ಶ್ರೀನಿವಾಸಪುರ:ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಗುರುವಲೋಳ್ಳಗಡ್ಡ ಗ್ರಾಮದ ಒಂಟಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಹಾಡು ಹಗಲೆ ಕಳ್ಳತನವಾಗಿತ್ತು,ಜನವರಿ 7 ರಂದು ನಡು ಮಧ್ಯಾನಃ ಮನೆಯ ಮಾಲೀಕ ಆನಂದಪ್ಪ ಕೆಲಸದ ನಿಮಿತ್ತ ರಾಯಲ್ಪಾಡುಗೆ ಹೋಗಿದ್ದರೆ ಅವರ ಪತ್ನಿ ಕೂಲಿ ಕೆಲಸಕ್ಕೆ ತೆರಳಿದ್ದರು ಈ ವೇಳೆ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಕಳ್ಳರು ಮನೆಗೆ ನುಗ್ಗಿ ಮನೆಯಲ್ಲಿದ್ದ 25 ಗ್ರಾಂ ತೂಕದ ಎರಡು ನಕ್ಲೆಸ್,55 ಸಾವಿರ ನಗದು, ಮೊಬೈಲ್ ಸಮೇತ ಕದ್ದೊಯಿದ್ದರು.ಮನೆಯ ಮಾಲೀಕ ರಾಯಲ್ಪಾಡು ವಿನಿಂದ ವಾಪಸ್ಸು ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು ಮನೆ ಮಾಲಿಕ ಕಳ್ಳತನ ನಡೆದ ಜನವರಿ 7 ರಂದು ರಾಯಲ್ಪಾಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದ ರಾಯಲ್ಪಾಡು ಪೊಲೀಸರು ಕಾರ್ಯಚರಣೆ ನಡೆಸಿ ಹದಿನೈದು ದಿನಗಳ ಅಂತರದಲ್ಲಿ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಪ್ರಕರಣದ ಬಗ್ಗೆ ಕೋಲಾರ ಜಿಲ್ಲಾ ಎಸ್.ಪಿ. ನಿಖಿಲ್,ಮಾರ್ಗದರ್ಶನದಲ್ಲಿ ರಾಯಲ್ಪಾಡು ಸಬ್ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್, ಸಿಬ್ಬಂದಿ ಲಕ್ಷ್ಮಿನಾರಾಯಣ,ನಾರಾಯಣಸ್ವಾಮಿ, ಸದಾಶಿವ, ಸಂತೋಷ್ ಲಮಾಣಿ ಸೇರಿದಂತೆ ಎರಡು ತಂಡಗಳನ್ನು ರಚಿಸಿಕೊಂಡು ಕಳ್ಳರ ಬೆನ್ನುತ್ತಿದ್ದು ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಸಿಕ್ಕಿರುತ್ತಾರೆ, ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂದಿತ ಕಳ್ಳರು ಆಂಧ್ರಪ್ರದೇಶದ ಹಿಂದೂಪುರದ ಉಪ್ಪಾರಮಹೇಶ್(25)ಚಿಂತಾಮಣಿಯ ಚಿನ್ನಸಂದ್ರದ ಸುಲ್ತಾನ ಪಾಷ(22)ಮುಳಬಾಗಿಲು ತಾಲೂಕಿನ ತಿಪ್ಪದೊಡ್ಡಿ ಗ್ರಾಮದ ಹರಿಬಾಬು(30) ಎಂದು ಗುರತಿಸಲಾಗಿದ್ದು ಇವರು ಬಾಗೇಪಲ್ಲಿ ತಾಲೂಕು ಪಾತಪಾಳ್ಯ ಹಾಗು ಶ್ರೀನಿವಾಸಪುರ ಠಾಣ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಪೋಲಿಸರ ತನಿಖೆಯಲ್ಲಿ ಗೊತ್ತಾಗಿದೆ.
ಕಳ್ಳತನ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ ರಾಯಲ್ಪಾಡು ಪೊಲೀಸರ ಕಾರ್ಯವೈಖರಿ ಬಗ್ಗೆ ರಾಯಲ್ಪಾಡು ಭಾಗದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26