ಶ್ರೀನಿವಾಸಪುರ:ನಾಲ್ಕೈದು ಮಂದಿ ಯುವಕರ ಗುಂಪು ದ್ವಿಚಕ್ರ ವಾಹನಗಳಲ್ಲಿ ಬಂದು ಶ್ರೀನಿವಾಸಪುರ ಬಸ್ ನಿಲ್ದಾಣ ಬಳಿಯ ಹಾಫ್ ಕಾಮ್ಸ್ ಮುಂಬಾಗ ಪೋಲಿಸ್ ಠಾಣೆಗೆ ಕೂಗಳತೆ ದೂರದಲ್ಲಿ ನಡುರಸ್ತೆಯಲ್ಲಿ ಸಾರ್ವಜನಿಕವಾಗಿ ಮದ್ಯದ ಬಾಟಿಲ್ ಹಾಗು ರಸ್ತೆಯಲ್ಲಿ ಸ್ಥಾಪಿಸಿದ್ದ ಪ್ಲಾಸ್ಟಿಕ್ ರಸ್ತೆ ವಿಭಜಕಗಳನ್ನು ಹಿಡಿದು ಬಡಿದಾಡಿಕೊಂಡಿದ್ದಾರೆ.ಬಡಿದಾಟದ ದೃಶ್ಯಗಳನ್ನು ನೋಡಿದವರು ಬೆಚ್ಚಿಬಿದ್ದಿದ್ದಾರೆ.
ಘಟನೆ ನಡೆದು ಎರಡು ದಿನವಾದರು ಪೋಲಿಸರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.ಯುವಕರು ರೌಡಿ ಗ್ಯಾಂಗುಗಳಂತೆ ಸಾರ್ವಜನಿಕವಾಗಿ ಮದ್ಯದ ಬಾಟಲಗಳಲ್ಲಿ ಬಡೆದಾಡಿಕೊಂಡು ಸಾರ್ವಜನಿಕವಾಗಿ ಭಿಕರತೆಯಿಂದ ನಡೆದುಕೊಂಡಿದ್ದನ್ನು ಜನ ನೋಡಿದ್ದಾರೆ ದಾರಿ ಹೊಕರು ಘಟನೆಯನ್ನು ತಮ್ಮ ಮೊಬೈಲ್ ಗಳಲ್ಲಿ ಚಿತ್ರಿಸಿಕೊಂಡಿದ್ದು ಎನ್ನಲಾದ ಬಿದಿಕಾಳಗದ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದೆ.ಅದರ ಅಧಾರದಲ್ಲಿ,ವಿಡಿಯೋದಲ್ಲಿ ಇರುವ ದ್ವಿಚಕ್ರ ವಾಹನದ ನಂಬರ್ ಅಧಾರದಲ್ಲಿ ಘಟನೆಯಲ್ಲಿ ಪಾಲ್ಗೋಂಡವರನ್ನು ಹುಡುಕಿ ಹೆಡೆ ಮುರಿ ಕಟ್ಟಲು ಪೋಲಿಸರಿಗೆ ಸಾಧ್ಯ ಇಲ್ಲವ ಎಂದು ಜನತೆ ಪ್ರಶ್ನಿಸಿದ್ದಾರೆ.
ಸಿನಿಮಾ ವಿಲಗಳ ರಿತಿ ಫೊಸು
ಜನ ನೋಡು ನೋಡುತ್ತಿದ್ದಂತೆ ಬಡಿದಾಡಿಕೊಂಡು ಯುವಕರು ಪ್ಲಾಸ್ಟಿಕ್ ವಿಭಜಕಗಳನ್ನು ಗದೆಯಂತೆ ಎತ್ತಿಕೊಂಡು ಸಿನಿಮಾಗಳಲ್ಲಿನ ಭಯಂಕರ ವಿಲನಗಳ ರೀತಿ ಫೋಸು ಕೊಟ್ಟಿದ್ದು ಸಾರ್ವಜನಿಕರನ್ನು ಆತಂಕಕ್ಕೆ ಈಡುಮಾಡಿದೆ
ಶ್ರೀನಿವಾಸಪುರ ಪೋಲಿಸರು ಒತ್ತಾಯಕ್ಕೆ ಎನ್ನುವಂತೆ ಇಬ್ಬರನ್ನು ಬಂಧಿಸಿ ಕೈತೊಳೆದುಕೊಂಡಿದ್ದಾರೆ ಎನ್ನುವ ಮಾತು ಎಲ್ಲಡೆ ಕೇಳಿಬರುತ್ತಿದೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



