ಶ್ರೀನಿವಾಸಪುರ:ಆದಿ ಜಾಂಭವ ಸಮುದಾಯ ಭವನ ನಿರ್ಮಾಣ ಸಂಬಂಧ ಸರ್ಕಾದಿಂದ ಜಮೀನು ಮಂಜೂರು ಮಾಡಿಸುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಆದಿಜಾಂಭವ ಸಮುದಾಯದ ಮುಖಂಡರ ಬೇಡಿಕೆಯಂತೆ ಪಟ್ಟಣದ ಹೊರವಲಯದ ಕೋಲಾರ ರಸ್ತೆಯಲ್ಲಿ ಮ್ಯಾಂಗೋ ವ್ಯಾಲಿ ಶಾಲೆಯ ಬಳಿ ಸರ್ವೇ ನಂಬರ್ 187 ರಲ್ಲಿ ಸುಮಾರು ಒಂದು ಎಕರೆ 25 ಗುಂಟೆ ಜಮೀನಿಗೆ ಸಂಬಂದ ಪಟ್ಟಂತೆ ಸ್ಥಳ ಪರಶೀಲನೆ ನಡೆಸಿ ಮಾತನಾಡಿ ಈ ಸ್ಥಳವನ್ನು ಆದಿ ಜಾಂಭವ ಸಮುದಾಯ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಿಸಲು ಸರ್ಕಾರದ ಹಂತದಲ್ಲಿ ಮಾತನಾಡುವುದಾಗಿ ಹೇಳಿದರು.
ನಿರ್ಮಾಣ ಸಂಬಂಧ ಶಾಸಕರ ವಿಧಿಯಿಂದ 10 ಲಕ್ಷ ರೂಪಾಯಿ ಸಹಾಯ ನೀಡುವುದಾಗಿ ಘೋಷಿಸಿದರು.ಇದೇ ಸಂದರ್ಭದಲ್ಲಿ ಸಂಸದ ಮಲ್ಲೇಶ್ ಬಾಬು ತಮ್ಮ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿದರು.
ಕಟ್ಟಡ ಕಾರ್ಮಿಕರಿಗೆ ಸಮುದಾಯ ಭವನ
ಕಟ್ಟಡ ಕಾರ್ಮಿಕರಿಗೂ ಸಮುದಾಯ ಭವನ ನಿರ್ಮಾಣ ಮಾಡುವ ಸಂಬಂದ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದು 3 ಕೋಟಿ ರೂಪಾಯಿಗಳು ಮಂಜೂರಾತಿ ಹಂತದಲ್ಲಿ ಇದೆ ಕಾರ್ಮಿಕ ಸಚಿವರ ಜೊತೆ ಮಾತನಾಡಿ ಆದಷ್ಟು ಬೇಗ ಕಾರ್ಯ ಪೂರ್ಣ ಗೋಳಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಮುನಿಯಪ್ಪ ಅಂಬೇಡ್ಕರ್ ಪಾಳ್ಯ ರವಿ,ಅಮ್ಮ ಟ್ರಸ್ಟ್ ಶ್ರೀನಿವಾಸ್,ಸೀತಪ್ಪ ಈರಪ್ಪ ಸೇರಿದಂತೆ ಆದಿ ಜಾಂಭವ ಸೇವಾ ಟ್ರಸ್ಟ್ ಸದಸ್ಯರು ಹಾಗೂ ಸಮುದಾಯದ ಮುಖಂಡರು ಇದ್ದರು.



