ಬೆಂಗಳೂರು: ಸಿಲಿಕಾನ್ ವ್ಯಾಲಿ ದೇಶದ ಐಟಿ ರಾಜಧಾನಿ ಎಂದೆಲ್ಲಾ ಪ್ರಸಿದ್ಧವಾದ ಬೆಂಗಳೂರಿನಲ್ಲಿ ಅನೇಕ ಬಹುರಾಷ್ಟ್ರೀಯ ಕಂಪನಿಗಳು, ಸ್ಟಾರ್ಟ್ಅಪ್ಗಳು ಮತ್ತು ದೊಡ್ಡ ಉದ್ಯಮಿಗಳು ನೆಲೆಸಿದ್ದಾರೆ ಆರ್ಥಿಕ ಅಭಿವೃದ್ಧಿ ತನ್ನದೆ ಆದ signature iconic ಆಗಿರುವ ಬೆಂಗಳೂರು ನಗರದಲ್ಲಿ “ಬಿಲಿಯನೇರ್ಸ್ ಸ್ಟ್ರೀಟ್” ಎಂಬ ರಸ್ತೆ ಇದೆ.
ಈ ರಸ್ತೆಯಲ್ಲಿ ವಾಸಿಸುವಂತ ಬಹುತೇಕ ಉದ್ಯಮಿಗಳ ವ್ಯಾಪಾರ ಉದ್ಯಮ ದೇಶ ವಿದೇಶಗಳಲ್ಲಿ ಇದೆ.ಆ ರಸ್ತೆ ಇರುವುದು ಬೆಂಗಳೂರಿನ ಕೋರಮಂಗಲದ 3 ನೇ ಬ್ಲಾಕ್ ಪ್ರದೇಶದಲ್ಲಿದ್ದು ಇದನ್ನು “ಬಿಲಿಯನೇರ್ಸ್ ಸ್ಟ್ರೀಟ್” ಎನ್ನುತ್ತಾರೆ.
ಸರ್ಕಾರಿ ದಾಖಲೆಗಳ ಪ್ರಕಾರ ಅಧಿಕೃತವಾಗಿ ಬಿಲಿಯನೇರ್ಸ್ ಸ್ಟ್ರೀಟ್ ಹೆಸರು ಅಲ್ಲ, ಆದರೆ ಇಲ್ಲಿ ವಾಸಿಸುವ ದೇಶದ, ಐಟಿ ಕ್ಷೇತ್ರದಲ್ಲಿ ಕೋಟ್ಯಂತರ ಅಲ್ಲ ಬಿಲಿಯನ್ Billions ಸಂಪಾದಿಸಿದವರು ಹಾಗೂ ಖ್ಯಾತ ಉದ್ಯಮಗಳ chairmans, ceo, co-founders, md ಗಳಂತಹ ಹುದ್ದೆಗಳಲ್ಲಿ ಇರುವ ಆರ್ಥಿಕ ದಿಗ್ಗಜರು ವಾಸಿಸುತ್ತಿರುವುದರಿಂದ ಹೆಸರು ಬಂದಿದೆ ಅಷ್ಟೆ ಅಲ್ಲ ಅಲ್ಲ ವಿಶಿಷ್ಟ ಸ್ಥಾನಮಾನ ಸಿಕ್ಕಿದೆ.ಈ ರಸ್ತೆ ಇಷ್ಟೊಂದು ದುಬಾರಿಯಾಗಲು ಪ್ರಮುಖ ಕಾರಣ ಐಟಿ ಉದ್ಯಮಗಳು ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರು, ಸರ್ಜಾಪುರ ಮುಂತಾದ ಐಟಿ ಹಬ್ಗಳಿಗೆ ಇದು ಹತ್ತಿರದಲ್ಲಿದೆ. ಜೊತೆಗೆ ಅಂತರರಾಷ್ಟ್ರೀಯ ಶಾಲೆಗಳು, ಪ್ರೀಮಿಯಂ ಆಸ್ಪತ್ರೆಗಳು,ದುಬಾರಿ ಮಾಲ್ಗಳು ಮತ್ತು ಅತ್ಯತ್ತಮ ರಸ್ತೆ ಸಂಪರ್ಕ ಈ ಪ್ರದೇಶದ ಮೌಲ್ಯವನ್ನು ಹೆಚ್ಚಿಸಿದೆ.
no ordinary houses ಇರುವುದಿಲ್ಲ ಇಲ್ಲಿರುವುದೆಲ್ಲಾ ವಿಶಾಲವಾದ ಜಾಗದಲ್ಲಿ ನಿರ್ಮಿಸಲಾದ ಐಷಾರಾಮಿ ಭವ್ಯವಾದ ಬಂಗಲೆಗಳು, ಹಸಿರು ತೋಟಗಳು, ಸ್ವಿಮ್ಮಿಂಗ್ ಪೂಲ್ಗಳು ಮತ್ತು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳ ಮಹಲುಗಳು mansion hohse ಮಾತ್ರ ಕಾಣುತ್ತದೆ.

ಇಲ್ಲಿನ ಮನೆಗಳ ಬೆಲೆ ಡಬಲ್ ನಂಬರನಲ್ಲಿ ಕೋಟಿಗಳಲ್ಲಿ ಬೆಲೆಯಂತೆ ಸುಮಾರು 10,000 ಚದರ ಅಡಿ ಜಾಗದ ಬೆಲೆ ಕೋಟಿಗಳ ಲೆಕ್ಕ ಅಂದಾಜು 60–70 ಕೋಟಿಯಂತೆ ಎಂದು ಹೇಳಲಾಗುತ್ತದೆ. ಒಂದು ಚದರ ಅಡಿ ಭೂಮಿಯ ಬೆಲೆ ಲಕ್ಷಾಂತರ ರೂಪಾಯಿಗಳ ಮಟ್ಟದಲ್ಲಿ ಹೇಳುತ್ತಾರೆ.ಇಲ್ಲಿ ಜಾಗ ಸಿಗುವುದು ಬಹಳ ಕಷ್ಟ. ಹೀಗಾಗಿ, ಸಾಮಾನ್ಯ ಜನರಿಗೆ ಇದು ಕನಸಿನ ಪ್ರದೇಶ ಎನ್ನಬಹುದು, ಕೋಟ್ಯಂತರ ಸಂಪತ್ತಿನ ಮಾಲೀಕರಿಗೆ ಮಾತ್ರ ಸಾಧ್ಯವಾಗುವ ವಸತಿ ಪ್ರದೇಶವಾಗಿದೆ. ಐಟಿ ಕ್ರಾಂತಿಯಿಂದ ರೂಪುಗೊಂಡ ಹೊಸ ಶ್ರೀಮಂತರ ಸಂಕೇತವಾಗಿ “ಬಿಲಿಯನೇರ್ಸ್ ಸ್ಟ್ರೀಟ್” ಇಂದು ಬೆಂಗಳೂರಿನ ವೈಭವ ಮತ್ತು ಆರ್ಥಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.



