ಶ್ರೀನಿವಾಸಪುರ:ಶ್ರೀನಿವಾಸಪುರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (PLDಬ್ಯಾಂಕ್) ಸದಸ್ಯರು ಹಾಗು ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್ ನಡುವಿನ ಭಿನ್ನಮತ ತಾರಕಕ್ಕೆ ತಲುಪಿತ್ತು ನನ್ನ ವಿರುದ್ದ ಚಿತಾವಣಿ ನಡೆಸಿರುವ ಸದಸ್ಯರು ನನ್ನ ಗಮನಕ್ಕೆ ಬಾರದೆ ನಡೆಸಿದ ಸಭೆ ನಡಾವಳಿಗಳು ಉರ್ಜಿತವಾಗುವುದಿಲ್ಲ ಎಂದು PLD ಬ್ಯಾಂಕ್ ಅಧ್ಯಕ್ಷ ಆಶೋಕ್ ತೀವ್ರ ಸ್ಥಾಯಿಯಲ್ಲಿ ತಮ್ಮ ಅಸಮಧಾನ ಹೋರಹಾಕಿದ್ದರು.
ಡೆಲಿಗೇಟ್ ಪಡೆದರ ಉಪಾಧ್ಯಕ್ಷ
ಡೆಲಿಗೇಟ್(ಮತದಾನದ ಹಕ್ಕು) ಪಡೆದುಕೊಳ್ಳುವ ವಿಚಾರದಲ್ಲಿ ಸದಸ್ಯರು ಒಗ್ಗೂಡಿ PLD ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್ ಅವರನ್ನು ದೂರ ಇಟ್ಟು ಸಭೆ ನಡೆಸಿದ ಉಪಾಧ್ಯಕ್ಷ ಕೋಡಿಪಲ್ಲಿಸುಬ್ಬರೆಡ್ಡಿ ಅಪೇಕ್ಸ್ ಬ್ಯಾಂಕ್ ಮತದಾನದ ಹಕ್ಕು ಪಡೆಯುವ(ಡಿಲಿಗೇಟ್)ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದ್ದು,ಈ ಬಗ್ಗೆ ಪ್ರತಿಷ್ಟೆಗೆ ಧಕ್ಕೆಯಾಗಿ ತಮ್ಮ ವಿರುದ್ದದ ಚಿತಾವಣೆ ನಡೆದಿದೆ ಎನ್ನುತ್ತಿದ್ದ ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್
ಆಕ್ರೋಶ ಈಗ ತಣ್ಣಗಾಗಿದಿಯಂತೆ ಎನ್ನುವ ಮಾತು ಕೇಳಿಬರುತ್ತಿದೆ.
ಸಹಕಾರಿ ಚುನಾವಣೆಗಳಲ್ಲಿ ಕೈ ಸನ್ನೆ ಆಯ್ಕೆಗಳು!
ಶ್ರೀನಿವಾಸಪುರದ ಐದು ದಶಕಗಳ ರಾಜಕಾರಣದಲ್ಲಿ ತಾಲೂಕಿನ ಯಾವುದೆ ಸಹಕಾರ ಸಂಘಗಳ ಚುನಾವಣಾ ಚಟುವಟಿಕೆಗಳಲ್ಲಿ ವಿರೋಧ ಪಕ್ಷದ ಎದುರಾಳಿ ಇಲ್ಲದೆ one way ಎಂಬಂತೆ ಕೊಠಡಿಯಲ್ಲಿ ಕೂತು ಕೈ ಸನ್ನೆಯಲ್ಲಿ ಅಧ್ಯಕ್ಷರ ಹಾಗು ನಿರ್ದೇಶಕರ ಆಯ್ಕೆಗಳು ನಡಿತಿತ್ತು. ಈಗ ಬದಲಾದ ರಾಜಕಾರಣ ಎಂಬಂತೆ ಇದೆ ಮೊದಲ ಬಾರಿಗೆ PLD ಬ್ಯಾಂಕ್ ಡೆಲಿಗೇಟ್ ವಿಚಾರ ಕಣ್ ಸನ್ನೆಯಲ್ಲಿ ನಡೆದಿದೆಯಂತೆ ಅದಕ್ಕೆ ಭಿನ್ನಮತ ಸ್ಪೋಟವಾಗಿದೆ ಎಂಬ ಮಾತು ಕೇಳಿಬಂದಿತ್ತು, ಆದೇನಾಯಿತೋ ಎನೋ ಹಾ ಹೂ ಎಂದು ಹೂಂಕರಿಸಿದವರು U ಟರ್ನ್ ಹೊಡೆದಿದ್ದಾರಂತೆ,PLD ಬ್ಯಾಂಕ್ ವ್ಯವಸ್ಥಾಪಕಿ ಹೆಣ್ಮಗಳು ಎಂದು ನೆಪವೊಡ್ಡಿ ಆಕೆಗೆ ತೊಂದರೆ ಆಗಬಾರದು ಈ ಕಾರಣಕ್ಕೆ ಕಾನೂನು ಹೋರಾಟದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿಕೆ ನೀಡಿ ತಣ್ಣಗಾಗಿದ್ದಾರೆ ಎನ್ನುವ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ.



