ಶ್ರೀನಿವಾಸಪುರ:ರಾಜ್ಯದ ಹಿತ ದೃಷ್ಠಿಯಿಂದ ಜೆಡಿಎಸ್ ಪಕ್ಷ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಅವರು ಇಂದು ತಾಲೂಕು ಜೆಡಿಎಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ರಾಷ್ಟ್ರಕ್ಕೆ ಮೋದಿ ನಾಯಕತ್ವ ಹೇಗೊ ರಾಜ್ಯಕ್ಕೆ ಕುಮಾರಣ್ಣನ ನಾಯಕತ್ವ ಅಗತ್ಯವಾಗಿದೆ.
ರಾಜ್ಯದಲ್ಲಿ ಎನ್.ಡಿ.ಎ ಮೈತ್ರಿ ಬಲದಿಂದ ಎಲ್ಲಾ ಸ್ಥಾನಗಳಲ್ಲೂ ಎಂ.ಪಿ ಅಭ್ಯರ್ಥಿಗಳು ಜಯಸಾಧಿಸುತ್ತಾರೆ.ಶ್ರೀನಿವಾಸರ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು ಶ್ರೀನಿವಾಸಪುರದ ಉತ್ತಮ ಭವಿಷ್ಯಕ್ಕಾಗಿ ಯೋಜನೆಗಳನ್ನು ಕಾರ್ಯಗತ ಗೊಳಿಸುವ ಸಲುವಾಗಿ ಶ್ರೀನಿವಾಸಪುರದಲ್ಲಿ ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಮಲ್ಲೇಶ್ ಬಾಬು ಅವರಿಗೆ ಹೆಚ್ಚಿನ ಲೀಡ್ ನೀಡುವ ಮೂಲಕ ಗೆಲ್ಲಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ನಮ್ಮೂರ ಹೆಣ್ಮಗಳ ಮಗ ಮಲ್ಲೇಶ್
ಶ್ರೀನಿವಾಸಪುರ ತಾಲೂಕಿನ ರಾಯಲಪಾಡು ಹೋಬಳಿಯ ಮುದಿಮಡಗು ಪಂಚಾಯಿತಿಯ ಹೆಣ್ಮಮಗಳು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮನವರ ಮಗನಾಗಿರುವ ಮಲ್ಲೇಶ್ ಬಾಬು ಅವರ ತಂದೆ ದಿವಂಗತ ಮುನಿಸ್ವಾಮಿ ಐ ಎ ಎಸ್ ಅಧಿಕಾರಿಯಾಗಿ ಸಾಮಜಿಕ ಕಳಕಳಿಯಿಂದ ಕಾರ್ಯನಿರ್ವಹಿಸುತ್ತಿದ್ದರು ಇಂತಹ ವಿದ್ಯಾವಂತ ಕುಟುಂಬದಿಂದ ಬಂದಿರುವ ವ್ಯಕ್ತಿಯಾಗಿರುವ ಮಲ್ಲೇಶ್ ಅಯ್ಕೆ ಸೂಕ್ತವಾಗಿದೆ ಎಂದರು.
ಅಲ್ಪ ಸಂಖ್ಯಾತ ಬಂಧುಗಳಿಗೆ ಆತಂಕ ಬೇಡ
ಕಳೆದ ನಾಲ್ಕು ದಶಕಗಳಿಂದ ನನಗೆ ರಾಜಕೀಯ ಶಕ್ತಿಯಾಗಿ ನನ್ನೊಂದಿಗೆ ರಾಜಕೀಯ ಪ್ರಯಾಣ ಮಾಡಿಕೊಂಡು ಬರುತ್ತಿರುವ ಅಲ್ಪಸಂಖ್ಯಾತ ಬಂಧುಗಳು ಮೈತ್ರಿ ರಾಜಕೀಯದಿಂದ ಯಾವುದೇ ಅನುಮಾನ ಅಥಾವ ಅತಂಕಕ್ಕೆ ಒಳಗಾಗುವುದು ಬೇಡ ಎಲ್ಲಾ ಸಂದರ್ಭದಲ್ಲೂ ನಾನು ನಿಮ್ಮೊಂದಿಗೆ ಇರುತ್ತೇನೆ ಮೈತ್ರಿ ಕೂಟದ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಬೆಂಬಲಿಸುವ ಮೂಲಕ ಕುಮಾರಸ್ವಾಮಿ ಅವರ ಕೈ ಬಲಪಡಿಸೋಣ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ಜಿಲ್ಲಾ ರೈತ ಮೊರ್ಚಾ ಮುಖಂಡ ಚಿರುವನಹಳ್ಳಿಲಕ್ಷ್ಮಣಗೌಡ, ರೋಣೂರು ಚಂದ್ರು,ನಲ್ಲಪಲ್ಲಿರೆಡ್ಡಪ್ಪ , ಗಾಯಿತ್ರಿ ಮುತ್ತಪ್ಪ,ಗೌವನಪಲ್ಲಿ ಪಂಚಾಯಿತಿ ಸದಸ್ಯ ಅಮ್ಜಾದ್ ಖಾನ್,ಪೂಲು ಶಿವಾರೆಡ್ಡಿ,ಗಣೇಶ್,ಲಕ್ಷ್ಮೀಪುರ ಶೇಕ್ ಇಸ್ಮಾಯಿಲ್,ತೂಪಲ್ಲಿಮಧುಸೂಧನರೆಡ್ಡಿ,ಕೊಂಡಸಂದ್ರ ನಾಗರಾಜ್,ಬಾರ್ ನಾರಯಣಸ್ವಾಮಿ,ಕೊಂಡಸಂದ್ರ ಶ್ರೀನಿವಾಸರೆಡ್ಡಿ
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27