ಶ್ರೀನಿವಾಸಪುರ: ತಾಲೂಕಿನ ಅರಿಕೇರೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ನಾಡ ಹಬ್ಬ ನವರಾತ್ರಿ ದಸರಾ ಉತ್ಸವ ಹಾಗೂ ಸಂಭ್ರಮದಿಂದ ವಿಜಯದಶಮಿ ಆಚರಿಸಲಾಯಿತು.
ಗ್ರಾಮದ ಶ್ರೀ ಕೋದಂಡರಾಮ ದೇವರ ಪಲ್ಲಕ್ಕಿ ಉತ್ಸವವಕ್ಕೆ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ನೇತೃತ್ವದಲ್ಲಿ ಗ್ರಾಮದ ಹಿರಿಯರು ಯುವಕರು ಸೇರಿ ಪೂಜೆ ಸಲ್ಲಿಸುವುದರ ಮೂಲಕ ವಿಜಯದಶಮಿ ಆಚರಣೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಣ್ಣ ಶ್ರೀ ದುರ್ಗಾದೇವಿ ಅಸುರರನ್ನು ಸಂಹರಿಸಿ ಮಾನವ ಜನಾಂಗಕ್ಕೆ ಒಳಿತನ್ನು ಕರುಣಿಸಿದ ದಿನ ಈ ನಿಟ್ಟಿನಲ್ಲಿ ಮನುಷ್ಯ ತನ್ನಲ್ಲಿರುವ ಕೆಡುಕಗಳನ್ನು ಮನಸ್ಸಿನಿಂದ ಶಾಶ್ವತವಾಗಿ ದೂರಸರಿಸಿ, ಒಳಿತನ್ನು ಎಲ್ಲೆಡೆ ಪಸರಿಸುವ ಜೊತೆಗೆ ನವರಾತ್ರಿ ಸಂದೇಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು
ಗ್ರಾಮಸ್ಥರು ತಾಳ ಮೇಳಗಳೋಂದಿಗೆ ಶ್ರೀ ಕೋದಂಡರಾಮ ದೇವರ ಪಲ್ಲಕ್ಕಿ ಉತ್ಸವವನ್ನು ಹೊತ್ತು ಊರಿನಲ್ಲಿ ಮೆರವಣಿಗೆ ನಡೆಸಿ ಅಂಬು ಒಡೆಯುವ ಸ್ಥಳಕ್ಕೆ ಸಾಗಿದರು.


ಗ್ರಾಮಸ್ಥರು ಹಾಗೂ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಮತ್ತು ಶ್ಯಾನುಭೋಗರ ಕುಟುಂಬದವರು ಗಿರಿರಾಜ್ ಸೇರಿದಂತೆ ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಪದ್ದತಿಯಿಂತೆ ಗ್ರಾಮದ ಗೌಡರ ಕುಟುಂಬದವರು ಆಗಮಿಸಿ ಬನ್ನಿ ಮರದ ಶಮಿಗೆ ಸಾಂಪ್ರದಾಯ ಬದ್ದವಾಗಿ ಪೂಜಾ ವಿಧಿವಿಧಾನಗಳನ್ನು ನೇರವೇರಿಸಿ ನಂತರ ಬಿಲ್ಲಿನಿಂದ ಬಾಣ ಬಿಟ್ಟು ಸಂಭ್ರಮದಿಂದ ವಿಜಯದಶಮಿ ಆಚರಿಸಿದರು.ಇಲ್ಲಿ ಪೂಜಿಸಲ್ಪಟ್ಟ ಬನ್ನಿ ಎಲೆಗಳನ್ನು ಭಕ್ತಿಯಿಂದ ಸ್ವೀಕರಿಸಿ ಮನೆಗೆ ತಗೆದುಕೊಂಡು ಹೋದರೆ ಶುಭವಾಗುತ್ತದೆ ಎಂದು ಅರ್ಚಕರು ತಿಳಿಸಿದರು



