ಶ್ರೀನಿವಾಸಪುರ:ಕೇಂದ್ರ ಲೋಕಸೇವಾ ಆಯೋಗ 2024ನೇ ಸಾಲಿನ ಯುಪಿಎಸ್ಸಿ ಸಿವಿಲ್ ಸೇವೆಗಳ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡಿದ್ದು ಈ ವರ್ಷದ ಫಲಿತಾಂಶದಲ್ಲಿ ದೇಶದ ಮೊದಲ ಟಾಪರ್ ಆಗಿ ಶಕ್ತಿ ದುಬೆ ಹೊರಹೊಮ್ಮಿದ್ದರೆ.ಕರ್ನಾಟಕ ರಾಜ್ಯಮಟ್ಟದಲ್ಲಿ ಆರ್ ರಂಗಮಂಜು 24ನೇ ರ್ಯಾಂಕ್ನಲ್ಲಿ ಸಿಎಸ್ಇ ಪಾಸ್ ಮಾಡಿದ್ದರೆ ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ಪಟ್ಟಣದ ಉಪಾಧ್ಯಾಯ ದಂಪತಿ ಡಾ.ಆರ್.ರವಿಕುಮಾರ್ ಹಾಗೂ ಎಸ್.ಎನ್.ನಂದಿನಿ ಮಗಳು ಡಾ.ಮಾಧವಿ 446ನೇ ರ್ಯಾಂಕ್ಗಳಿಸಿದ್ದಾರೆ.ಕೋಲಾರ ತಾಲೂಕಿನ ಇರಗಸಂದ್ರ ಗ್ರಾಮದ ಕೃಷಿಕ ದಂಪತಿ ಆನಂದಪ್ಪ ಮತ್ತು ಸುಶೀಲಮ್ಮನವರ ಪುತ್ರ ಆಗ್ರಿಕಲ್ಚರ್ ಬಿಎಸ್ಸಿ ಪದವೀಧರ ಎ.ಮಧು 544ನೇ ರಾಂಕ್ ಗಳಿಸಿದ್ದಾರೆ.

ಉಪಾಧ್ಯಾಯ ದಂಪತಿ ಪುತ್ರಿ ಸಾಧನೆ
ಮೂಲತಃ ಶ್ರೀನಿವಾಸಪುರ ಪಟ್ಟಣದ ನಿವಾಸಿಗಳಾಗಿ ಮುತಕಪಲ್ಲಿ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರಾಗಿರುವ ಡಾ.ಆರ್.ರವಿಕುಮಾರ್ ಹಾಗೂ ಲಕ್ಷ್ಮೀಸಾಗರದಲ್ಲಿ ಸರ್ಕಾರಿ ಶಿಕ್ಷಕಿಯಾಗಿರುವ ನಂದಿನಿ ದಂಪತಿ ಪುತ್ರಿ ಮಾಧವಿ
ಪಟ್ಟಣದ ಶೈಲೇಂದ್ರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ವೇಣು ವಿದ್ಯಾಸಂಸ್ಥೆಯಲ್ಲಿ ಪ್ರೌಢಶಾಲೆ ಅಭ್ಯಾಸ ಮಾಡಿದ್ದು ಕೋಲಾರದ ಸಹ್ಯಾದ್ರಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ರಾಜಾಜಿನಗರ ಇಎಸ್ಐ ವೈದ್ಯಕಿಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದುಕೊಂಡಿರುವ ಮಾಧವಿ ಮನೆಯಲ್ಲೆ ಕುಳಿತು ನಿರಂತರವಾಗಿ ಆನ್ಲೈನ್ ಕೋಚಿಂಗ್ ಮೂಲಕ ತರಬೇತಿ ಪಡೆದುಕೊಂಡು ಯುಪಿಎಸ್ಸಿ ಗುರಿ ಸಾಧಿಸಿದ್ದಾರೆ ಎಂದು ಹೆತ್ತವರು ಹೆಮ್ಮೆಯಿಂದ ಹೇಳುತ್ತಾರೆ.
