ಶ್ರೀನಿವಾಸಪುರ:ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಗ್ರಾಮದಲ್ಲಿ ಕಟ್ಟಿದ್ದ ಕೇಸರಿ ಧ್ವಜ,ಫ್ಲೆಕ್ಸ್ ಬಂಟಿಕ್ಸ್ ಗಳನ್ನು ಪಂಚಾಯತಿ ಸಿಬ್ಬಂದಿ ತೆರವು ಗೊಳಿಸಿ ಅವುಗಳನ್ನು ಗ್ರಾಮದ ಸ್ಮಶಾನದಲ್ಲಿ ಎಸೆದು ಉದ್ದಟತನ ಮೆರೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಗ್ರಾಮದ ಮನೆಗಳ ಮೇಲೆ ಕಟ್ಟಿದ್ದ ಕೇಸರಿ ಧ್ವಜ ರಾಮನ ಭಾವಚಿತ್ರದ ಪ್ಲೆಕ್ಸ್ಗಳನ್ನು ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಶನಿವಾರ ತರಾತುರಿಯಲ್ಲಿ ತೆರವು ಮಾಡಿದ ಪಂಚಾಯಿತಿ ಸಿಬ್ಬಂದಿ ಸ್ಮಶಾನಕ್ಕೆ ಎಸೆದಿದ್ದಾರೆ ಎಂದು ತಾಲೂಕಿನ ಅಡ್ಡಗಲ್ ಪಂಚಾಯತಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಕೇಸರಿ ಧ್ವಜ,ಫ್ಲೆಕ್ಸ್ ಬಂಟಿಕ್ಸ್ ತೆರವು ವಿಚಾರ ರಾದ್ದಾಂತವಾಗುತ್ತಿದ್ದಂತೆ ಗೌವನಪಲ್ಲಿ ಠಾಣ ಪೋಲಿಸರು ತಕ್ಷಣ ಗ್ರಾಮಕ್ಕೆ ಆಗಮಿಸಿ ಪಂಚಾಯಿತಿ ಅಧಿಕಾರಿ ಹಾಗು ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಕೂರಿಸಿ ಮಾತನಾಡಿ ಸ್ಮಶಾನಕ್ಕೆ ಎಸೆದಿದ್ದ ಧ್ವಜ,ಫ್ಲೆಕ್ಸ್ ಬಂಟಿಕ್ಸ್ ಗಳನ್ನು ಅಲ್ಲಿಂದ ತೆರವು ಮಾಡಿ ಗ್ರಾಮಸ್ಥರ ಸಲಹೆಯಂತೆ ನೀರಿನಲ್ಲಿ ವಿಸರ್ಜಿಸಲು ಸೂಚಿಸಿದ್ದಾಗಿ ಪೋಲಿಸರು ಹೇಳುತ್ತಾರೆ.
ತೆರುವಿಗೆ ಎರಡು ತಿಂಗಳು ಬೇಕಾಯಿತ?
ಇವುಗಳನ್ನು ತೆರವು ಮಾಡಲು ಗ್ರಾಮ ಪಂಚಾಯತಿ ಸಿಬ್ಬಂದಿಗೆ ಎರಡು ತಿಂಗಳು ಬೇಕಾಯಿತ ಎಂದು ಪ್ರಶ್ನಿಸುವ ಗ್ರಾಮದ ಯುವಕರು ಇದು ಇಲ್ಲಿನ ಪಂಚಾಯಿತಿ ಅಧಿಕಾರಿ ಹಾಗು ಸಿಬ್ಬಂದಿ ಬೇಜವಬ್ದಾರಿ ನಡವಳಿಕೆಯ ಪರಿಣಾಮ ಗ್ರಾಮದಲ್ಲಿ ಸೌಹಾರ್ದತೆಗೆ ಧಕ್ಕೆ ಉಂಟುಮಾಡುವಂತಿದೆ ಎನ್ನುತ್ತಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



