ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಅಭಿವೃದ್ಧಿಗೆ ಒಂದು ಕೋಟಿ ಅನುಧಾನಕ್ಕೆ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.
ಕಾರ್ತಿಕ ಮಾಸದ ಅಂಗವಾಗಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೂ ಮುನ್ನಾ ದೇವಾಲಯಕ್ಕೆ ಭೇಟಿ ನೀಡಿದ ಶಾಸಕ ದೇವರ ದರ್ಶನ ಪಡೆದು ನಂತರ ಮಾತನಾಡಿ ಲಕ್ಷದೀಪೋತ್ಸವ ಕಾರ್ಯಕ್ರಮದ ಉತ್ತಮವಾದ ಸೇವೆ ಆಯೋಜಕರಿಗೆ ಒಳ್ಲೆಯದಾಗಲಿ ಎಂದ ಅವರು ಆಯೋಜಕರ ಆಹ್ವಾನದ ಮೇರೆಗೆ ದೇವರ ದರ್ಶನಕ್ಕೆ ಆಗಮಿಸಿದ್ದು,ಇದೊಂದು ಪುರಾತನ ಆಲಯವಾಗಿದೆ ಇದರ ಅಭಿವೃದ್ಧಿಗೆ ಸರ್ಕಾರದಲ್ಲಿ ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದು ಸುಮಾರು ಒಂದು ಕೋಟಿ ವೆಚ್ಚದಲ್ಲಿ ಅಭೀವೃದ್ಧಿ ಮಾಡುವ ಯೋಚನೆ ಇದ್ದು ಊರಿನ ಪ್ರಮುಖರು ಹಿರಿಯರು ಸಹಕಾರ ಪಡೆದು ದೇವಾಲಯದ ಗೋಪುರ ಇನ್ನಿತರೆ ಕಾರ್ಯಗಳಿಗೆ ಹಣ ವಿನಿಯೋಗಿಸುವುದಾಗಿ ಹೇಳಿದರು.
ವಾಣಿಜ್ಯ ಕಟ್ಟಡಗಳು ಬೇಡ
ಈ ಸಂದರ್ಭದಲ್ಲಿ ಪ್ರಮುಖ ವಾಣಿಜ್ಯೋದ್ಯಮಿ ವೈ.ಆರ್.ಎಸ್ ಪ್ರಕಾಶ್ ಮಾತನಾಡಿ ದೇವಾಲಯದ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ ಆವರಣದ ಸುತ್ತ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಂಡಪಲ್ಲಿಕೃಷ್ಣಾರೆಡ್ಡಿ, ಮಾಜಿ ಸದಸ್ಯ ನಾಗೇಶ್ ಪುರಸಭೆ ಸದಸ್ಯ ಉಪಾಧ್ಯಕ್ಷೆ ಸುನಿತಾ,ಸದಸ್ಯ ಆನಂದಗೌಡ,ಮಾಜಿ ಸದಸ್ಯ ರಾಘವರೆಡ್ಡಿ,ಉದ್ಯಮಿಲಕ್ಷ್ಮಣರೆಡ್ಡಿ,ಮುಖಂಡರಾದ ಪೊಲುಶಿವಾರೆಡ್ಡಿ, ಇ.ಎನ್.ಎಸ್.ನಾರಯಣಸ್ವಾಮಿ,ಕಾರ್ ಬಾಬು,ಕೊಪ್ಪವಾರಪಲ್ಲಿ ವೆಂಕಟೇಶ್ ಬಸ್ ಶ್ರೀನಿವಾಸರೆಡ್ಡಿ ಮುಂತಾದವರು ಇದ್ದರು.



