ಶ್ರೀನಿವಾಸಪುರ:ಹಣದ ವಿಚಾರವಾಗಿ ಕರ್ನಾಟಕದ ಇಬ್ಬರು ಆಂಧ್ರದ ರಾಮಸಮುದ್ರಂನಲ್ಲಿ ಜಗಳ ಆಡಿಕೊಂಡಿದ್ದು ನಂತರ ಊರಿಗೆ ವಾಪಸ್ಸು ಆಗಿದ್ದಾರೆ ಸಂಜೆ ಗ್ರಾಮದ ಬಸ್ ನಿಲ್ದಾಣದ ಬಳಿ ನ್ಯಾಯ ಪಂಚಾಯಿತಿ ಮಾಡುವ ಸಲುವಾಗಿ ಇಬ್ಬರು ಸೇರಿಕೊಂಡು ಜಗಳ ಆಡಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಚಾಕುವಿನಿಂದ ಇರಿಯಲಾಗಿದ್ದು ಒರ್ವ ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಇಂದು ಸೋಮವಾರ ರಾತ್ರಿ 8 ಗಂಟೆ ಸಮಯದಲ್ಲಿ ನಡದಿರುತ್ತದೆ.
ಮೃತನನ್ನು ಗುಂತವಾರಿಪಲ್ಲಿ ಮಂಜುನಾಥ್(32) ಎಂದು ಗುರತಿಸಲಾಗಿದೆ ಮೃತ ಮಂಜುನಾಥ್ ಹಾಗು ಕೂಳಗೂರ್ಕಿಯ ಶಿಮೂರ್ತಿ ಇಬ್ಬರು ಹಣಕಾಸು ವಿಚಾರವಾಗಿ ಆಂಧ್ರದ ರಾಮಸಮುದ್ರಂನಲ್ಲಿ ಇಂದು ಕಿತ್ತಾಡಿಕೊಂಡಿದ್ದಾರೆ ಇಬ್ಬರು ಊರಿಗೆ ವಾಪಸ್ಸು ಬಂದಿದ್ದಾರೆ ಮತೆ ತಡ ಸಂಜೆ ಇಬ್ಬರು ಸೋಮಯಾಜಲಹಳ್ಳಿ ಬಸ್ ನಿಲ್ದಾಣದ ಬಳಿ ನ್ಯಾಯ ಪಂಚಾಯಿತಿ ಹೆಸರಿನಲ್ಲಿ ಸೇರಿದ್ದಾರೆ ಅಲ್ಲಿ ಮತ್ತೆ ಜಗಳ ಆಡಿಕೊಂಡಿದ್ದು ಪರಸ್ಪರ ತಳ್ಳಾಡಿಕೊಂಡಿದ್ದಾರೆ ಈ ಸಂದರ್ಬದಲ್ಲಿ ಶಿಮೂರ್ತಿ ಕೈಯಲ್ಲಿದ್ದ ಚಾಕುವಿನಿಂದ ಇರಿದಿದ್ದಾಗಿ ಹೇಳಲಾಗಿದ್ದು ಪೋಲಿಸರ ತನಿಖೆಯಲ್ಲಿ ಸತ್ಯಾಂಶ ಹೋರಬರಬೇಕಾಗಿದೆ.
ಶಿವಮೂರ್ತಿ ಮನೆಗೆ ಬೆಂಕಿ ಹಚ್ಚಲು ಮುಂದಾದ ಗುಂಪು
ಚಾಕು ಇರಿತದಿಂದ ಮಂಜುನಾಥ್ ಸಾವನಪ್ಪಿರುವ ಸುದ್ದಿ ಹರಡುತ್ತಿದ್ದಂತೆ ಮೃತ ಮಂಜುನಾಥ್ ಕಡೆಯವರು ಗುಂಪು ಗೂಡಿಕೊಂಡು ಕೂಳಗುರ್ಕಿಯಲ್ಲಿನ ಶಿಮೂರ್ತಿ ಮನೆ ಮೇಲೆ ದಾಳಿಮಾಡಿ ಮನೆಗೆ ಬೆಂಕಿ ಹಚ್ಚಲು ಮುಂದಾಗಿದ್ದು ಸಕಾಲದಲ್ಲಿ ಪೋಲಿಸರು ಆಗಮಿಸಿ ಗುಂಪನ್ನು ಚದುರಿದ್ದಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26