ಮಗಳಿಗೆ ದೊಡ್ಡಪ್ಪನೆ ಆದರ್ಶ
ಯುಪಿಎಸ್ಸಿ ಯಲ್ಲಿ 446ನೇ ರ್ಯಾಂಕ್ಗಳಿಸಿರುವ ಡಾ.ಮಾಧವಿಗೆ ಅವರ ದೊಡ್ದಪ್ಪನೆ ಆದರ್ಶವಂತೆ ಹೀಗೆಂದು ಮಾಧವಿ ತಂದೆ ಡಾ.ಆರ್.ರವಿಕುಮಾರ್ ಹೇಳುತ್ತಾರೆ ನನ್ನ ಹಿರಿಯ ಸಹೋದರ ಶ್ರೀನಿವಾಸಯ್ಯ ತಹಶಿಲ್ದಾರ್ ಆಗಿ ನಿವೃತ್ತರಾಗಿದ್ದು ಅವರೆ ನಮ್ಮ ಕುಟುಂಬಕ್ಕೆ ಆದರ್ಶ ಎನ್ನುತ್ತಾರೆ. ಅವರ ಮಾರ್ಗದರ್ಶನದಲ್ಲಿ ನಾವು ಶಿಕ್ಷಕ ವೃತ್ತಿಯಲ್ಲಿ ಬದಕು ಕಟ್ಟಿಕೊಂಡು ಸಮಾಜದಲ್ಲಿ ಉಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿತ್ತಿದ್ದೀವಿ.ನಮ್ಮಣ್ಣ ಶ್ರೀನಿವಾಸಯ್ಯ ಅವರು ನನ್ನ ಮಗಳಿಗೂ ಸಲಹೆ ಸೂಚನೆಗಳನ್ನು ನೀಡುತ್ತ ಬದುಕಿಗೆ ಸಹಕಾರ ನೀಡುತ್ತಿದ್ದರು ಈ ಹಿನ್ನಲೆಯಲ್ಲಿ ನನ್ನ ಮಗಳು ಅವರ ದೊಡ್ಡಪ್ಪನ ಆದರ್ಶ ಇಟ್ಟುಕೊಂಡು ಯುಪಿಎಸ್ಸಿ ಗುರಿ ಸಾಧಿಸಿದ್ದಾಳೆ ಎಂದು ಡಾ.ಆರ್.ರವಿಕುಮಾರ್ ಸಂಭ್ರಮದಿಂದ ನುಡಿದರು.
ಚಟುವಟಿಕೆಯಿಂದ ಕೂಡಿದ ವ್ಯಕ್ತಿತ್ವ
ಯುಪಿಎಸ್ಸಿಯಲ್ಲಿ ಡಾ.ಮಾಧವಿ 446ನೇ ರ್ಯಾಂಕ್ಗಳಿಸಿದ್ದು ನಮಗೆಲ್ಲ ಹೆಮ್ಮೆಯ ವಿಚಾರ ಎನ್ನುತ್ತಾರೆ ತಾಯಿ ನಂದಿನಿ, ನನ್ನ ಮಗಳು ಓದಿನಲ್ಲೆ ಅಲ್ಲ ವಿವಿದ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸದಾ ಲವಲವಿಕೆಯಿಂದ ಸಮಯ ಕಳೆಯುತ್ತಿದ್ದಳು ಸಂಗೀತದಲ್ಲಿ ಉನ್ನತ ಸಾಧನೆ ಮಾಡಿರುವ ಆಕೆ ಕರಾಟೆಯಲ್ಲೂ ವಿವಿಧ ಬಣ್ಣದ ಬೆಲ್ಟ್ ಪಡೆಯುವ ಮೂಲಕ ವಿವಿಧ ರಾಜ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾಳೆ,ಚಿತ್ರಕಲೆಯಲ್ಲೂ ಆಸಕ್ತಿ ಇದ್ದು ರಾಜ್ಯಮಟ್ಟದ ಸ್ಪರ್ದೆಯಲ್ಲಿ ಭಾಗವಹಿಸಿದ್ದಳು ಎಂದು ಸಂತಸದಿಂದ ಹೇಳುತ್ತಾರೆ.
ರೈತ ಮಗನ ಸಾಧನೆ
ಕೋಲಾರ ತಾಲೂಕು ಇರಗಸಂದ್ರ ಗ್ರಾಮದ ರೈತ ಆನಂದ್, ತಾಯಿ ಸುಶೀಲಮ್ಮ ಮಗ ಎ.ಮಧು ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿ ಪದವಿದರ ಗ್ರಾಮೀಣ ಭಾಗದಿಂದ ಬಂದಿರುವನಾಗಿದ್ದು, ಸಮಾಜದಲ್ಲಿ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವನಾಗಿ ಇದನ್ನು ಸರಿಮಾಡುವ ಸಲುವಾಗಿ ಯಾವ ಕ್ಷೇತ್ರದಿಂದ ಸಾಧ್ಯ ಎಂದು ಯೋಚಿಸಿದಾಗ ಸಿಕ್ಕಿದ್ದು, ಯುಪಿಎಸ್ಸಿ ಆಯ್ಕೆ. ಆದ್ದರಿಂದ ಈ ಹಾದಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅಜಿತ್ ಅವರನ್ನು ಸ್ಪೂರ್ತಿಯಾಗಿರಿಸಿಕೊಂಡು ಆಡಳಿಯ ವ್ಯಸ್ಥೆಯ ಮುಖ್ಯಸ್ಥನಾಗಬೇಕು ಎಂಬ ಕನಸು ಕಟ್ಟಿಕೊಂಡು ಯಾವುದೇ ಕೋಚಿಂಗ್ ಸೆಂಟರ್ ಸಹಕಾರ ಇಲ್ಲದೆ ಸ್ವಯಂ ಕೃಷಿ ಎನ್ನುವಂತೆ ಸತತ 4ನೇ ಪ್ರಯತ್ನದಲ್ಲಿ ಅಂತಿಮ ಗುರಿ ಸಾಧಿಸಿದ್ದಾರೆ.
