ನ್ಯೂಜ್ ಡೆಸ್ಕ್:ಹರಿಯಾಣ ವಿಧಾನಸಭಾ ಚುನಾವಣೆ ನಡೆದು ಮಂಗಳವಾರ ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯಭೇರಿ ಬಾರಿಸಿದೆ.
ಚುನಾವಣೋತ್ತರ ಸಮೀಕ್ಷೇಯನ್ನು ನಂಬಿಕೊಂಡಿದ್ದ ಕಾಂಗ್ರೆಸ್ ಏಕಾಏಕಿ ಬೆಚ್ಚಿ ಬಿದ್ದಿದೆ ಇದಕ್ಕೆ ಇಲ್ಲಿ ಅಡಳಿತಾರೂಡ ಬಿಜೆಪಿಯಲ್ಲಿ 200 Days ಮುಖ್ಯಮಂತ್ರಿ ಕಾರಣ ಎನ್ನುವ ಮಾತು ಎಲ್ಲಡೆ ಕೇಳಿ ಬರುತ್ತಿದೆ ಚುನಾವಣೆ ಹೊತ್ತಿನಲ್ಲಿ ಮುಖ್ಯಮಂತ್ರಿ ಪದವಿ ವಹಿಸಿಕೊಂಡ ನಯಾಬ್ ಸಿಂಗ್ ಸೈನಿ ಬಿಜೆಪಿಯನ್ನು ಅಭೂತಪೂರ್ವ ವಿಜಯದತ್ತ ಮುನ್ನಡೆಸಿದ್ದಾರೆ ಕೇವಲ 200 ದಿನಗಳ ಅಂತರದಲ್ಲಿ ಹ್ಯಾಟ್ರಿಕ್ ವಿಜಯಕ್ಕೆ ಕಾರಣರಾಗಿ ಬಿಜೆಪಿ ಹೈಕಮಾಂಡ್ ಖುಷಿ ಪಡುವಂತೆ ಮಾಡಿದ ನಯಾಬ್ ಸಿಂಗ್ ಸೈನಿ ಆರಂಭದಲ್ಲಿ ಡಮ್ಮಿ ಸಿಎಂ ಎಂದು ಅವರನ್ನು ಅಪಹಾಸ್ಯಕ್ಕೆ ಈಡಾಗಿ ಟೀಕೆಗೆ ಒಳಪಟ್ಟಿದ್ದರು. ಬಿಜೆಪಿಯ ಸಂಪೂರ್ಣ ಚುನಾವಣಾ ಪ್ರಚಾರ ಅವರ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಫಲಿತಾಂಶಗಳ ಆರಂಭಿಕ ಜವಾಬ್ದಾರಿಯನ್ನು ವಹಿಸಿಕೊಂಡ ಸೈನಿ, ಬಿಜೆಪಿ ಸರ್ಕಾರದ ವೈಫಲ್ಯಗಳ ನಡುವೆಯೂ ರಾಜಕೀಯ ಲೆಕ್ಕಾಚಾರಗಳನ್ನು ಹುಸಿಗೊಳಿಸಿ ಬಿಜೆಪಿಗೆ ಹ್ಯಾಟ್ರಿಕ್ ಗೆಲುವು ತಂದುಕೊಟ್ಟಿದ್ದಾರೆ.90ಸ್ಥಾನಗಳ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 48 ವಿಧಾನಸಭಾ ಸ್ಥಾನಗಳನ್ನು ಗೆದ್ದು ಐತಿಹಾಸಿಕ ಹ್ಯಾಟ್ರಿಕ್ ಗೆಲವು ಸಾಧಿಸಿದ್ದರೆ ಕಾಂಗ್ರೆಸ್ 37, ಸ್ವತಂತ್ರರು 3 ಮತ್ತು ಐಎನ್ಎಲ್ಡಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಯಾರು ನಯಾಬ್ ಸಿಂಗ್ ಸೈನಿ
ನಯಾಬ್ ಸಿಂಗ್ ಸೈನಿ ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದು, 55 ವರ್ಷದ BA ಮತ್ತು LLB ಓದಿರುವ ಅವರು ಕಾನೂನು ಪಧವಿದರರು, ಸಂಘ ಪರಿವಾರದ ಹಿನ್ನಲೆಯ ಅವರನ್ನು ಹರಿಯಾಣ ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿತ್ತು ನಂತರದ ಬೆಳವಣಿಗೆಯಲ್ಲಿ ಅವರನ್ನು ಹರಿಯಾಣ ಮುಖ್ಯಮಂತ್ರಿ ಮಾಡಿದ್ದರು ಈಗಲೂ ಕುರುಕ್ಷೇತ್ರ ಲೋಕಸಭೆ ಕ್ಷೇತ್ರದ ಸಂಸದರಾಗಿದ್ದಾರೆ ಅನ್ನೋದು ವಿಶೇಷ.ಅವರು ಲಾಡ್ವಾ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಸಮೀಪದ ಕಾಂಗ್ರೆಸ್ ಪ್ರತಿಸ್ಪರ್ಧಿ ಮೇವಾ ಸಿಂಗ್ ವಿರುದ್ಧ 16,054 ಮತಗಳ ಅಂತರದಿಂದ ಜಯಗಳಿಸಿದ್ದಾರೆ
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26