ಶ್ರೀನಿವಾಸಪುರ:ಶ್ರೀನಿವಾಸಪುರ-ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀಸಗಾನಹಳ್ಳಿ-ಅರಕೇರಿ ಗೇಟ್ ನಡುವೆ ಮ್ಯಾಂಗೋವ್ಯಾಲಿ ಹೋಟೆಲ್ ಬಳಿ ರಸ್ತೆಯಲ್ಲಿ ಕೆಟ್ಟುನಿಂತ ಟಿಪ್ಪರ್ ಲಾರಿಗೆ ಹಿಂದಿನಿಂದ ಕಂಟೈನರ್ ಲಾರಿ ಬಡಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇಂದು ನಡೆದಿದೆ.
ಮುಂಜಾನೆ 5 ಗಂಟೆ ಸಮಯದಲ್ಲಿ ನಡೆದಿರುವ ಅಪಘಾತದಲ್ಲಿ ಮೃತ ಪಟ್ಟಿರುವ ವ್ಯಕ್ತಿಯನ್ನು ಶ್ರೀನಿವಾಸಪುರ ತಾಲೂಕಿನ ಶಿವಪುರದ ಬಾಬು(40)ಎಂದು ಗುರುತಿಸಲಾಗಿದೆ.
ಮುಂಜಾನೆ ನಸುಕಿನಲ್ಲಿ ಮುಳಬಾಗಿಲು ಕಡೆಯಿಂದ ಬಂದಂತ ಟಿಪ್ಪರ್ ಲಾರಿ ರಸ್ತೆಯಲ್ಲಿ ಕೆಟ್ಟುನಿಂತಿದ್ದು ಅದನ್ನು ರೀಪೇರಿ ಮಾಡಲು ಶಿವಪುರದ ಬಾಬು ಹಾಗು ಸಹಾಯಕ ಮುನೀಂದ್ರಬಾಬು ಲಾರಿ ಇಳಿದು ರಿಪೇರಿ ಮಾಡುತ್ತಿದ್ದರು ಈ ಸಂದರ್ಭದಲ್ಲಿ ಮುಳಬಾಗಿಲು ಕಡೆಯಿಂದ ಅತಿ ವೇಗವಾಗಿ ಬಂದಂತ ಕಂಟೈನರ್ ಲಾರಿ ನಿಂತಿದ್ದ ಟಿಪ್ಪರ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೋಡದಿದೆ ಹೋಡೆದ ರಭಸಕ್ಕೆ ನಿಂತಿದ್ದ ಟಿಪ್ಪರ್ ಮುಂದೆ ಚಲಿಸಿ ಪಕ್ಕಕ್ಕೆ ಉರಳಿ ಬಿದಿದೆ ರಸ್ತೆಯಲ್ಲಿ ರಿಪೇರಿ ಮಾಡುತ್ತಿದ್ದ ಶಿವಪುರದ ಬಾಬು ತಲೆ ಮೇಲೆ ಲಾರಿ ಹರಿದಿದ್ದು ಸ್ಥಳದಲ್ಲೆ ಬಾಬು ಮೃತ ಪಟ್ಟಿರುತ್ತಾನೆ.ಸಹಾಯಕನಾಗಿದ್ದ ಮುನೀಂದ್ರಬಾಬು ಕಾಲುಗಳ ಮೇಲೆ ಟಿಪ್ಪರ್ ಹರಿದ ಪರಿಣಾಮ ಎರಡು ಕಾಲುಗಳು ಗಂಭೀರವಾಗಿ ಸಂಪೂರ್ಣವಾಗಿ ಸ್ವಾಧಿನ ಕಳೆದುಕೊಂಡಿದೆ ಎಂದಿದ್ದು ಈತನನ್ನು ಕೋಲಾರದ ಆಸ್ಪತ್ರೆಗೆ ದಾಖಲಿಸಿರುತ್ತಾರೆ.ಪ್ರತ್ಯಕ್ಷ ದರ್ಶಿಗಳು ಹೇಳುವಂತೆ ತಲೆ ಮೇಲೆ ಲಾರಿ ಹರಿದಿರುವ ಅಪಘಾತ ಅತ್ಯಂತ ಭೀಕರವಾಗಿತ್ತು ಎನ್ನುತ್ತಾರೆ
ಹೊಗಳಗೆರೆ ಕ್ರಾಸ್ ನಲ್ಲಿ ಅಪಘಾತ
ಶ್ರೀನಿವಾಸಪುರ-ಮುಳಬಾಗಿಲು ರಸ್ತೆಯಲ್ಲಿ ಶ್ರೀನಿವಾಸಪುರ ಪಟ್ಟಣದ ಹೊರವಲಯದ ಹೊಗಳಗೆರೆ ಕ್ರಾಸ್ ನಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ಚಲಾಯಿಸುತ್ತಿದ್ದ ಚಿಂತಾಮಣಿ ನಿವಾಸಿ ಸಯ್ಯದ್ ಅಲಿಸ್ ಕಾಲುಗಳಿಗೆ ಮತ್ತು ತಲೆಗೆ ತೀವ್ರಪೆಟ್ಟಾಗಿ ಕೋಲಾರದ ಆಸ್ಪತ್ರೆಗೆ ದಾಖಲಾಗಿದ್ದಾರೆ.ಎರಡು ಅಪಘಾತಗಳ ಪ್ರಕರಣ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ. ಟಾಟಾ ಏಸ್ ವಾಹನ ಸಂಪೂರ್ಣವಾಗಿ ಜಕಂ ಗೊಂಡಿದ್ದು ಮುಂಬಾಗ ಪೂರ್ತಿಯಾಗಿ ರಕ್ತಮಯವಾಗಿದೆ. ಎರಡು ಅಪಘಾತದ ಪ್ರಕರಣವನ್ನು ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27