೈನಲ್ಲಿ ಕಳೆದ ವಾರ ಎರಡು ಕೋವಿಡ್ ಸಂಬಂಧಿತ ಸಾವಾಗಿರುವ ಬಗ್ಗೆ ಇಬ್ಬರೂ ವೃದ್ಧರು ಸಾವನಪ್ಪಿರುವ ಬಗ್ಗೆ ಹೇಳಲಾಗಿದೆ.
ಜ್ವರ, ಗಂಟಲು ನೋವು, ತೀವ್ರ ತಲೆನೋವು ಸೇರಿ ಹಲವು ಲಕ್ಷಣಗಳು ಇದ್ದರೆ ಸಾಂಕ್ರಾಮಿಕ ರೋಗದ ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎನ್ನುವುದು ತಜ್ಞರ ಸಲಹೆ.
ಕರ್ನಾಟಕದಲ್ಲಿ 35 ಪ್ರಕರಣಗಳು!
ಭಾರತದಲ್ಲಿ ಇದೀಗ ಅಂದಾಜು 260 ಸಕ್ರಿಯ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದು ಕಳೆದ ಕೆಲವು ತಿಂಗಳತ್ತ ಹೋಲಿಸಿದರೆ ಸಣ್ಣ ಏರಿಕೆಯಾದರೂ, ಗಮನಾರ್ಹ ಎನ್ನುವಂತಹದು ಇದರಲ್ಲಿ ಹೆಚ್ಚಿನ ಪ್ರಕರಣಗಳು ಕೇರಳ 95 , ತಮಿಳುನಾಡು 66 , ಮಹಾರಾಷ್ಟ್ರ 56 ಕರ್ನಾಟಕ 35, ದೆಹಲಿಯಲ್ಲಿ 23 ಸೇರಿ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕನಿಷ್ಠ ಪ್ರಮಾಣದಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾಗಿ 85% ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿವೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿ ಇದ್ದರೂ, ಎಚ್ಚರಿಕೆ ಅಗತ್ಯವಿದೆ.
ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿನಿಂದ ಒಬ್ಬ ವ್ಯಕ್ತಿಯೊಬ್ಬ ಮೃತಪಟ್ಟಿದ್ದು ಉಸಿರಾಟದ ಸಮಸ್ಯೆ ಹಾಗೂ ಇತರೆ ಖಾಯಿಲೆಗಳಿಂದ ಬಳಲುತ್ತಿದ್ದ ಈ ವ್ಯಕ್ತಿ, ಕೊಮಾರ್ಬಿಡ್ ಲಕ್ಷಣಗಳನ್ನು ಹೊಂದಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.ಈ ಬಗ್ಗೆ ಆರೋಗ್ಯ ಇಲಾಖೆ ದೃಢಪಡಿಸಿದೆ.
ಮಾಸ್ಕ್ ಧರಿಸಿ ಅಂತರ ಕಾಯ್ದು ಕೊಳ್ಳಿ
ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್ ಬಳಸುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಆರೋಗ್ಯ ಇಲಾಖೆ ಸೂಚಿಸಿದೆ.
ಕೋಲಾರದಲ್ಲಿ ದಾಖಲಾಗಿಲ್ಲ
ಕೋಲಾರ ಜಿಲ್ಲೆಯಲ್ಲಿ ಇದುವರಿಗೂ ಯಾವುದೆ ಪ್ರಕರಣಗಳು ದಾಖಲಾಗಿಲ್ಲ ಭಾನುವಾರದಿಂದ ಸಧ್ಯಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಮಾತ್ರ ಕೋವಿಡ್ ಪರಿಕ್ಷೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾ ಭಿತಿ ಮಾಸ್ಕ್ ಧರಿಸಿದ ಸಿಎಂ
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಖ್ಯಮತ್ರಿ ಸಿದ್ದರಾಮಯ್ಯ ಇಂದು ತಮ್ಮ ಮನೆಯಿಂದ ಹೊರ ಬರುವಾಗ ಮಾಸ್ಕ್ ಧರಿಸಿಕೊಂಡು ಬಂದು ಜನರಿಂದ ಮಾಸ್ಕ್ ಧರಿಸಿಯೇ ಅಹವಾಲು ಸ್ವೀಕರಿಸಿದರು.
Trending
- ಶ್ರೀನಿವಾಸಪುರ:ಪದವೀಧರ ಚುನಾವಣೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ತ್ರಿಮೂರ್ತಿಗಳು ಒಂದಾದರ?
- ತಿರುವಣ್ಣಾಮಲೈ ದೇಗುಲಕ್ಕೆ ಅನ್ಯಧರ್ಮಿಯ ಪ್ರವೇಶ,ವಿವಾದ!
- ಪುರಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ರಣರಂಗವಾದ ಪುಂಗನೂರು!
- ಬೆಂಗಳೂರು ಪಬ್ ನಲ್ಲಿ ಪೋಲಿಸರೊಂದಿಗೆ ಗಲಾಟೆ ಆಂಧ್ರ IAS ಅಧಿಕಾರಿ ವಿರುದ್ಧ ಪ್ರಕರಣ!
- ಚಿಂತಾಮಣಿ ಪಾಲಿಟೆಕ್ನಿಕ್ ಮೈದಾನದಲ್ಲಿ ದಸರಾ ಉತ್ಸವದ ವೈಭವ!
- ಶ್ರೀನಿವಾಸಪುರ:ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಸಿ.ಟಿ. ರವಿ ಚಾಲನೆ
- ಚಿಂತಾಮಣಿ:ಲಾಂಗ್ ನಿಂದ ಕೊಚ್ಚಿ ವಿವಾಹಿತ ಮಹಿಳೆ ಬರ್ಬರ ಹತ್ಯೆ !
- ಹಣ್ಣಿನ ಹೆಸರಿನಿಂದ ಆರಂಭವಾಗುವ ಅಪರೂಪದ ಗ್ರಾಮ ‘ಪಣಸಮಾಕಲಹಳ್ಳಿ’!
Thursday, October 22



