ಶ್ರೀನಿವಾಸಪುರ:ಜಮೀನು ವ್ಯಾಜ್ಯದ ಹಿನ್ನಲೆಯಲ್ಲಿ ದೌರ್ಜನ್ಯದಿಂದ ವಿಧವೆ ಮಹಿಳೆಗೆ ಸೇರಿದ ಮನೆ ತಗಡಿನ ಶೇಡ್ ಮತ್ತು ಕಾಂಪೌಂಡ್ ಗೊಡೆಯನ್ನು ನೆಲಕ್ಕುರಳಿಸಿರುವ ಘಟನೆ ಗುರುವಾರ ಮಧ್ಯರಾತ್ರಿ ಪಟ್ಟಣದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ನಡೆದಿದ್ದು ಈ ಕುರಿತಾಗಿ ಶ್ರೀನಿವಾಸಪುರ ಠಾಣೆಯಲ್ಲಿ ದೂರುದಾಖಲಾಗಿದ ದೌರ್ಜನ್ಯಕ್ಕೆ ಒಳಗಾದ ವಿಧವೆ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಘಟನೆ ಕುರಿತಾಗಿ ವಿಧವೆ ಮಹಿಳೆ ವಿಜಯಮ್ಮ ಅವರ ಮಗ ರಮೇಶ್ ಕುಮಾರ್ ಹಾಗು ಮೈದುನ ಶ್ರೀನಿವಾಸಶೆಟ್ಟಿ ಮಾಹಿತಿ ನೀಡಿದ್ದು ರೈಲ್ವೇ ಉದ್ಯೋಗಿಯಾಗಿದ್ದ ನಮ್ಮ ಅಣ್ಣ ಪಾಳ್ಯದ ನಾಗರಾಜು ತಮ್ಮ ಪತ್ನಿ ವಿಜಯಮ್ಮನ ಹೆಸರಿಗೆ 1986 ರಲ್ಲಿ 1 ಕುಂಟೆ (33×33)ಜಮೀನು ಖರಿದಿಸಿ ಅಲ್ಲಿ ಚಿಕ್ಕದಾಗಿ ಮನೆ ನಿರ್ಮಿಸಿಕೊಂಡು ಪಕ್ಕದ ಜಾಗದಲ್ಲಿ ರೆಕ್ ಶೇಡ್ ಹಾಕಿಕೊಂಡಿದ್ದು ನೀರಿನ ತೊಟ್ಟಿ ನಿರ್ಮಿಸಿ ಕಾಂಪೌಂಡ್ ಹಾಕಿಕೊಂಡಿದ್ದ ಅವರು ಅಲ್ಲೆ ವಾಸಿಸುತ್ತಿದ್ದರು.
ಇತ್ತಿಚಿಗೆ ಪಕ್ಕದ ಜಮೀನಿನ ಮಾಲಿಕರಾದ ಮೊಗಿಲಹಳ್ಳಿ ಗ್ರಾಮದ ನರೇಶ್ ಮತ್ತು ಮಂಜುನಾಥರೆಡ್ಡಿ ಜಮೀನು ಅಳತೆ ವಿಚಾರದಲ್ಲಿ ತಕರಾರು ತಗೆದು ಜಮೀನು ಸರ್ವೆ ಮಾಡಿಸಿ ನಿಮ್ಮ ಜಮೀನು ಉತ್ತರ ದಕ್ಷಿಣದ ಅಳತೆಯಲ್ಲಿದೆ ಹಾಗಾಗಿ ನಮಗೆ ಪೂರ್ವ ಪಶ್ಚಿಮದಲ್ಲಿ ಜಮೀನು ಬರುತ್ತದೆ ಎಂದು ವಾದಿಸಿದ್ದರು ನಂತರದಲ್ಲಿ ಊರಿನ ಮುಖಂಡರ ಸಮ್ಮುಖದಲ್ಲಿ ಎರಡು ಮೂರು ಬಾರಿ ನ್ಯಾಯ ಪಂಚಾಯ್ತಿ ನಡೆಯಿತು ಈಗ್ಗೆ ಒಂದು ತಿಂಗಳ ಹಿಂದೆ ಮಾತುಕತೆ ನಡೆದು ಜಗಳ ಮಾಡಿಕೊಳ್ಳದೆ ಕೂತು ಮಾತನಾಡಿ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದರು ಪಂಚಾಯಿತಿ ಮುಖಂಡರ ಮಾತಿಗೆ ಗೌರವ ನೀಡಿ ನಾವು ಯಾವುದೆ ಕಾನೂನು ಸಮರಕ್ಕೆ ಮುಂದಾಗಿರಲಿಲ್ಲ.
ಮಧ್ಯರಾತ್ರಿ ಗೂಂಡಾಗಳನ್ನು ಕರೆ ತಂದು ಧ್ವಂಸ
ಗುರುವಾರ ನಮ್ಮ ಅತ್ತಿಗೆ ಒಬ್ಬರೆ ಮನೆಯಲ್ಲಿದ್ದಾಗ ಅದೂ ಮಧ್ಯರಾತ್ರಿ ಸಮಯದಲ್ಲಿ ಗೂಂಡಾಗಳೊಂದಿಗೆ ಆಗಮಿಸಿದ ಪಕ್ಕದ ಜಮೀನಿನ ಮಾಲಿಕರಾದ ನರೇಶ್ ಮತ್ತು ಮಂಜುನಾಥರೆಡ್ಡಿ ಹಾಗು ಇತರರು ಜೆಸಿಬಿ ತಂದು ಮನೆಯ ಪಕ್ಕದಲ್ಲಿ ಹಾಕಿದ್ದ ರೇಕ್ ಶೇಡ್ ಮತ್ತು ಕಾಂಪೌಂಡ್ ಗೊಡೆಯನ್ನು ಕೆಡವಿ ಹಾಕಿದ್ದಾರೆ ಮನೆಯ ಬಳಿ ಸದ್ದು ಕೇಳಿ ಹೋರಗೆ ಬಂದಂತ ನಮ್ಮ ಅತ್ತಿಗೆ 75 ವರ್ಷದ ಮಹಿಳೆ ಮೇಲೆ ದೌರ್ಜನ್ಯ ನಡೆಸಿದಲ್ಲದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಗಲು ಬರಬಹುದಿತ್ತಲ್ವಾ
ನ್ಯಾಯಕ್ಕೆ ಬರುವ ಹಾಗಿದ್ದರೆ ನರೇಶ್ ಮತ್ತು ಮಂಜುನಾಥರೆಡ್ಡಿ ಪ್ರಾಮಾಣಿಕರಾಗಿ ನಾಲ್ಕು ಜನರ ಮುಂದೆ ಹಗಲು ಬಂದು ನ್ಯಾಯೋಚಿತವಾಗಿ ಸಾಧಿಸಬಹುದಿತ್ತಲ್ಲ ಅದು ಬಿಟ್ಟು ಮಧ್ಯರಾತ್ರಿ ಬಂದು ವಿಧ್ವಂಸ ಸೃಷ್ಟಿಸುವ ಅವಶ್ಯಕತೆ ಎನಿತ್ತು ಎಂದು ವಿಧವೆ ಮಹಿಳೆ ವಿಜಯಮ್ಮನ ಮಗ ರಮೇಶ್ ಕುಮಾರ್ ಹೇಳುತ್ತಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26