ಮಧು ಪ್ರಾಥಮಿಕ ಶಿಕ್ಷಣವನ್ನು ಇರಗಸಂದ್ರ, ಕೆಂಬೋಡಿ ಶಾಲೆಯಲ್ಲಿ ಮಾಡಿದ್ದು, ಚಿಂತಾಮಣಿ ತಾಲೂಕಿ ಎನಿಗದಲೆ ನವೋದಯ ಶಾಲೆಯಲ್ಲಿ(JNU) ಹತ್ತನೆ ತರಗತಿವರಿಗೂ ವಿದ್ಯಾಭ್ಯಾಸ ಮಾಡಿ,ಕೋಲಾರದ ವಿದ್ಯಾ ಜ್ಯೋತಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಬೆಂಗಳೂರು ಹೆಬ್ಬಾಳದ ಜಿಕೆವಿಕೆ ಮಹಾವಿದ್ಯಾಲಯದಲ್ಲಿ ಕೃಷಿ ಬಿಎಸ್ಸಿ ಮುಗಿಸಿರುವಂತ ಮಧು ಪದವಿಯಲ್ಲಿ ವ್ಯಾಸಂಗ ಮಾಡುವಾಗಲೆ ಯುಪಿಎಸ್ಸಿ ಪರೀಕ್ಷೆ ಬರೆಯಬೇಕು ಎಂಬ ಗುರಿ ಇಟ್ಟುಕೊಂಡು ಪೂರಕವಾಗಿ ಯೋಜನೆ ರೂಪಿಸಿಕೊಂಡು ಎರಡು ಬಾರಿ ಪ್ರಯತ್ನಿಸಿ ವಿಫಲಾಗಿದ್ದು ಮೂರನೇ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ ಎಂದು ಮಧು ಹೇಳುತ್ತಾರೆ.
ಯುಪಿಎಸ್ಸಿಯಲ್ಲಿ ಸಿಎಸ್ಇ 2024ರಲ್ಲಿ ಕರ್ನಾಟಕ ಸಾಧಕರು
ಆರ್ ರಂಗ ಮಂಜು – 24ನೇ ರ್ಯಾಂಕ್
ವಿಭೋರೆ ಮೆಂಡಿರಟ್ಟ – 389ನೇ ರ್ಯಾಂಕ್
ಪ್ರತಿವಾ ಲಾಮ – 461ನೇ ರ್ಯಾಂಕ್
ರಾಹುಲ್ ಸಿ ಯರತ್ನೇಳಿ – 462ನೇ ರ್ಯಾಂಕ್
ಪರಮಿತ ಮಲಕರ್ – 477ನೇ ರ್ಯಾಂಕ್
ಭಾನು ಪ್ರಕಾಶ್ – 523ನೇ ರ್ಯಾಂಕ್
ಅಭಿಶೀಲ್ ಜೈಶ್ವಾಲ್ – 538ನೇ ರ್ಯಾಂಕ್
ಎ.ಮಧು – 544ನೇ ರಾಂಕ್
ವರುಣ್ ಕೆ ಗೌಡ – 565ನೇ ರ್ಯಾಂಕ್
ಭರತ್ ಸಿ ಯರಮ್ – 567ನೇ ರ್ಯಾಂಕ್
ಸ್ವಪ್ನಿಲ್ ಭಾಗಲ್ – 620ನೇ ರ್ಯಾಂಕ್
ಸಂಪ್ರೀತ್ ಸಂತೋಷ್ – 652ನೇ ರ್ಯಾಂಕ್
ಟಿ ವಿಜಯಕುಮಾರ್ – 894ನೇ ರ್ಯಾಂಕ್
ಹನುಮಂತಪ್ಪ ನಂದಿ – 910ನೇ ನೇ ರ್ಯಾಂಕ್
ವಿಶಾಖ ಕದಂ – 962ನೇ ರ್ಯಾಂಕ್
ಧನ್ಯಾ ಕೆ ಎಸ್ – 982ನೇ ರ್ಯಾಂಕ್